ಮೈಸೂರು ನಗರ

ಮೈಸೂರು | ಮೃಗಾಲಯದಲ್ಲಿ ಗಂಡು ಜಾಗ್ವಾರ್‌ ಸಾವು

ಮೈಸೂರು : ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ “ವಿಕ್ರಂ” ಎಂಬ ಹೆಸರಿನ ಗಂಡು ಜಾಗ್ವಾರ್ ಶುಕ್ರವಾರ ಬೆಳಗ್ಗೆ ಸಾವನ್ನಪ್ಪಿದೆ.

ಸುಮಾರು 7.7 ವರ್ಷ ವಯಸ್ಸಿನ “ವಿಕ್ರಂ” ಜಾಗ್ವಾರ್ ಶುಕ್ರವಾರ ಬೆಳಗ್ಗೆ ಸುಮಾರು 9:00 ಗಂಟೆಗೆ ತೀವ್ರ ಪಿತ್ತಜನಕಾಂಗ ಮತ್ತು ಮೂತ್ರಪಿಂಡದ ವೈಫಲ್ಯದಿಂದ ಸಾವನ್ನಪ್ಪಿದೆ. ಈ ಬಗ್ಗೆ ಮೈಸೂರು ಮೃಗಾಲಯವು ಸಂತಾಪ ವ್ಯಕ್ತಪಡಿಸಿದೆ.

ಜಾಗ್ವಾರ್ ಪ್ರಾಣಿಯು ಕಳೆದ ಎರಡು ದಿನಗಳಿಂದ ಊಟವನ್ನು ವಿಸರ್ಜಿಸಿದ ಕಾರಣ ಚಿಕಿತ್ಸೆಗೊಳಪಡಿಸಲಾಗಿತ್ತು. ಜಾಗ್ವಾರ್ ಪ್ರಾಣಿಯು ಮೈಸೂರು ಮೃಗಾಲಯದ ಆಕರ್ಷಣೆಗಳಲ್ಲಿ ಒಂದಾಗಿದ್ದು, ಇದರ ಸಾವು ಮೃಗಾಲಯಕ್ಕೆ ಅಪಾರ ನಷ್ಟವನ್ನುಂಟು ಮಾಡಿದೆ ಎಂದು ಮೃಗಾಲಯದ ಆಡಳಿತ ವರ್ಗ, ಪಶುವೈದ್ಯಕೀಯ ತಂಡ ಮತ್ತು ಪ್ರಾಣಿಪಾಲನಾ ತಂಡ ಸಂತಾಪ ಸೂಚಿಸಿದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಸಬ್ ಅರ್ಬನ್ ಬಸ್ ನಿಲ್ದಾಣದ ಬಳಿ ಆಟೋ ಸಂಚಾರ ನಿಯಂತ್ರಿಸಿ

ಮೈಸೂರು ನಗರದ ಸಬ್ ಅರ್ಬನ್ ಬಸ್ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ದ್ವಾರಗಳ ಬಳಿ ಆಟೋಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಿದ್ದು,…

14 mins ago

ಶತಾಯುಷಿ ಸುತಾರ್ ವಿಧಿವಶ ; ದೇಶ-ವಿದೇಶ ನಾಯಕರ ಪ್ರತಿಮೆ ಕೆತ್ತಿದ್ದ ಹೆಗ್ಗಳಿಕೆ

ಹೊಸದಿಲ್ಲಿ : ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಶಿಲ್ಪಿ ರಾಮ್‌ ಸುತಾರ್‌ ಗುರುವಾರ ( 100) ವಿಧಿವಶರಾಗಿದ್ದಾರೆ. ಮಹಾರಾಷ್ಟ್ರದ ಧುಲೆ…

18 mins ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಸದ್ದು ಮಾಡುತ್ತಿರುವ ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವ

ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವದ ೩೦ನೇ ಆವೃತ್ತಿ ಕಳೆದ ಶುಕ್ರವಾರ ಉದ್ಘಾಟನೆಯಾಗಿ ಇಂದು ಕೊನೆಯಾಗುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಮಾನ್ಯತೆ ಪಡೆದ ಐದು…

28 mins ago

ನಾಳೆಯಿಂದ ಮಡಿಕೇರಿಯಲ್ಲಿ ಕೂರ್ಗ್‌ ಕಾರ್ನಿವಲ್‌

ನವೀನ್ ಡಿಸೋಜ ೨ನೇ ಬಾರಿಗೆ ನಡೆಯುವ ಪ್ರವಾಸಿ ಉತ್ಸವಕ್ಕೆ ಸಿದ್ಧತೆ; ಹೋಟೆಲ್ ಮತ್ತು ರೆಸಾರ್ಟ್ ಅಸೋಸಿಯೇಷನ್ ಸಹಭಾಗಿತ್ವ  ಮಡಿಕೇರಿ: ಡಿ.೨೦…

3 hours ago

ಮುಡಾ ಅಕ್ರಮ : ತೆರೆಗೆ ಸರಿದ ದೇಸಾಯಿ ಆಯೋಗದ ವರದಿ

ಕೆ.ಬಿ.ರಮೇಶನಾಯಕ ಮುಡಾ ಅಕ್ರಮಗಳ ಕುರಿತು ೬ ಸಂಪುಟಗಳಲ್ಲಿ ಸಲ್ಲಿಸಿದ್ದ ವರದಿ ೩೦೦ ನಿವೇಶನಗಳು ಬದಲಿ ನಿವೇಶನಗಳಾಗಿ ಹಂಚಿಕೆ ೫೦:೫೦ ಅನುಪಾತದಡಿ…

3 hours ago