ಮೈಸೂರು ನಗರ

ಸಿದ್ದರಾಮಯ್ಯಗೆ ಪ್ರಧಾನಿ ಮೋದಿ ಸಾಧನೆ ಅಳೆಯುವ ಅರ್ಹತೆಯಿಲ್ಲ: ಮಾಜಿ ಸಂಸದ ಪ್ರತಾಪ್‌ ಸಿಂಹ

ಮೈಸೂರು: ರಾಜ್ಯದ ಜನರಿಗೆ ಪ್ರತಿನಿತ್ಯ ಟೋಪಿ ಹಾಕುವ ವ್ಯಕ್ತಿಗೆ ಪ್ರಧಾನಿ ನರೇಂದ್ರ ಮೋದಿ ಸಾಧನೆ ಅಳೆಯುವ ಅರ್ಹತೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಂಸದ ಪ್ರತಾಪ್‌ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿಯಾಗಿ ನರೇಂದ್ರ ಮೋದಿ 11 ವರ್ಷ ಆಡಳಿತ ಪೂರೈಸಿದ್ದು, ಮೋದಿ ಆಡಳಿತ ಶೂನ್ಯ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾತನಾಡಿದ ಮಾಜಿ ಸಂಸದ ಪ್ರತಾಪ್‌ ಸಿಂಹ ಅವರು, 2 ವರ್ಷದಿಂದ ರಾಜ್ಯದಲ್ಲಿ ಸಿಎಂ ಆಗಿದ್ದೀರಿ, ನಿಮ್ಮ ಸಾಧನೆ ಏನು? ರಾಜ್ಯದ ಜನರ ಮೇಲೆ ಸಾಲ ಏರಿರುವುದು ನಿಮ್ಮ ಸಾಧನೆ. ಕೊಲೆ ಸುಲಿಗೆ ಜಾಸ್ತಿಯಾಗಿದೆ. ಯುವನಿಧಿ ಕೊಡ್ತೀವಿ ಎಂದು ಯುವಕರಿಗೆ ಟೋಪಿ ಹಾಕಿದ್ದೀರಿ. ಅನ್ನಭಾಗ್ಯ, ಗೃಹಲಕ್ಷ್ಮೀ ಕೊಡ್ತೀವಿ ಎಂದು ಟೋಪಿ ಹಾಕಿದ್ರಿ, ಇದೇ ನಿಮ್ಮ ಸಾಧನೆನಾ.? ಜನರಿಗೆ ಪ್ರತಿನಿತ್ಯ ಟೋಪಿ ಹಾಕುವ ವ್ಯಕ್ತಿಗೆ ಪ್ರಧಾನಿ ನರೇಂದ್ರ ಮೋದಿ ಸಾಧನೆ ಅಳೆಯುವ ಅರ್ಹತೆ ಇಲ್ಲ ಎಂದು ಸಿಎಂಗೆ ತಿರುಗೇಟು ನೀಡಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಬೆಂಗಳೂರು-ಮೈಸೂರು ಹೈವೇ ಮಾಡಿದ್ದು ಮೋದಿ. ರಿಂಗ್ ರೋಡ್ ಎನ್‌ಎಚ್ ಮೇಲ್ದರ್ಜೆಗೆ ಏರಿಸಿದ್ದು ಮೋದಿ. ಮೈಸೂರು ಏರ್‌ಪೋರ್ಟ್‌ಗೆ ವಿಮಾನ ಬರಲು ಕಾರಣ ಮೋದಿ. ಪಾಸ್‌ಪೋರ್ಟ್ ಸೇವೆ ಕೇಂದ್ರಕ್ಕೆ ಕಾರಣ ಮೋದಿ. ಹಳೇ ಡಿಸಿ ಆಫೀಸ್ ಮ್ಯೂಸಿಯಂ ಮಾಡಲು ಹಣ ಕೊಟ್ಟಿರೋದು ಮೋದಿ. ಚಾಮುಂಡಿಬೆಟ್ಟದ ಅಭಿವೃದ್ಧಿಗೆ 45 ಕೋಟಿ ಹಣ ಕೊಟ್ಟಿದ್ದು ಮೋದಿ. ನೀವು ಮದುವೆ, ಮುಂಜಿ ಎಂದು ಓಡಾಡಿಕೊಂಡು ಇದ್ದೀರಲ್ಲ, ಆ ರೀತಿ ಪ್ರಧಾನಿ ಮೋದಿ ಮಾಡಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಆಂದೋಲನ ಡೆಸ್ಕ್

Recent Posts

ಮೈವಿವಿಯಲ್ಲಿ ಫ್ರೆಂಚ್‌ ಭಾಷೆ ವಿಭಾಗ ಪುನರಾಂಭಿಸಲು ಚರ್ಚೆ

ಮೈಸೂರು : ಮೈಸೂರು ವಿಶ್ವವಿದ್ಯಾನಿಲಯಕ್ಕೆ ಫ್ರಾನ್ಸ್ ದೇಶದ ರಾಯಭಾರಿಗಳ ನಿಯೋಗ ಭೇಟಿ ನೀಡಿ ಫ್ರೆಂಚ್ ಭಾಷೆ ವಿಭಾಗವನ್ನು ಮರು ಆರಂಭಿಸುವ…

10 mins ago

ʼಗ್ಯಾರಂಟಿʼ ಜನರ ಬದುಕಿನ ಆಧಾರ

ಬೆಳಗಾವಿ(ಸುವರ್ಣ ವಿಧಾನ ಸೌಧ) : ಗ್ಯಾರಂಟಿ ಯೋಜನೆಗಳ ಮೂಲಕ ನಾಗರಿಕರಿಗೆ ನೇರವಾಗಿ ಹಣ ವರ್ಗಾವಣೆಯಿಂದ ಅವರ ಆರ್ಥಿಕ ಬದುಕು ಬಹಳಷ್ಟು…

29 mins ago

ಪತ್ರಿಕೋದ್ಯಮ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

ಮೈಸೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ 2025-26ನೇ ಸಾಲಿನ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟ…

54 mins ago

ತೊಗರಿ – ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯ ; ಸಿಎಂ‌ ಪತ್ರದೊಂದಿಗೆ ಕೇಂದ್ರ ಸಚಿವರಿಗೆ ಮನವಿ ನೀಡಿದ ಸಂಸದರ ನಿಯೋಗ

ಹೊಸದಿಲ್ಲಿ : ಕರ್ನಾಟಕ ರಾಜ್ಯದಲ್ಲಿ‌ ಭಾರತದ ರಾಷ್ಟ್ರೀಯ ಕೃಷಿ‌ ಸಹಕಾರಿ ಮಾರುಕಟ್ಟೆ ಒಕ್ಕೂಟ ಹಾಗೂ ಭಾರತದ ರಾಷ್ಟ್ರೀಯ ಸಹಕಾರಿ ಗ್ರಾಹಕರ…

1 hour ago

ಹಾಡಿ ಕುಟುಂಬಗಳಿಗೆ ಗ್ಯಾರಂಟಿ ಯೋಜನೆ ತಲುಪಿಸಿ: ಅರುಣ್ ಕುಮಾರ್

ಮೈಸೂರು : ಜಿಲ್ಲೆಯಲ್ಲಿರುವ ಹಾಡಿಗಳಲ್ಲಿ ವಾಸವಾಗಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ತಲುಪಿಸಿ, ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ…

2 hours ago

ಗ್ಯಾರಂಟಿ ಯೋಜನೆಗಳಿಂದಲೇ ರಾಜ್ಯದ ಜನತೆಯ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ: ಕೆ.ಎನ್.ರಾಜಣ್ಣ

ಬೆಳಗಾವಿ: ಗ್ಯಾರಂಟಿ ಯೋಜನೆಗಳಿಂದಲೇ ರಾಜ್ಯದ ಜನತೆಯ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ, ಗ್ಯಾರಂಟಿ ಯೋಜನೆಗಳ ಜೊತೆ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳು ಕೂಡ…

3 hours ago