ಮೈಸೂರು ; ಪ್ರವಾಸೋದ್ಯಮವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಹಾಗೂ ಪ್ರವಾಸಿಗರನ್ನ ಆಕರ್ಷಿಸಲು ಮೈಸೂರು ನಗರ ಸೇರಿದಂತೆ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಪ್ರಚಾರಕ್ಕೆ ಡಿಜಿಟಲ್ ಸ್ಪರ್ಶ ನೀಡಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.
ನಗರದ ಪ್ರಮುಖ ರಸ್ತೆಗಳು ಮತ್ತು ವೃತ್ತಗಳೊಂದಿಗೆ ಹೆದ್ದಾರಿ ಸಂಪರ್ಕಿಸುವ ರಸ್ತೆಗಳಲ್ಲಿ ಡಿಜಿಟಲ್ ಸೈನ್ ಬೋರ್ಡ್ ಅಳವಡಿಸಲು ಚಿಂತನೆ ನಡೆಸಲಾಗಿದೆ. ಮೈಸೂರು ಅಂಬಾವಿಲಾಸ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ ಹೊರತಾಗಿ ಸಾಕಷ್ಟು ಪ್ರವಾಸಿ ತಾಣಗಳ ಬಗ್ಗೆ ಪ್ರವಾಸಿಗರಿಗೆ ಮಾಹಿತಿಯೇ ಇಲ್ಲ. ಹೀಗಾಗಿಯೇ ಕೆಲವೇ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೆ ಒಂದು ದಿನದಲ್ಲಿ ಭೇಟಿ ಕೊಟ್ಟು ಸಂಜೆಯೊಳಗೆ ಮೈಸೂರಿನಿಂದ ನಿರ್ಗಮಿಸುತ್ತಿದ್ದಾರೆ.
ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳು, ವಸ್ತು ಸಂಗ್ರಹಾಲಯಗಳು ಮೈಸೂರಿನಲ್ಲಿದ್ದರೂ ಕೂಡ ಪ್ರಚಾರದ ಕೊರತೆಯಿಂದಾಗಿ ಪ್ರವಾಸಿಗರು ಭೇಟಿ ಕೊಡುತ್ತಿಲ್ಲ. ಈಗಾಗಿ ಮೈಸೂರು ನಗರದಲ್ಲೆ ಇರುವ ಪ್ರವಾಸಿಗರ ದೃಷ್ಠಿಯಿಂದ ದೂರ ಉಳಿದ ಸ್ಥಳಗಳ ಬಗ್ಗೆ ಸಮಗ್ರ ಮಾಹಿತಿ ಇರುವ ಕಿರು ಚಿತ್ರ ಸಿದ್ದಪಡಿಸಿ ಅವುಗಳನ್ನ ಬಳಸಿ ಪ್ರಚಾರ ಮಾಡಲು ಪ್ರವಾಸೋದ್ಯಮ ಇಲಾಖೆಯು ಯೋಜನೆ ರೂಪಿಸಿದೆ.
ಕಠ್ಮಂಡು: ಜೀಪ್ ಪ್ರಪಾತಕ್ಕೆ ಬಿದ್ದು 20 ಮಂದಿ ಸಾವನ್ನಪ್ಪಿರುವ ಘಟನೆ ನೇಪಾಳದ ರೋಲ್ಪಾದಲ್ಲಿ ನಡೆದಿದ್ದು, ಭಾರೀ ಮಳೆಯಿಂದ ರಕ್ಷಣಾ ಕಾರ್ಯಾಚರಣೆಗೆ…
ನವದೆಹಲಿ: ಈ ಬಾರಿ ಮೇ ತಿಂಗಳಿನಲ್ಲಿ ದೇಶದ ಹಲವೆಡೆ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಹಾಗೂ ಹೆಚ್ಚಿನ ಉಷ್ಣಾಂಶ ದಾಖಲಾಗಲಿದೆ ಎಂದು…
ಇಸ್ಲಾಮಾಬಾದ್: ನಿಷೇಧಿತ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಉನ್ನತ ಕಮಾಂಡರ್ ಪಾಕಿಸ್ತಾನದ ಬಹಾವಲ್ಪುರದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಉನ್ನತ ಉಗ್ರಗಾಮಿ ಕಾರ್ಯಕರ್ತನನ್ನು ಅಪರಿಚಿತ ವಾಹನವೊಂದು…
ನವದೆಹಲಿ: ಅಮೇರಿಕಾ-ಇರಾನ್ ಯುದ್ಧದ ಹೊರತಾಗಿಯೂ ಏಪ್ರಿಲ್.2026ರಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು ದಾಖಲೆಗರಿಷ್ಠ ರೂ 2.43 ಲಕ್ಷ ಕೋಟಿ ತಲುಪಿದೆ. ಏಪ್ರಿಲ್‌ನಲ್ಲಿ…
ಬೆಂಗಳೂರು : ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು 993 ರೂ. ಏಕಾಏಕಿ ಹೆಚ್ಚಿಸಿರುವ ಕೇಂದ್ರ ಸರ್ಕಾರದ…
ಚೆನ್ನೈ : ತಮಿಳುನಾಡಿನ ದಶಕಗಳ ದ್ರಾವಿಡ ರಾಜಕಾರಣಕ್ಕೆ ಸವಾಲು ಹಾಕಿ ಅಖಾಡಕ್ಕಿಳಿದಿರುವ ದಳಪತಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’…