ಮೈಸೂರು ನಗರ

ಮುಂದಿನ 30 ವರ್ಷ ಮೂಲಭೂತ ಸೌಕರ್ಯಗಳ ಸಮಸ್ಯೆ ಆಗದಂತೆ ಅಭಿವೃದ್ಧಿ: ಶಾಸಕ ಕೆ.ಹರೀಶ್‌ ಗೌಡ

ಮೈಸೂರು: ಮುಂದಿನ 30 ವರ್ಷ ಮೂಲಭೂತ ಸೌಕರ್ಯಗಳ ಸಮಸ್ಯೆ ಆಗದಂತೆ ಅಭಿವೃದ್ಧಿ ಮಾಡುವುದಾಗಿ ಶಾಸಕ ಕೆ.ಹರೀಶ್‌ ಗೌಡ ಭರವಸೆ ನೀಡಿದ್ದಾರೆ.

ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ 21ನೇ ವಾರ್ಡ್‌ ವ್ಯಾಪ್ತಿಯ ಕುದುರೆಮಾಳ ಹಾಗೂ ಕುಕ್ಕರಹಳ್ಳಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್‌ ಗೌಡ ಅವರು ಗುದ್ದಲಿ ಪೂಜೆ ನೆರವೇರಿಸಿದರು.

ಇದಲ್ಲದೇ ಕುಕ್ಕರಹಳ್ಳಿ ರಂಗಮಂಟಪ ಹಾಗೂ ಅಂಬೇಡ್ಕರ್‌ ಸಮುದಾಯ ಭವನದ ಒಂದನೇ ಮಹಡಿಯ ಕಟ್ಟಡದ ಉದ್ಘಾಟನೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಅತಿ ಹೆಚ್ಚು ಮತಗಳನ್ನು ಈ ಭಾಗದ ಜನತೆ ನನಗೆ ನೀಡಿ ಆಶೀರ್ವದಿಸಿದ್ದಾರೆ. ಹಳೆಯದಾದ ಒಳಚರಂಡಿ ವ್ಯವಸ್ಥೆ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ ಎಂದರು.

ಈ ಭಾಗದಲ್ಲಿ ಮುಂದಿನ 30 ವರ್ಷಗಳ ಕಾಲ ಮೂಲಭೂತ ಸೌಕರ್ಯ ಒದಗಿಸುವ ಕೆಲಸ ಮಾಡಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

ಕೆಂಡಗಣ್ಣಸ್ವಾಮಿ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮದವನಾದ ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಪದವಿ ನಂತರದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ನೈಸರ್ಗಿಕ ಕೃಷಿ ಹಾಗೂ ಪಶು ಸಂಗೋಪನೆಗೆ ಹೆಚ್ಚು ಒತ್ತು ಕೊಡುತ್ತೇನೆ.‌ ಪರಿಸರ ಸಂರಕ್ಷಣೆ ಜೊತೆ ಜೊತೆಗೆ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ನಾನು ಶ್ರಮ ವಹಿಸುತ್ತಿದ್ದೇನೆ.‌ ನನ್ನ ಮೊಬೈಲ್‌ ಸಂಖ್ಯೆ: 9964859626, 9606570286

Recent Posts

ಬೈಕ್‌ಗೆ ಲಾರಿ ಡಿಕ್ಕಿ : ಸವಾರ ಸಾವು, ಮತ್ತೊರ್ವ ಗಂಭೀರ

ತಿ.ನರಸೀಪುರ : ಬೈಕ್ ಗೆ ಎದುರಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿಯಾದ ಪರಿಣಾಮ ಯುವಕನೋರ್ವ ಸ್ಥಳದಲ್ಲಿಯೇ ಮೃತಪಟ್ಟಿ ಘಟನೆ ತಾಲೂಕಿನ…

2 mins ago

ಕಾಸರಗೋಡು ಸೀಮೆಯಲ್ಲಿ ನಂಜನಗೂಡು ನರಸಣ್ಣ

ಅಕ್ಷತಾ ರಜೆಗೆ ಊರಿಗೆ ಬಂದಿದ್ದೆ. ಒಂದು ಬದಿಯಲ್ಲಿ ಬಂಟಾಜೆ ಕಾಡಿನಲ್ಲಿ ಹುಟ್ಟಿ ಸೀರೆ ನದಿಯನ್ನು ಸೇರುವ ತೊರೆ. ಇನ್ನೊಂದು ಬದಿಯಲ್ಲಿ…

14 mins ago

ಪ್ರಭುಸ್ವಾಮಿ ಬೆಟ್ಟದ ಅರೆಕಲ್ಲ ಮೇಲೆ ಎಡೆಪರು ಊಟ

'ಎಲೆ? ಯಾವೂರೆಲೆ ಕಂಡರಿ ಇಲ್ಲಿ. ಅರೆಕಲ್ಲ ಮೇಲೆನೆ ಊಟ. ಪ್ಲಾಸ್ಟಿಕ್ ಲೋಟದಲ್ಲಿರೋ ನೀರಾ ಮುಂದಿರೋ ಅರೆಕಲ್ಲ ಮೇಲೆ ಚಿಮುಕಿಸಿ ರೆಡಿ…

42 mins ago

ಬೀದಿಗೆ ಬಿದ್ದವರಿಗೆ ಚಳಿಗಾಲ ಎಷ್ಟೊಂದು ನರಕ…

ಹಾದಿಬದಿಯ ನಿರಾಶ್ರಿತರು ಆಕಾಶವನ್ನೇ ಹೊದಿಕೆಯಾಗಿಸಿಕೊಂಡು,ಭೂಮಿಯನ್ನೇ ಹಾಸಿಗೆಯನ್ನಾಗಿಸಿ ಕೊಂಡು ಸಿಕ್ಕ ಕೆಲಸ ಮಾಡುತ್ತಾ, ಸಿಕ್ಕಸಿಕ್ಕ ಹಾಗೆ ಬದುಕು ಸವೆಸುತ್ತಾ ಕಳೆಯುತ್ತಾರೆ. ಚಳಿಯಾದರೇನು,…

46 mins ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಡಿಸೆಂಬರ್‌ 14 ಭಾನುವಾರ

59 mins ago

ಎಚ್.ಡಿ.ಕೋಟೆಯಲ್ಲಿ ಮತ್ತೆ ಶುರುವಾಯ್ತು ಹುಲಿ ಉಪಟಳ

ಎಚ್.ಡಿ.ಕೋಟೆ : ತಾಲೂಕಿನ ಚೌಡಹಳ್ಳಿ ಗ್ರಾಮದ ಪಕ್ಕದಲ್ಲೇ ಇರುವ ಜಮೀನೊಂದರಲ್ಲಿ ಹಸುವಿನ ಮೇಲೆ ದಾಳಿ ನಡೆಸಿರುವ ಹುಲಿ ಹಸುವನ್ನು ಕೊಂದು…

13 hours ago