ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತಸೌಕರ್ಯ ಮರಿಚಿಕೆಯಾಗಿದೆ ಎಂದು ಆರೋಪಿಸಿ ಸಂಶೋಧಕರು ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟವು ಪ್ರತಿಭಟನೆ ನಡೆಸಿತು.
ವಿ.ವಿಯ ಪಿ.ಜಿ ಹಾಸ್ಟಲ್ ಬಳಿ ಬುಧವಾರ ಪ್ರತಿಭಟನೆಗೆ ಕೂತ ವಿದ್ಯಾರ್ಥಿಗಳು, ಕುಡಿಯುವ ನೀರಿನ ಫಿಲ್ಟರ್ ವಾಟರ್ ಮತ್ತು ಬಿಸಿ ನೀರಿನ ಗೀಜರ್ ವ್ಯವಸ್ಥೆಯನ್ನು ಯು.ಜಿ ಮತ್ತು ಪಿ.ಜಿಯ ಪುರುಷ ಮತ್ತು ಮಹಿಳಾ ನಿಲಯಗಳಿಗೆ ಒದಗಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕಾಗಮಿಸಿದ ಮೈ ವಿ.ವಿ ಮುಖ್ಯ ಅಭಿಯಂತಕರು ಪ್ರತಿಭಟನಾಕಾರರ ಆಹವಾಲನ್ನು ಸ್ವೀಕರಿಸಿ ಕೂಡಲೇ ಎರಡೇ ದಿನದಲ್ಲಿ ನಿಮ್ಮೆಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಶಾಂತಿಯಿಂದ ಪ್ರತಿಭಟನೆಯನ್ನು ಕೈಬಿಟ್ಟರು.
ಇದನ್ನೂ ಓದಿ:-ಕೆ.ಆರ್.ನಗರ | ಗಾಂಜಾ ಮಾರಾಟ : ಇಬ್ಬರ ಬಂಧನ
ಸಂಶೋಧಕ ಶಿವಶಂಕರ್, ವಿದ್ಯಾರ್ಥಿ ಮುಖಂಡ ಕೃಷ್ಣಮೂರ್ತಿ ಗಣಿಗನೂರು, ಯುವ ಹೋರಾಟಗಾರ ಹಾಗು ಸಂಶೋಧಕರದ ಪ್ರದೀಪ್ ಮುಮ್ಮಡಿ, ಮಹೇಶ್ ಪಿ.ಮರಳ್ಳಿ, ಸಂದೇಶ್ ಮನಗಳ್ಳಿ, ಕಾರ್ತಿಕ್ ತಗಡೂರು, ಪ್ರೀತಮ್ ಅಂಚಿಪುರ, ರವಿಕುಮಾರ್ ಮುಡಿಗುಂಡ, ಸಿದ್ದಾರ್ಥ್, ಅವಿನಾಶ್.ಜಿ, ಕೆ.ಎನ್.ಕವಿರಾಜ್, ಧೀರಾಜ್, ಬಾಬು ಹಾಗು ಡಿ.ಎಸ್.ಎಫ್ ಮಾಜಿ ಕಾರ್ಯದರ್ಶಿ ಗೌತಮ್ ಕೋಟೆ ಮತ್ತು ತೇಜಸ್ ಮೋಹನ್ ದಾಸ್ ಮತ್ತಿತರ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಪ್ರತಿಭಟನೆಯಲ್ಲಿದ್ದರು.
ಕೊಪ್ಪಳ: ಐತಿಹಾಸಿಕ ಅಂಜನಾದ್ರಿಗೆ ಸಂಸದ ಯದುವೀರ್ ಒಡೆಯರ್ ಭೇಟಿ ನೀಡಿ ದೇವರ ದರ್ಶನ ಪಡೆದರು. ಹನುಮ ಹುಟ್ಟಿದ ನಾಡು ಎಂದು…
ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಬರೋಬ್ಬರಿ 7 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಲಿದ್ದಾರೆ. ಸೆಪ್ಟೆಂಬರ್ 12ರಂದು ದೆಹಲಿಗೆ…
ಮೈಸೂರಿನ ಪ್ರಮುಖ ಜೀವವೈವಿಧ್ಯ ತಾಣ ಕುಕ್ಕರಹಳ್ಳಿ ಕೆರೆಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ವಾಯುವಿಹಾರಿಗಳು, ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿ ನೀಡುತ್ತಾರೆ.…
ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಿಶೀಲಿಸುವ ವೇಳೆ ಅಪ್ರಾಪ್ತ ಮಕ್ಕಳಿಂದ ಕೆಲಸ…
ಮುಂಗಾರು ಬೆಳೆ ಸಮೀಕ್ಷೆಗೆ ಮೊಬೈಲ್ ಆಪ್ ಕಡ್ಡಾಯಗೊಳಿಸಿರುವುದು ತಾಂತ್ರಿಕವಾಗಿ ಉತ್ತಮ ಹೆಜ್ಜೆಯಾದರೂ, ವಾಸ್ತವದಲ್ಲಿ ಇದು ರೈತರಿಗೆ ಕಂಟಕವಾಗುತ್ತಿದೆ. ರಾಜ್ಯದಲ್ಲಿ ಶೇ.೮೦ಕ್ಕೂ…
ಡಾ. ಕೆ. ಪಿ. ಸಿದ್ಧಲಿಂಗಸ್ವಾಮಿ, ಸಂಶೋಧಕರು, ಸಿಎಸ್‌ಎಸ್‌ಐ, ಮಂಗಳೂರು ವಿಶ್ವವಿದ್ಯಾನಿಲಯ ಸೆಪ್ಟೆಂಬರ್ ೧೦ ವಿಶ್ವ ಆತ್ಮಹತ್ಯೆ ತಡೆ ದಿನ. ಇದು…