prathap simha
ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡದಿದ್ದರೆ ಸಂತೋಷ್ ಲಾಡ್‌ಗೆ ತಿಂದಿದ್ದು ಕರಗಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಇಬ್ಬರು ಸಚಿವರು ದಿನ ಬೆಳಗಾದರೆ ಕಾಗೆ ಥರ ಕಾಕಾ ಎನ್ನುತ್ತಾರೆ. ಸಂತೋಷ್ ಲಾಡ್ ನೀವು ಏನು ಮಾತಾಡ್ತಿದ್ದಿರಿ ಅನ್ನೋ ಜ್ಞಾನ ನಿಮಗೆ ಇದ್ಯಾ? ಮೋದಿ ಬಗ್ಗೆ ಮಾತಾಡದೆ ಇದ್ದರೆ ಲಾಡ್‌ಗೆ ತಿಂದಿದ್ದು ಕರಗುವುದಿಲ್ಲ ಎಂದು ಕಿಡಿಕಾರಿದರು.
ಇನ್ನು ಮರಾಠ ಸಮುದಾಯದ ಸಂತೋಷ್ ಲಾಡ್ ಬಾಯಲ್ಲಿ ಶಿವಾಜಿ ರೀತಿ ಮಾತು ಬರುತ್ತಿಲ್ಲ. ಅಫ್ಜಲ್ ಖಾನ್ ರೀತಿ ಮಾತು ಬರುತ್ತಿದೆ. ಸಂತೋಷ್ ಲಾಡ್ ನೀವೇನು ಬಹಳ ಮೇಧಾವಿ ನಾ.? ಸಂತೋಷ್ ಲಾಡ್ ಒಬ್ಬ ತಿಳಿಗೇಡಿ. ನೇಹಾ ಹತ್ಯೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರೆ ಮೋದಿ ಕೇಳ್ರಿ ಅಂತಾರೆ. ಹೀಗಾಗಿ ನೇಹಾ ಹತ್ಯೆ ಮಾಡಿದವನ ಎನ್ ಕೌಂಟರ್‌ಗೆ ಮೋದಿ ಅನುಮತಿ ಏಕೆ ಬೇಕು ಲಾಡ್? ಒಂದು ವರ್ಷವಾಯ್ತು ನೇಹಾಗೆ ನ್ಯಾಯ ಕೊಡಿಸಿದ್ರಾ? ಕಾರ್ಮಿಕ ಇಲಾಖೆಯ ಹೆಲ್ತ್ ಕಿಟ್ ಹಗರಣದ ಕಥೆ ಏನ್ ಆಯ್ತು? ಮೋದಿಗೆ ಹೇಳಿ ಕೊಡುವಷ್ಟು ನೀವು ಬುದ್ದಿವಂತರಾ? ಎಂದು ಪ್ರಶ್ನೆ ಮಾಡಿದರು.
ಇಂದಿರಾಗಾಂಧಿ ಏನು ಕಡಿದು ಕಟ್ಟೆ ಹಾಕಿದ್ರು: ಇನ್ನು ಮುಂದುವರಿದು ಮಾತನಾಡಿದ ಅವರು ಕಳೆದ 1971ರಲ್ಲಿ ಇಂದಿರಾಗಾಂಧಿ ಏನ್ ಕಡಿದು ಕಟ್ಟೆ ಹಾಕಿದ್ರು. ಅವತ್ತಿನ ಯುದ್ದದ ಗೆಲುವನ್ನು ಹಾಳು ಮಾಡಿದ್ದು ನಿಮ್ಮ ಇಂದಿರಾಗಾಂಧಿ ಅದು ನಿಮಗೆಲ್ಲಾ ನೆನಪಿರಲಿ. ಪಹಲ್ಗಾಮ್‌ನಿಂದ ಕನ್ನಡಿಗರನ್ನು ಕರೆದುಕೊಂಡು ಬರಲು ಅವಕಾಶ ಮಾಡಿ ಕೊಟ್ಟಿದ್ದು ಮೋದಿ. ಅದರಲ್ಲಿ ನಿಮ್ಮ ಸಾಧನೆ ಏನಿದೆ ಲಾಡ್? ನಿಮ್ಮ ಅನಿಷ್ಟಕ್ಕೆಲ್ಲ ಮೋದಿ ಕಾರಣ ಅನ್ನೋ ರೀತಿ ಯಾಕೆ ಮಾತಾಡ್ತಿರಿ? ಪಾಕಿಸ್ತಾನ ಮಾತ್ರ ಶತ್ರು ಅಲ್ಲ. ನಮ್ಮ ಜೊತೆಯಲ್ಲೇ ಇಂತಹ ಹಿತಶತ್ರುಗಳು ಟೈಂ ಬಾಂಬ್ ಥರ ಇದ್ದಾರೆ. ಸಂತೋಷ್ ಲಾಡ್‌ಗೆ ಮೈ ತುಂಬಾ ಮೈನಿಂಗ್ ದುಡ್ಡು ಅಂಟಿ ಕೊಂಡಿದೆ. ಹಣದ ಕೊಬ್ಬಿನಿಂದ ಈ ರೀತಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಮೂಡಾ ಹಗರಣಕ್ಕೆ ಸಿಲುಕಿದ ಕಾರಣ ಸಂತೋಷ್ ಲಾಡ್ ಕಾರ್ಮಿಕ ಕಿಟ್ ಹಗರಣದಿಂದ ಬಚಾವ್ ಆದ್ರು. ಇಲ್ಲದೆ ಇದ್ದಿದ್ದರೆ ಎರಡನೇ ಬಾರಿ ರಾಜೀನಾಮೆ ಕೊಡಬೇಕಿತ್ತು. ನಿಮ್ಮ ಹತ್ತಿರ ದುಡ್ಡು ಇರಬಹುದು ಆದರೆ ಪತ್ರಕರ್ತರಿಗೆ ನೈತಿಕತೆ ಇದೆ. ಇದನ್ನು ನೆನಪಿಟ್ಟು ಕೊಳ್ಳಿ ಲಾಡ್ ಎಂದು ಕಿಡಿಕಾರಿದರು.
ಇನ್ನು ಪಾಕಿಸ್ತಾನವೇ ತನ್ನ ಮೇಲೆ ದಾಳಿ ಆಗಿರುವುದಕ್ಕೆ ಸಾಕ್ಷಿ ಕೊಟ್ಟಿದೆ. ಆದರೂ ಭಾರತದಲ್ಲಿ ಕೆಲವರು ತಕರಾರು ಮಾಡುವುದನ್ನು ನಿಲ್ಲಿಸುತ್ತಿಲ್ಲ. ಕಾಂಗ್ರೆಸ್‌ಗೆ ಪಾಕಿಸ್ತಾನದ ಮೇಲೆ ಸದಾ ಪ್ರೀತಿ. ಕಾಂಗ್ರೆಸ್ ಪಾಕಿಸ್ತಾನದ ಪಿತಾಮಹ. ಅದಕ್ಕೆ ಪ್ರೀತಿ ಜಾಸ್ತಿ ಇರುತ್ತೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹುಣಸೂರು : ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುವ ಉದ್ದೇಶದಿಂದ ಅಪಾಯಕಾರಿ ಬೈಕ್ ವೀಲಿಂಗ್ ಮಾಡಿದ 17 ವರ್ಷದ ಅಪ್ರಾಪ್ತ ಯುವಕನನ್ನು…
ಹೊಸದಿಲ್ಲಿ : ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಈ ವ್ಯವಸ್ಥೆಯ ಜೀವಾಳವೇ ಮತದಾರ. ಪ್ರತಿ ವರ್ಷ ಜನವರಿ 25…
ಮೈಸೂರಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪೌರಕಾರ್ಮಿಕರು ಸಮವಸ್ತ್ರ, ಗುಣಮಟ್ಟದ ಬೆಳಗಿನ ಉಪಾಹಾರ ಮೊದಲಾದ ಸೌಲಭ್ಯಗಳಿಲ್ಲದೇ ಬವಣೆ ಪಡುತ್ತಿರುವುದು, ನಗರ ಪಾಲಿಕೆಯಲ್ಲಿ ೮೪…
ದೇಶದ ಪ್ರಗತಿಗೆ ಶಿಕ್ಷಣ ಪ್ರಮುಖವಾಗಿದೆ. ಶಾಲಾ, ಕಾಲೇಜು ಹಂತದ ಪರೀಕ್ಷೆಗಳು ಮತ್ತು ಸರ್ಕಾರಿ ಹುದ್ದೆಗಳ ನೇಮಕಾತಿಗೆ ನಡೆಯುವ ಪರೀಕ್ಷಾ ಕೊಠಡಿಯಲ್ಲಿ…
ಅಂಚೆ ಕಚೇರಿಗಳಲ್ಲಿ ಗ್ರಾಹಕರು ಹಣ ಕಟ್ಟುವ ಉಳಿತಾಯ ಖಾತೆ, ಆರ್‌ಡಿ , ಪಿಪಿಎಫ್, ಎಂಐಎಸ್ ಹಾಗೂ ಅಂಚೆ ಕಚೇರಿಯ ವಿವಿಧ…
ರಾಜ್ಯಗಳ ಆಡಳಿತ ಸಂವಿಧಾನಬದ್ಧವಾಗಿ ನಡೆಯುವಂತೆ ಮೇಲುಸ್ತುವಾರಿಯಾಗಿ ಕೇಂದ್ರ ಸರ್ಕಾರದ ಶಿಫಾರಸಿನಂತೆ ರಾಷ್ಟ್ರಪತಿ ಅವರು ರಾಜ್ಯಪಾಲರನ್ನು ನೇಮಕ ಮಾಡುವುದು ೧೯೫೦ರಿಂದ ನಡೆದುಕೊಂಡು…