ಮೈಸೂರು ನಗರ

ಸ್ಕೂಲು-ಕಾಲೇಜು ಮೆಟ್ಟಿಲು ದಾಟದ ಪ್ರಿಯಾಂಕ ಖರ್ಗೆಗೆ ಆರ್‌ಎಸ್‌ಎಸ್‌ ಬಗ್ಗೆ ಏನ್ ಗೊತ್ತು?: ಪ್ರತಾಪ್‌ ಸಿಂಹ ಪ್ರಶ್ನೆ

ಮೈಸೂರು: ಆರ್‌ಎಸ್‌ಎಸ್ ಗಾಳಿ ತಮ್ಮತ್ತ ಸುಳಿಯಬಾರದು ಎಂಬ ಸಚಿವ ಪ್ರಿಯಾಂಕ ಖರ್ಗೆ ಟ್ವೀಟ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸ್ಕೂಲ್ ಕಾಲೇಜ್ ಮೆಟ್ಟಿಲು ದಾಟದ ಪ್ರಿಯಾಂಕ ಖರ್ಗೆಗೆ ಆರ್‌ಎಸ್‌ಎಸ್‌ ಬಗ್ಗೆ ಏನೂ ಗೊತ್ತು? ದೇಶ ಕಟ್ಟಿದ ನೂರಾರು ನಾಯಕರನ್ನು ಸೃಷ್ಟಿ ಮಾಡಿದ್ದು ಆರ್‌ಎಸ್‌ಎಸ್.‌ ದೇಶ ಆಳುವ ನಾಯಕರಿಗೆ ಸಂಸ್ಕಾರ, ಜ್ಞಾನ ತುಂಬಿದ್ದು ಆರ್‌ಎಸ್‌ಎಸ್. ನೆಹರು ದೇಶಕ್ಕೆ ಕೊಡುಗೆ ನೀಡಿದ್ದಕ್ಕಿಂತಾ ನಷ್ಟ ಮಾಡಿದ್ದೆ ಹೆಚ್ಚು.

ಪ್ರಿಯಾಂಕ ಖರ್ಗೆಗೆ ಕನಿಷ್ಟ ಜ್ಞಾನವೂ ಇಲ್ಲ. ಮೈಸೂರು ಮಹಾರಾಜರನ್ನು ನಾವು ದಿನ ಸ್ಮರಿಸುತ್ತೇವೆ. ಕಲಬುರಗಿ ಆಳಿದ ಸುಲ್ತಾನರೂ, ನವಾಬರು ಆ ಬಗ್ಗೆ ಕೊಟ್ಟ ಕೊಡುಗೆ ಏನೂ? ಸುಲ್ತಾನ್, ನವಾಬರ ನಂತರ ಬಂದ ಸುಲ್ತಾನ್ ನವಾಬರೆ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಖರ್ಗೆ. ಮೂಗು ಹಿಡಿದುಕೊಂಡು ವಿಷ ಗಾಳಿ ಕುಡಿಯುತ್ತಾ ಕಲಬುರಗಿ ಯಲ್ಲಿ ಓಡಾಡಬೇಕು.ಆ ಪರಿಸ್ಥಿತಿ ಸೃಷ್ಟಿ ಮಾಡಿದ್ದು ಇವತ್ತಿನ ನವಾಬರು, ಸುಲ್ತಾನರಾದ ಖರ್ಗೆ ಫ್ಯಾಮಿಲಿ. ಪ್ರಿಯಾಂಕ ಖರ್ಗೆ, ಸಂತೋಷ್ ಲಾಡ್ ಬರೀ ಔಟ್ ಆಪ್ ಸಿಲಬಸ್ ಮಾತನಾಡುತ್ತಾರೆ. ಕಾಗೆ ಥರ ಯಾವಾಗಲೂ ಬರೀ ಕಾಕಾ ಎನ್ನುವುದಷ್ಟೆ ಪ್ರಿಯಾಂಕ ಖರ್ಗೆ, ಸಂತೋಷ್ ಲಾಡ್ ಕೆಲಸ ಎಂದು ಕಿಡಿಕಾರಿದರು.

ಇನ್ನು ಆನ್‌ಲೈನ್ ಗೇಮ್‌ನಿಂದ ರಾಜ್ಯದ ಆದಾಯಕ್ಕೆ ನಷ್ಟ ಎಂಬ ಪ್ರಿಯಾಂಕ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ ಅವರು, ಯಾರ ಮಕ್ಕಳು ಹಾಳಾದರೆ ಅವರಿಗೆ ಏನೂ? ಅವರಿಗೆ ಆದಾಯ ಬೇಕು ಅಷ್ಟೆ. ಡ್ರೀಮ್ ಲೆವನ್ ರೂಪದ ಎಲ್ಲಾ ಗೇಮ್ ಬ್ಯಾನ್ ಮಾಡಬೇಕು. ಪ್ರಿಯಾಂಕ ಖರ್ಗೆ ಬಾಯಲ್ಲಿ ದಲಿತ ಎನ್ನುತ್ತಾ ಬೆಂಗಳೂರಿನ ಸದಾಶಿವನಗರದಲ್ಲಿ ಅರಾಮಾಗಿ ಇದ್ದಾರೆ. ಅವರಿಗೆ ಬಡ ಕುಟುಂಬದ ಸ್ಥಿತಿ ಏನೂ ಗೊತ್ತು. ಆದಾಯ ಹೆಚ್ಚು ಬೇಕಾದರೆ ವೇಶ್ಯಾವಾಟಿಕೆಯನ್ನು ಪ್ರಿಯಾಂಕ ಖರ್ಗೆ ಕಾನೂನು ಬದ್ಧ ಮಾಡಲಿ ಬಿಡಿ. ಅದರಿಂದಲ್ಲೂ ಹೆಚ್ಚು ಆದಾಯ ಬರುತ್ತೆ ಎಂದು ವಾಗ್ದಾಳಿ ನಡೆಸಿದರು.

ಇನ್ನು ಕಳೆದ ಒಂದು ತಿಂಗಳಿಂದ ಮಾಧ್ಯಮ, ಸಾಮಾಜಿಕ ಮಾಧ್ಯಮಗಳಲ್ಲಿ ಧರ್ಮಸ್ಥಳದ್ದೇ ಚರ್ಚೆ ಆಗಿದೆ. ಆದರೆ ಒಂದೂ ಕಡೆಯೂ ಸಣ್ಣ ಮೂಳೆಯೂ ಸಿಗಲಿಲ್ಲ. ಇದೆಲ್ಲ ವ್ಯವಸ್ಥಿತ ಪಿತೂರಿ ಎಂದು ಸ್ಪಷ್ಟವಾಗ್ತಿದೆ. ಅವರೇ ತಮ್ಮನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಇದಕ್ಕಾಗಿ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಒಪ್ಪಿಸಬೇಕು. ಎಸ್‌ಡಿಪಿಐಗೂ ಧರ್ಮಸ್ಥಳಕ್ಕೂ ಏನು ಸಂಬಂಧ.? ಯಾಕಾಗಿ ಅವರು ಇಷ್ಟೆಲ್ಲ ಮಾಡುತ್ತಿದ್ದಾರೆ. ಒಬ್ಬೊಬ್ಬರೂ ಕ್ರಮೇಣ ಬೆತ್ತಲಾಗುತ್ತಿದ್ದಾರೆ. ಹಾಗಾಗಿ ಇದರ ಹಿಂದೆ‌ ಯಾರಿದ್ದಾರೆ ಎಂಬುದು ಗೊತ್ತಾಗಬೇಕು. ಪ್ರಕರಣವನ್ನ ಕೂಡಲೇ ಎನ್‌ಐಎಗೆ ವಹಿಸಬೇಕು ಎಂದು ಆಗ್ರಹಿಸಿದರು.

ಆಂದೋಲನ ಡೆಸ್ಕ್

Recent Posts

ರೈಲ್ವೆ ಮೇಲ್ಸೇತುವೆ; ಭೂ ದರ ಕಗ್ಗಂಟು ಬಗೆಹರಿಯುವುದೇ?

ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…

25 mins ago

ಜನವರಿಗೆ ಚಾ.ಬೆಟ್ಟದ ಅಭಿವೃದ್ಧಿ ಕಾಮಗಾರಿ ಶುರು

ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…

31 mins ago

ಕೋಳಿ ಮೊಟ್ಟೆಗೆ ಬರ: ಏರಿದ ದರ

ಗಿರೀಶ್ ಹುಣಸೂರು ಬಿಡಿ ಮೊಟ್ಟೆಗೆ ೭.೫೦ ರೂ.; ರಫ್ತು ಹೆಚ್ಚಳದಿಂದ ಭಾರೀ ಹೊಡೆತ  ಮೈಸೂರು: ಮಾಗಿ ಚಳಿಗಾಲ ಆರಂಭ, ಚಂಡಮಾರುತದಿಂದ ಹವಾಮಾನ…

40 mins ago

ಹಣ ದ್ವಿಗುಣಗೊಳಿಸುವುದಾಗಿ ೨೮ ಲಕ್ಷ ರೂ. ವಂಚನೆ; ದೂರು ದಾಖಲು

ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…

10 hours ago

ಅಂಬಳೆ: ಚಾಮುಂಡೇಶ್ವರಿ ದೇಗುಲದಲ್ಲಿ ಕಳ್ಳತನ

ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…

10 hours ago