ಮೈಸೂರು ನಗರ

ಪತ್ರಕರ್ತರ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ:‌ ಅಂದೋಲನ ಚಾಂಪಿಯನ್‌

ಮೈಸೂರು: ಪತ್ರಕರ್ತರ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿಯ ರೋಚಕ ಫೈನಲ್‌ನಲ್ಲಿ ‘ಆಂದೋಲನ’ ದಿನ ಪತ್ರಿಕೆ ತಂಡ ಭರ್ಜರಿ ಜಯ ಸಾಧಿಸಿತು.

ನಗರದ ಮೈಸೂರು ವಿಶ್ವವಿದ್ಯಾನಿಲಯದ ಮಿನಿ ಹಾಕಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೌಂಡರಿ-ಸಿಕ್ಸರ್‌ಗಳ ಹೊಳೆ ಹರಿಯಿತು. 88 ರನ್‌ಗಳ ಬೃಹತ್ ಮೊತ್ತವನ್ನು ವಿಕೆಟ್ ನಷ್ಟವಿಲ್ಲದೆ 1 ಓವರ್ ಬಾಕಿ ಇರುವಂತೆ ಚಚ್ಚಿದ ‘ಆಂದೋಲನ’ ಗೆಲುವಿನ ನಗೆ ಬೀರಿತು.

ಟಾಸ್ ಗೆದ್ದು ಫಿಲ್ಡಿಂಗ್ ಆಯ್ದುಕೊಂಡ ಆಂದೋಲನ ತಂಡದ ಲೆಕ್ಕಚಾರವನ್ನು ವಿಜಯವಾಣಿ ತಂಡದ ರೋಹಿತ್, ಆದರ್ಶ, ಅಂಟೋನಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ಬದಲು ಮಾಡಿತು. ಬೌಂಡರಿ ಸಿಕ್ಸರ್‌ಗಳನ್ನು ಸಿಡಿಸಿ ಅಬ್ಬರಿಸಿದ ಪರಿಣಾಮ ನಿಗದಿತ 6 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 88 ರನ್ ಗಳಿಸಿತು.

ಬೃಹತ್ ಮೊತ್ತ ಗುರಿ ಬೆನ್ನತ್ತಿದ ‘ಆಂದೋಲನ’ ತಂಡದ ನಾಯಕ ಚಿರಂಜೀವಿ ಮತ್ತು ಸುರೇಶ್.ಎಂ ಜೋಡಿಯೂ ವಿಜಯವಾಣಿ ತಂಡದ ಬೌಲರ್‌ಗಳನ್ನು ದಂಡಿಸಿದರು. ಬೌಂಡರಿಗಳ ಸುರಿಮಳೆಗೈದರು.

ಪಂದ್ಯದಲ್ಲಿ 5 ಸಿಕ್ಸರ್ 2 ಆಕರ್ಷಕ ಬೌಂಡರಿ ಸಹಿತ 43 ರನ್‌ಗಳಿಸಿದ ಸುರೇಶ್.ಎಂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೇ ಪೈನಲ್‌ನಲ್ಲಿ 41 ರನ್‌ಗಳ ಕೊಡುಗೆ ನೀಡಿ ಟೂರ್ನಿಯುದ್ದಕ್ಕೂ ಬೌಲಿಂಗ್-ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಚಿರಂಜೀವಿ ಸರಣಿ ಶ್ರೇಷ್ಠ ತಮ್ಮದಾಗಿಸಿಕೊಂಡರು. ಆಂದೋಲನ, ಪ್ರತಿನಿಧಿ, ವಿಜಯವಾಣಿ, ಪ್ರಜಾವಾಣಿ, ವಿಜಯ ಕರ್ನಾಟಕ, ಫ್ಲೇಯಿಂಗ್ ೧೧ ತಂಡಗಳು ಭಾಗವಹಿಸಿದ್ದವು.

ಹಿರಿಯ ಪತ್ರಕರ್ತ ಅಂಶಿಪ್ರಸನ್ನ ಕುಮಾರ್ ಅವರು ಬಹುಮಾನ ವಿತರಿಸಿ ಮಾತನಾಡಿ, ಆರೋಗ್ಯದ ಬಗ್ಗೆ ಪತ್ರಕರ್ತರು ಕಾಳಜಿ ವಹಿಸಬೇಕು. ಸದಾ ಬ್ರೇಕಿಂಗ್ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪತ್ರಕರ್ತರು ಮಾನಸಿಕವಾಗಿ ದೈಹಿಕವಾಗಿ ಅತ್ಯಂತ ಚಟುವಟಿಕೆಯಿಂದ ಇರಲು ಕ್ರೀಡೆ ಸಹಕಾರಿ ಎಂದು ಹೇಳಿದರು.

ಪತ್ರಕರ್ತರು ವೃತ್ತಿ ತ್ಯಜಿಸುವ ತನಕವೂ ಕೆಲಸದ ಒತ್ತಡ ಇರುತ್ತದೆ. ದೀರ್ಘ ಕಾಲ ಕರ್ತವ್ಯ ನಿರ್ವಹಿಸಬೇಕಾದರೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಬೇಕು. ಎಲ್ಲ ಪತ್ರಕರ್ತರು ಒಂದೆಡೆ ಸೇರಿ ಕ್ರೀಡಾಸ್ಪೂರ್ತಿ ಮೆರದಿರುವುದು ಪ್ರಶಂಸನೀಯ. ತಿಂಗಳಿಗೊಮ್ಮೆ ಈ ರೀತಿಯ ಕ್ರೀಡಾಕೂಟ ಸಂಘಟಿಸುಂತೆ ಸಲಹೆ ನೀಡಿದರು.

ಪ್ರಸ್ತುತ ದಿನಮಾನಗಳಲ್ಲಿ ಪತ್ರಕರ್ತರು ತಮ್ಮ ಆರೋಗ್ಯದ ರಕ್ಷಣೆಗೆ ಆದ್ಯತೆ ಕೊಡಬೇಕು. ಕುಟುಂಬದ ಸದಸ್ಯರಿಗೂ ಸಮಯ ಕೊಡಬೇಕು ಎಂದು ತಿಳಿಸಿದರು.

ಆಂದೋಲನ ಡೆಸ್ಕ್

Recent Posts

ನೆತನ್ಯಾಹು ಬದುಕಿದ್ದಾರೆ, ಹತ್ಯೆ ವದಂತಿ ಸುಳ್ಳು ; ಇಸ್ರೇಲ್‌

ಜೆರುಸಲೆಮ್‌ : ಪಶ್ಚಿಮ ಏಷ್ಯಾದ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದೆ. ಈ ವೇಳೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರನ್ನು…

12 mins ago

ಕೆರೆ ಅಭಿವೃದ್ಧಿಪಡಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು : ಹನೂರು ಶಾಸಕ ಮಂಜುನಾಥ್‌

ಹನೂರು : ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸಿ ನೀರಾವರಿ ವ್ಯವಸ್ಥೆ ಕಲ್ಪಿಸುವುದರ ಮೂಲಕ ರೈತರಿಗೆ ವ್ಯವಸಾಯಕ್ಕೆ ಹೆಚ್ಚಿನ…

57 mins ago

ಹನೂರು | ಸುಗಮ ಸಂಚಾರಕ್ಕೆ 4.5ಕೋಟಿ ವೆಚ್ಚದಲ್ಲಿ 2 ಸೇತುವೆ ನಿರ್ಮಾಣ

ಹನೂರು : ಮಳೆಗಾಲದ ಸಂದರ್ಭದಲ್ಲಿ ರೈತರು ಹಾಗೂ ನೆರೆಯ ತಮಿಳುನಾಡಿಗೆ ತರಕಾರಿ ತೆಗೆದುಕೊಂಡು ಹೋಗುತ್ತಿದ್ದ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆ,…

1 hour ago

ರಾಜ್ಯದ 2 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ : ಇಲ್ಲಿದೆ ಮಾಹಿತಿ

ಬೆಂಗಳೂರು : ಭಾರತೀಯ ಚುನಾವಣಾ ಆಯೋಗವು(ಇಸಿಐ) ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಾಂಕವನ್ನು ಭಾನುವಾರ ಪ್ರಕಟಿಸಿದೆ. ಈ ಕುರಿತು…

2 hours ago

ಪಂಚ ರಾಜ್ಯಗಳ ಚುನಾವಣೆಗೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ

ಹೊಸದಿಲ್ಲಿ : 4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭಾ ಚುನಾವಣೆ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗ(ಇಸಿಐ) ಅಧಿಕೃತವಾಗಿ…

2 hours ago

ಸೌದಿ ಅರೇಬಿಯಾದಲ್ಲಿರುವ ಅಮೇರಿಕಾದ ವಾಯುನೆಲೆಯ ಮೇಲೆ ಇರಾನ್‌ ದಾಳಿ

ಟೆಹರಾನ್:‌ ಯುಎಸ್‌ ಮಿಲಿಟರಿ ಬಳಸುತ್ತಿದ್ದ ಸೌದಿ ಅರೇಬಿಯಾದ ಅಲ್‌ ಖಾರ್ಜ್‌ ವಾಯುನೆಲೆಯ ಮೇಲೆ ಇರಾನ್‌ ಕ್ಷಿಪಣಿ ದಾಳಿ ನಡೆಸಿದೆ. ಕೆಲವು…

3 hours ago