ಮೈಸೂರು : ಸಹಕಾರ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ವರ್ಗಗಳಿಗೆ ಮೀಸಲಾತಿ ನೀಡಬಾರದು ಎಂಬ ಶಾಸಕ ಜಿ.ಟಿ.ದೇವೇಗೌಡರ ಹೇಳಿಕೆ ಖಂಡಿಸಿ ಜಿ.ಟಿ.ದೇವೇಗೌಡರ ಫೋಟೋ ದಹಿಸಿ ದಲಿತ ಮುಖಂಡರು ಪ್ರತಿಭಟನೆ ನಡೆಸಿದರು.
ನಗರದ ಅಶೋಕ ವೃತ್ತದಲ್ಲಿ ಸಮಾವೇಶಗೊಂಡ ನೂರಾರು ಮಂದಿ ಜಿ.ಟಿ.ದೇವೇಗೌಡರ ಪೋಟೊ ದಹನ ಮಾಡಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಮಾಜಿ ಮಹಾಪೌರ ಪುರುಷೋತ್ತಮ್, ಸಹಕಾರ ಕ್ಷೇತ್ರ ಯಾವ ಉದ್ದೇಶದಿಂದ ಸ್ಥಾಪನೆ ಆಗಿದೆ ಎಂದು ಜಿ.ಟಿ.ದೇವೇಗೌಡ ಅವರು ಇನ್ನೂ ಅರ್ಥ ಮಾಡಿಕೊಂಡಿಲ್ಲ. ಅದು ಒಂದು ವರ್ಗಕ್ಕೆ ಸೀಮಿತ ಅಲ್ಲ. ಪ್ರತೀ ಬಡವನಿಗೂ ಅವಕಾಶ ಸಿಗಬೇಕು. ಆದರೆ, ೪೫ ವರ್ಷ ನಿರಂತರ ಎಲ್ಲಾ ಸವಲತ್ತುಗಳನ್ನು ಜಿ.ಟಿ.ದೇವೇಗೌಡ ಪಡೆದಿದ್ದಾರೆ. ಪ್ರತೀ ವಿಚಾರವನ್ನು ತಾನೇ ಮನದಟ್ಟು ಮಾಡಿಕೊಂಡು ಸಹಕಾರ ಕ್ಷೇತ್ರದ ಅರಿವು ಬೇರೆ ಯಾರಿಗೂ ಇರಬಾರದು ಎಂದುಕೊಂಡಿದ್ದಾರೆ. ಅವರು ಯಾವ ವಿವಿಯಲ್ಲಿ ಪ್ರೊಫೆಸರ್ ಆಗಿದ್ದರು. ಅವರೇನು ಆರ್ಥಿಕ ತಜ್ಞರೇ? ಸಹಕಾರ ಕಾಯ್ದೆ ನಿಮ್ಮ ಪರಿಮಿತಿಯಲ್ಲಿ ಮಾತ್ರ ಇರಬೇಕಾ?, ಅದು ಎಲ್ಲರಿಗೂ ವಿಸ್ತಾರ ಆಗಬೇಕು ಎಂದರು.
ಸದನದಲ್ಲಿ ಎಲ್ಲರಿಗೂ ಸಮಾನತೆ ಇರಬೇಕು ಎನ್ನುವ ಬದಲು ಸಹಕಾರ ವಲಯಕ್ಕೆ ಮೀಸಲಾತಿ ಕೊಟ್ಟರೆ ಹಾಳಾಗುತ್ತದೆ ಎನ್ನುತ್ತೀರಿ ಎಂದರೆ ನಿಮ್ಮ ಕೊಳಕು ಮನಸ್ಸು, ಸ್ವಾರ್ಥ ಹೇಗಿದೆ ಎಂದು ಗೊತ್ತಾಗುತ್ತದೆ. ದಲಿತರ, ಹಿಂದುಳಿದ ವರ್ಗದವರ ವೋಟು, ಅಽಕಾರ ಪಡೆದು, ನ್ಯಾಯ ಬಿಟ್ಟು ಅನ್ಯಾಯದ ಮಾತುಗಳನ್ನು ಆಡಿದ್ದೀರಿ. ನಿಮ್ಮ ಮೇಲೆ ಕಾನೂನು ಚೌಕಟ್ಟಿನಲ್ಲಿ ಕೇಸ್ ದಾಖಲು ಮಾಡಬೇಕು. ನೀವು ರಾಜೀನಾಮೆ ಕೊಡುವವರೆಗೆ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ನಗರ ಪಾಲಿಕೆ ಮಾಜಿ ಸದಸ್ಯೆ ಪಲ್ಲವಿ ಬೇಗಂ, ಸುನಿಲ್, ವಿಶ್ವ, ಆಟೋ ಪುಟ್ಟ, ದೇವನೂರು ಪುಟ್ಟನಂಜಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.
ಹೆಚ್.ಡಿ.ಕೋಟೆ : ತಾಲ್ಲೂಕಿನ ಕಬಿನಿ ಹಿನ್ನೀರು ಪ್ರದೇಶ, ನಾಗರಹೊಳೆ-ಬಂಡೀಪುರ ಅರಣ್ಯ ವ್ಯಾಪ್ತಿ ಹಾಗೂ ಪರಿಸರ ಸಂವೇದಿ ವಲಯಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ…
ಬೆಂಗಳೂರು : ನೆರೆಯ ತಮಿಳುನಾಡು ಮತ್ತು ಕೇರಳದಂತೆ ಕರ್ನಾಟಕದಲ್ಲೂ ಕಾರ್ಯಾಂಗ ಮತ್ತು ಶಾಸಕಾಂಗದ ನಡುವೆ ಸಂಘರ್ಷ ಏರ್ಪಡುವ ಲಕ್ಷಣಗಳು ಗೋಚರಿಸಿದ್ದು,…
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್ ಅಧಿಕ್ಷಕಿ ಡಾ.ವಿ.ಜೆ.ಶೋಭಾರಾಣಿ ಮಂಡ್ಯ : ಯುವಜನತೆ ರಸ್ತೆ ಸುರಕ್ಷತಾ…
ಮದ್ದೂರು : ತಾಲ್ಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಚಿಂತನೆ ನಡೆದಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು…
ಬೆಂಗಳೂರು : ರಾಜ್ಯದಲ್ಲಿ ಶೇ 75% ರಷ್ಟು ಸಣ್ಣ ಮತ್ತು ಅತೀ ಸಣ್ಣ ರೈತರಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು…
ಹನೂರು : ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹಾಗೂ ದ್ವಿಚಕ್ರ ವಾಹನದಲ್ಲಿ ತೆರಳುವುದಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಅರಣ್ಯ ಇಲಾಖೆ…