ಮೈಸೂರು ನಗರ

ಸಾರ್ವಜನಿಕರೊಂದಿಗೆ ಪೊಲೀಸರ ವರ್ತನೆ ಶಿಸ್ತು ಬದ್ಧವಾಗಿರಲಿ : ಎಡಿಜಿಪಿ ಅಲೋಕ್ ಕುಮಾರ್

ಮೈಸೂರು: ಸಾರ್ವಜನಿಕರೊಂದಿಗಿನ‌ ಪೊಲೀಸರ ವರ್ತನೆ ಶಿಸ್ತು ಬದ್ಧವಾಗಿರಬೇಕು ಎಂದು ರಾಜ್ಯ ಪೊಲೀಸ್ ತರಬೇತಿ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಆಶಿಸಿದರು.

ಮೈಸೂರಿನ ಜ್ಯೋತಿನಗರದಲ್ಲಿರುವ ಮಹಿಳಾ ಪೊಲೀಸ್ ತರಬೇತಿ ಶಾಲೆಯಲ್ಲಿ ಬುಧವಾರ ಆಯೋಜಿಸಲಾಗಿದ್ದ 9 ನೇ ತಂಡದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಪ್ರಶಿಕ್ಷಣಾರ್ಥಿಗಳ ಬುನಾದಿ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕರ ಸೇವೆಗಾಗಿಯೇ ಪೊಲೀಸ್ ಇಲಾಖೆ ಇದೆ. ಆದಕಾರಣ, ಅವರೊಂದಿಗೆ ನಮ್ಮ ವರ್ತನೆ ಶಿಸ್ತುಬದ್ಧವಾಗಿರಬೇಕು. ಜನಸ್ನೇಹಿ ಪೊಲೀಸ್ ವ್ಯವಸ್ಥೆ ಬರಬೇಕು. ಹೆಣ್ಣು ಮಕ್ಕಳಿಗೆ ಹೆಣ್ಣುಮಕ್ಕಳ ಬಗ್ಗೆ ಸ್ಪಂದನೆ ಇರಬೇಕು. ಸೇವಾ ಮನೋಭಾವ ಹೊಂದಬೇಕು. ಸ್ವಯಂ ಶಿಸ್ತು ಇರಬೇಕು ಎಂದು ಸೂಚ್ಯವಾಗಿ ತಿಳಿಸಿದರು.

ನಿಮ್ಮ ಕನಸು ಬೇರೆಯದೇ ಇದ್ದರೂ ಖಾಕಿ ಬಟ್ಟೆ ಹಾಕಿದ್ದೀರಿ, ಇದು ನಿಮ್ಮ ಸುಧೈವ. ನೀವು ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ, ಬೆಳವಾಡಿ ಮಲ್ಲಮ್ಮ ಆಗಬೇಕು. ಹೆಣ್ಣು ಮಕ್ಕಳು ಎನ್ನುವ ವಿಷಯವನ್ನು ನಿಮ್ಮ‌ ಮನಸ್ಸಿನಿಂದ ತೆಗೆದುಹಾಕಿ ಎಂದ ಅವರು ನಮ್ಮ‌ ಗುರಿ ನಿಮ್ಮನ್ನು ಸದೃಢಗೊಳಿಸುವುದಾಗಿದೆ ಎಂದರು.

ನೆರೆಯ ತೆಲಂಗಾಣ ಹಾಗೂ ಆಂದ್ರಪ್ರದೇಶ ರಾಜ್ಯದಲ್ಲಿ ಮಾಸಿಕ ಕೇವಲ 5 ಸಾವಿರ ತರಬೇತಿ ಭತ್ಯೆ ನೀಡಲಾಗುತ್ತಿದೆ. ನಮ್ಮ ಕರ್ನಾಟಕ ಸರ್ಕಾರ ನಿಮಗೆ 45000 ರೂಪಾಯಿ ನೀಡುತ್ತಿದೆ. ಅದಕ್ಕಾಗಿ ನೀವು ಈ ನೆಲಕ್ಕೆ ಬದ್ದರಾಗಿರಬೇಕು. ಬಂದ ಹಣವನ್ನು ದುರುಪಯೋಗ ಮಾಡದೆ, ಉಳಿತಾಯದೊಟ್ಟಿಗೆ ಚೆನ್ನಾಗಿ ಆಹಾರ ಸೇವನೆ ಮಾಡಿ ಆರೋಗ್ಯವನ್ನೂ ಕಾಪಾಡಿಕೊಳ್ಳಿ ಎಂದು ಸಲಹೆ ಮಾಡಿದರು.

ಪ್ರಶಿಕ್ಷಣಾರ್ಥಿಗಳಿಗೆ ವಾರಕ್ಕೆ ಎರಡು ಬಾರಿ ಚಿಕನ್ ನೀಡಿ ಎಂದು ಶಾಲೆಯ ಪ್ರಾಂಶುಪಾಲೆ ಗೀತಾ ಅವರಿಗೆ ಸಲಹೆ ಮಾಡಿದ ಅಲೋಕ್ ಕುಮಾರ್, ಕ್ರೀಡಾಳುಗಳು ತಮ್ಮ ಚಟುವಟಿಕೆ ಮುಂದುವರೆಸಿ, ಭವಿಷ್ಯದ ದಿನಗಳಲ್ಲಿ ಅದರಿಂದ ಹೆಚ್ಚಿನ ನೆರವಾಗಲಿದೆ ಎಂದರು.

ಸೈಬರ್ ಕ್ರೈಮ್ ಪ್ರಮಾಣ ರಾಜ್ಯದಲ್ಲಿ ಶೇ.10 ಇದ್ದರೆ, ಬೆಂಗಳೂರಿನಲ್ಲಿ ಶೇ.30 ರಷ್ಟು ಪ್ರಮಾಣದಲ್ಲಿ ಸೈಬರ್ ಕ್ರೈಮ್ ಆಗುತ್ತಿದೆ. ಆ ನಿಟ್ಟಿನಲ್ಲಿ ಹೆಚ್ಚಿನ ತರಬೇತಿ ಪಡೆಯಲು ಗಮನ ಕೊಡಿ. ಸರಗಳ್ಳತನ, ದರೋಡೆ ಇತ್ತೀಚಿಗೆ ಕಡಿಮೆ ಆಗುತ್ತಿದ್ದು, ಸೈಬರ್ ಅಪರಾಧದ ಹೆಚ್ಚಾಗುತ್ತಿರುವುದರಿಂದ ಅದರ ಬಗ್ಗೆ ತಿಳಿದುಕೊಳ್ಳಬೇಕು. ಅದರೊಂದಿಗೆ ವಿಧಿವಿಜ್ಞಾನ ವಿಷಯವೂ ಕೂಡ ಇಂದು ಆದ್ಯತೆಯ ವಿಷಯವಾಗಿದ್ದು, ಆ ಬಗ್ಗೆ ಕೂಡ ಅರಿವು ಅಗತ್ಯ. ಪುಸ್ತಕದ ವಿಷಯ ಮಾತ್ರವಲ್ಲದೆ, ಇಂಟರ್ಯಾಕ್ಟೀವ್ ತರಬೇತಿ ಇರಲಿ. ಬೋಧನಾ ಪ್ರಕ್ರಿಯೆ ಬದಲಾಗಬೇಕು, ಪೊಲೀಸ್ ಲೀಡರ್ ಶಿಪ್ ಬಗ್ಗೆ ಗಮನ ನೀಡಿ ಎಂದು ಸಲಹೆ ನೀಡಿದರು.

ಹೊರಾಂಗಣ ಮತ್ತು ಒಳಾಂಗಣದ ಬಗ್ಗೆ ಸಮನ್ವಯತೆ ಇರಬೇಕು. ಅನಿವಾರ್ಯ ಪರಿಸ್ಥಿತಿಯಲ್ಲಿ ಗುಂಪು ನಿಯಂತ್ರಣದ ಬಗ್ಗೆ ಅರಿವಿರಬೇಕು. ಪೊಲೀಸರಿಗೆ ಧೈರ್ಯ ಕೂಡ ಮುಖ್ಯ. ಆ ಸಲುವಾಗಿಯೇ ಮೊಟಾರ್ ಸೈಕಲ್ ಓಡಿಸುವ ತರಬೇತಿ ಕೊಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಪಿಸ್ತೂಲ್ ಫೈರಿಂಗ್ ಮೂಲಕ ತರಬೇತಿ ನೀಡಲಾಗುತ್ತಿದೆ. ಇದರಿಂದಾಗಿ ನಿಮ್ಮ ಸಾಮರ್ಥ್ಯ ಹೆಚ್ಚು ಮಾಡಿಕೊಳ್ಳಿ ಎಂದರು.

ವೇದಿಕೆಯಲ್ಲಿ ಮಹಿಳಾ ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲರಾದ ಗೀತಾ, ಸೆಸ್ಕ್ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಸವಿತಾ ಹೂಗಾರ್, ಡಿವೈಎಸ್ಪಿ ಶಂಕರೇಗೌಡ, ಇನ್ಸ್‌ಪೆಕ್ಟರ್
ಕಿರಣ್ ಕುಮಾರ್ ಉಪಸ್ಥಿತರಿದ್ದರು.

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ನದಿ ಮಾಲಿನ್ಯ ತಡೆಗಟ್ಟಿ

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಮೂಲಕ ಹರಿಯುವ ಲಕ್ಷ್ಮಣತೀರ್ಥ ನದಿ ಕಾವೇರಿ ನದಿಯ ಉಪನದಿಯಾಗಿದ್ದು, ಹುಣಸೂರು ಭಾಗದ ಬಹಳ ಮುಖ್ಯವಾದ…

2 hours ago

ಓದುಗರ ಪತ್ರ: ಸಚಿವ ಸೋಮಣ್ಣ ಹೇಳಿಕೆ ಸ್ವಾಗತಾರ್ಹ

ರೈಲ್ವೆ ನೇಮಕಾತಿ ಪರೀಕ್ಷೆಗಳನ್ನು ಕರ್ನಾಟಕದವರು ಇನ್ನು ಮುಂದೆ ಕನ್ನಡದಲ್ಲಿ ಬರೆಯಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಹಾಗೂ ರೈಲ್ವೆ ಇಲಾಖೆ…

2 hours ago

ಓದುಗರ ಪತ್ರ: ಅಪಾಯಕಾರಿ ಮರದ ಕೊಂಬೆ ತೆರವುಗೊಳಿಸಿ

ಮೈಸೂರಿನ ಮಾನಸಗಂಗೋತ್ರಿಯಿಂದ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿಗೆ (ಎಸ್‌ಜೆಸಿಇ) ಸಂಪರ್ಕ ಕಲ್ಪಿಸುವ ರಸ್ತೆಯ ಎಡ ಬದಿಯಲ್ಲಿ ಇರುವ ಮರವೊಂದರ ಕೊಂಬೆ…

2 hours ago

ಓದುಗರ ಪತ್ರ: ನವ ಭಾರತದ ನಿರ್ಮಾತೃ ಡಾ.ಅಂಬೇಡ್ಕರ್

ಶ್ರೇಷ್ಠ ಸಂವಿಧಾನದ ಮೂಲಕ ಶೋಷಿತ ಸಮುದಾಯಗಳಿಗೆ ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮೀಸಲು ಸೌಲಭ್ಯ ಕಲ್ಪಿಸುವ ಮೂಲಕ ಅವರ ಬಾಳಿಗೆ…

2 hours ago

ಆಂತರಿಕ ಕ್ಲೋಭೆಯಿಂದ ಭಾರತ ರಕ್ಷಿಸಿದ ಅಂಬೇಡ್ಕರ್

ಸಿ.ಹರಕುಮಾರ್, ಬರಹಗಾರ ಬಾಬಾ ಸಾಹೇಬ್‌ರ ಧಾರ್ಮಿಕ ನಿಲುವು ಅರಿಯಲು ಬಹುತೇಕರು ವಿಫಲ ಭಾರತದ ಭಾಗ್ಯವಿಧಾತ ಮತ್ತು ಸಂವಿಧಾನ ಕರ್ತೃ ಡಾ.ಬಿ.ಆರ್.ಅಂಬೇಡ್ಕರ್…

2 hours ago

ಕೊಡಗು ಜಿಲ್ಲೆಯಲ್ಲೂ ಹೆಚ್ಚುತ್ತಿರುವ ತಾಪಮಾನ

ನವೀನ್ ಡಿಸೋಜ ಬಳಲಿಕೆಯೊಂದಿಗೆ ಆರೋಗ್ಯ ಹದಗೆಡುವ ಸಾಧ್ಯತೆ; ಅಗತ್ಯ ಮುನ್ನೆಚ್ಚರಿಕೆಗೆ ಆರೋಗ್ಯ ಇಲಾಖೆ ಸಲಹೆ  ಮಡಿಕೇರಿ: ಅಚ್ಚ ಹಸಿರಿನ ಪರಿಸರದೊಂದಿಗೆ…

2 hours ago