ಮೈಸೂರು: ನಾಡಹಬ್ಬ ಮೈಸೂರು ದಸರಾಕ್ಕೆ ದಿನಗಣನೆ ಶುರುವಾಗಿದ್ದು, ಸಿದ್ಧತೆಯು ಜೋರಾಗಿದೆ. ಅಂಬಾವಿಲಾಸ ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನದ ಜೋಡಣಾ ಕಾರ್ಯ ಇಂದು ಮುಗಿದಿದ್ದು, ಅ.3 ರಿಂದ ಖಾಸಗಿ ದರ್ಬಾರ್ ನಡೆಯಲಿದೆ.
ನವರಾತ್ರಿಯ ಸಮಯದಲ್ಲಿ ರಾಜವಂಶಸ್ಥರಿಂದ ಅರಮನೆಯಲ್ಲಿ ಖಾಸಗಿ ದರ್ಬಾರ್ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ, ಸಿಂಹಾಸನ ಜೋಡಣೆಯು ವಿಧಿ ವಿಧಾನದಂತೆ ನೆರೆವೇರಿತ್ತು. ಬಳಿಕ ಪಟ್ಟದ ಹಸು, ಕುದುರೆ, ಆನೆ, ಅಶ್ವಗಳೂ ಗೋ ಶಾಲೆಗೆ ಆಗಮಿಸಿದವು.
ಜೋಡಣೆ ಹೇಗೆ?
ಅರಮನೆಯ ಸ್ಟ್ರಾಂಗ್ ರೂಂ ನಲ್ಲಿರುವ ಸಿಂಹಾಸನವನ್ನು ಟ್ರಾಲಿ ಮೂಲಕ ದರ್ಬಾರ್ ಹಾಲ್‌ಗೆ ತರಲಾಗುತ್ತದೆ. ಸಿಂಹಾಸನದಲ್ಲಿ ಅಧೋಭಾಗ, ಮಧ್ಯಭಾಗ, ಮೇಲ್ಭಾಗ ಎಂಬ ಮೂರು ಭಾಗಗಳಿವೆ. ಜತೆಗ ಮುಖ್ಯ ಆಸನ, ಮೆಟ್ಟಿಲು ಮತ್ತು ಬಂಗಾರದ ಛತ್ರಿಯಿದೆ. ಈ ರಾಜಗದ್ದುಗೆಯನ್ನು ಮೂಲತಃ ಅಂಜೂರ ಮರದಿಂದ ತಯಾರಿಸಲಾಗಿದೆ. ಇದಕ್ಕೆ ಆನೆಯ ದಂತ ಪಟ್ಟಿಗಳನ್ನು ಸಹ ಅಳವಡಿಸಲಾಗಿದೆ. ಈ ಎಲ್ಲಾ ಭಾಗಗಳನ್ನು ಬೇರ್ಪಡಿಸಿ ಮತ್ತೆ ಜೋಡೆಣೆ ಮಾಡುವ ತಾಂತ್ರಿಕತೆ ಇದೆ. ಈ ಜೋಡಣೆಯು ಒಂದು ಕಲೆಯಾಗಿದೆ.
ಜತೆಗೆ ಈ ಸಿಂಹಾಸನವನ್ನು ಜೋಡಿಸುವ ಕೆಲಸವನ್ನು ಗೆಜ್ಜಗಳ್ಳಿಯ ಗ್ರಾಮಸ್ಥರು ನಿರ್ವಹಿಸುತ್ತಾರೆ. ರಾಜ ಮಹಾರಾಜರ ಕಾಲದಿಂದಲೂ ಇವರೇ ಸಿಂಹಾಸನ ಜೋಡಣೆಯ ಸಿದ್ಧಹಸ್ತರು. ಅರಮನೆಯ ಪರಿಚಾರಕರು ಗೆಜ್ಜೆಗಳ್ಳಿಗೆ ಹೋಗಿ ವೀಳ್ಯ ಕೊಟ್ಟು ಆಹ್ವಾನ ನೀಡುತ್ತಾರೆ.
ದಾ.ರಾ. ಮಹೇಶ್ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…
ಮಂಡ್ಯ: ಇಂದಿನಿಂದ ( ಡಿಸೆಂಬರ್ 20 ) ಮೂರು ದಿನಗಳ ಕಾಲ ನಡೆಯಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ…
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…