ಮೈಸೂರು: ಉದಯಗಿರಿ ಠಾಣೆಯ ಗಲಭೆಯಂತೆ ಎನ್‌ಆರ್ ಠಾಣೆಗೂ ಕಲ್ಲು ಹೊಡೆದು ಗಲಾಟೆ ಎಬ್ಬಿಸುತ್ತೇವೆ ಎಂದು ಅವಾಜ್ ಹಾಕಿ ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ 12 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ನಗರದ ಮಾದೇಶ್, ಗಿರೀಶ್, ರವಿಕುಮಾರ್, ಕಿರಣ್, ಆ.ಬಾತು, ರಾಘವೇಂಧ್ರ, ದಾದಾ, ಕೀರ್ತಿ, ನಾಗೇಂದ್ರ ಸೇರಿ 12 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಯುಗಾದಿ ಹಬ್ಬದಂದು ಗಾಂಧಿನಗರದಲ್ಲಿ ದುರ್ಗಾದೇವಿ ಮೆರವಣಿಗೆಯ ವೇಳೆ ಎರಡು ಗುಂಪಿನ ಯುವಕರ ನಡುವೆ ಪರಸ್ಪರ ಗಲಾಟೆಯಾಗಿದೆ. ಈ ವೇಳೆ ಗಲಾಟೆ ಬಿಡಿಸಲು ಮುಂದಾದ ಪೊಲೀಸ್ ಸಿಬ್ಬಂದಿ ವಿರುದ್ಧ ತಿರುಗಿಬಿದ್ದ ಗುಂಪು ಅವಾಚ್ಯ ಶಬ್ದಗಳಿಂದ ನಿಂದಿಸಿ ಪೊಲೀಸರ ಮೇಲೆಯೆ ಹಲ್ಲೆ ನಡೆಸಿದೆ.
ಅಲ್ಲದೇ, ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ಎಸೆದಂತೆ ಎನ್.ಆರ್ ಠಾಣೆ ಮೇಲೂ ಕಲ್ಲು ಹೊಡೆಯುತ್ತೇವೆ ಎಂದು ಅವಾಜ್ ಹಾಕಿದ್ದಾರೆ ಎನ್ನಲಾಗಿದೆ.
ಮೈಸೂರು: ಕೇಂದ್ರ ಸರ್ಕಾರ ಅಡುಗೆ ಅನಿಲ ಮತ್ತು ಇಂಧನ ಬೆಲೆ ಏರಿಸಿರುವುದನ್ನು ಖಂಡಿಸಿ ಜಿಲ್ಲಾ ಯೂತ್ ಕಾಂಗ್ರೆಸ್ ವತಿಯಿಂದ ಪ್ರತಿಭಟಿಸಲಾಯಿತು.…
ಚಾಮರಾಜನಗರ: ಕಾಡು ಪ್ರಾಣಿಗಳು ಈ ಭಾಗದಲ್ಲಿ ಊರು ಪ್ರವೇಶಿಸುವುದನ್ನು ಕೇಳಿದ್ದೇವೆ- ಕಂಡಿದ್ದೇವೆ. ಆದರೆ ಹುಲಿಯೊಂದು ಚಾಮರಾಜನಗರ ಜಿಲ್ಲಾ ಕೇಂದ್ರದ ಸನಿಹದಲ್ಲೇ…
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಚಾರ, ಕಮಿಷನ್ದಂಧೆಗಳು ಹೆಚ್ಚಾಗಿವೆ ಎಂಬ ಗುತ್ತಿಗೆದಾರರ ಸಂಘದ ಆರೋಪಕ್ಕೆ ಸಚಿವ ಎನ್ಎಸ್ ಬೋಸರಾಜು ಪ್ರತಿಕ್ರಿಯಿಸಿದ್ದಾರೆ.…
ಕೊಡಗು: ಜಿಲ್ಲೆಯ ಹಲವೆಡೆ ಇಂದು ಕೂಡ ವರುಣ ಅಬ್ಬರಿಸಿ ಬೊಬ್ಬರಿದಿದ್ದು, ಜನಜೀವನ ಅಸ್ತವ್ಯಸ್ತವಾಗುವಂತೆ ಮಾಡಿದ್ದಾನೆ. ಇಂದು ಮಧ್ಯಾಹ್ನದಿಂದಲೂ ಜಿಲ್ಲೆಯ ಹಲವೆಡೆ…
ನವದೆಹಲಿ: 128 ವರ್ಷಗಳ ನಂತರ 2028ರ ಲಾಸ್ ಏಂಜಲೀಸ್ ಕ್ರೀಡಾಕೂಟದ ಮೂಲಕ ಒಲಂಪಿಕ್ಸ್ನಲ್ಲಿ ಕ್ರಿಕೆಟ್ ಅನ್ನು ಟಿ20 ಸ್ವರೂಪದಲ್ಲಿ ನಡೆಸಲು…
ಚಾಮರಾಜನಗರ: ಏಪ್ರಿಲ್.24ರಂದು ನಿಗದಿಯಾಗಿರುವ ಸಚಿವ ಸಂಪುಟ ಸಭೆಯಲ್ಲಿ ಗಡಿ ಜಿಲ್ಲೆ ಚಾಮರಾಜನಗರಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಎಂದು ರೈತ…