ಮೈಸೂರು : ಐತಿಹಾಸಿಕ ಪರಂಪರೆ, ಸಾಂಸ್ಕ ತಿಕ ವೈಭವದಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮೈಸೂರು ನಗರದ ಸ್ವಚ್ಛತೆಯನ್ನು ಇನ್ನಷ್ಟು ಉತ್ತಮಪಡಿಸುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆಯು ಆರು ಮಂದಿ ಸಾಧಕರನ್ನು `ಸ್ವಚ್ಛತಾ ಬ್ರಾಂಡ್ ಅಂಬಾಸಿಡರ್’ಗಳನ್ನಾಗಿ ನೇಮಕ ಮಾಡಿದೆ.
ಸ್ವಚ್ಛ ಭಾರತ ಅಭಿಯಾನದಡಿ ಮೈಸೂರು ನಗರವನ್ನು ಕೇವಲ ಬಾಹ್ಯವಾಗಿ ಅಷ್ಟೇ ಅಲ್ಲದೆ, ನಾಗರಿಕರ ಮನೋಭಾವದಲ್ಲಿಯೂ ಸ್ವಚ್ಛತೆಯ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಪಾಲಿಕೆ ಈ ಕ್ರಮ ಕೈಗೊಂಡಿದೆ. ಚಲನಚಿತ್ರ, ಸಂಗೀತ ಹಾಗೂ ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತರ ಸೇವೆ ಸಲ್ಲಿಸಿರುವ ಗಣ್ಯರ ಜನಪ್ರಿಯತೆ ಮತ್ತು ಬದ್ಧತೆಯನ್ನು ಗಮನಿಸಿ ಈ ಜವಾಬ್ದಾರಿ ನೀಡಲಾಗಿದೆ.
ಶಿಲ್ಪಿ ಅರುಣ್ ಯೋಗಿರಾಜ್, ಚಲನಚಿತ್ರ ಕಲಾವಿದ ವಸಿಷ್ಠ ಸಿಂಹ, ನಟಿ ಹರಿಪ್ರಿಯಾ, ಬಿಗ್‌ಬಾಸ್ ಖ್ಯಾತಿಯ ಸೂರಜ್ ಸಿಂಗ್, ಗಾಯಕರಾದ ಅನನ್ಯ ಭಟ್ ಹಾಗೂ ಆಲೋಕ್ ಅವರುಗಳನ್ನು ಮೈಸೂರು ಮಹಾನಗರ ಪಾಲಿಕೆಯ ನೂತನ ಸ್ವಚ್ಛತಾ ರಾಯಭಾರಿಗಳಾಗಿ ನೇಮಿಸಲಾಗಿದೆ.
ನೇಮಕಗೊಂಡಿರುವ ಈ ಗಣ್ಯರು ನಗರದ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಲಿದ್ದಾರೆ. ಪಾಲಿಕೆಯು ಹಮ್ಮಿಕೊಳ್ಳುವ ಸ್ವಚ್ಛ ಭಾರತ ಅಭಿಯಾನದ ವಿವಿಧ ಕಾರ್ಯಕ್ರಮಗಳು ಹಾಗೂ ಜಾಗೃತಿ ಜಾಥಾಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಶಾಲಾ-ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಸ್ವಚ್ಛತೆಯ ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪಿಸುವ ಕೆಲಸವನ್ನು ಇವರು ಮಾಡಲಿದ್ದಾರೆ.
ಸಂಪೂರ್ಣವಾಗಿ ಸೇವಾ ಮನೋಭಾವದಿಂದ, ಯಾವುದೇ ಗೌರವಧನ ಅಥವಾ ಆರ್ಥಿಕ ಲಾಭದ ಅಪೇಕ್ಷೆಯಿಲ್ಲದೆ ಸಾರ್ವಜನಿಕ ಹಿತದೃಷ್ಟಿಯಿಂದ ಈ ಸಾಧಕರು ರಾಯಭಾರಿಗಳಾಗಿ ನೇಮಕಗೊಂಡಿದ್ದಾರೆ. ಮೈಸೂರನ್ನು ಶಿಸ್ತುಬದ್ಧ ಹಾಗೂ ಮಾದರಿ ನಗರವಾಗಿ ರೂಪಿಸುವ ಪಾಲಿಕೆಯ ಆಶಯಕ್ಕೆ ಇವರ ಸಹಕಾರ ಜೊತೆಯಾಗಲಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಶೇಖ್ ತನ್ವೀರ್ ಆಸಿಫ್ ತಿಳಿಸಿದ್ದಾರೆ.
ಮೈಸೂರು ನಗರದ ಸುತ್ತಮುತ್ತ ಇರುವ ವಿವಿಧ ದೇವಾಲಯಗಳನ್ನು ನಿರ್ವಹಿಸುತ್ತಿರುವ ಟ್ರಸ್ಟ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಹುಂಡಿಯ ಹಣ ಹಾಗೂ ಭಕ್ತರು ನೀಡುವ…
ಕೆಟ್ಟು ೨-೩ ತಿಂಗಳಾದರೂ ದುರಸ್ತಿ ಭಾಗ್ಯವಿಲ್ಲ; ಬೇಗ ರಿಪೇರಿ ಮಾಡಿಸಲು ನಾಗರಿಕರ ಆಗ್ರಹ ಚಾಮರಾಜನಗರ: ನಗರದಲ್ಲಿ ನೈರ್ಮಲ್ಯ ಕಾಪಾಡಲು ನಗರಸಭೆಯು…
ಚಿರಂಜೀವಿ ಸಿ. ಹುಲ್ಲಹಳ್ಳಿ ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗವು ಆಯೋಜಿಸಿರುವ ವಿಶೇಷ ರಿಯಾಯಿತಿ ಪುಸ್ತಕ ಮಾರಾಟಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.…
ಎಸ್.ಪ್ರಶಾಂತ್ ಗಂಗೋತ್ರಿ ಬಡಾವಣೆ ರಸ್ತೆಗೆ ಬೇಕಿದೆ ಕಾಯಕಲ್ಪ ದೂಳುಮಯವಾದ ರಸ್ತೆ, ಅಪಾಯಕ್ಕೆ ಎಡೆಮಾಡುತ್ತಿರುವ ಗುಂಡಿಗಳು ಮೈಸೂರು: ಕಳೆದ ಕೆಲ ತಿಂಗಳಿನಿಂದ…
ಕೆ.ಬಿ.ರಮೇಶನಾಯಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಭಾರತೀಯ ಮಗು ದತ್ತು ಪಡೆದ ವಿದೇಶಿ ದಂಪತಿ ಮೈಸೂರು: ಬಹುಶಃ ಹೆತ್ತಮ್ಮ ಇದ್ದರೂ…
ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ಸಫಾರಿ ಪುನಾರಂಭವಾಗಿರುವುದರಿಂದ ವನ್ಯಜೀವಿಗಳಿಗೆ ತೊಂದರೆ ಆಗಿಲ್ಲ. ನಮ್ಮ ಹೊಟ್ಟೆ ಹೊರೆಯಲು ಸಹಾಯವಾಗಿದೆ... ಕಾಡ್ಗಿಚ್ಚು ನಂದಿಸುವ ಸಂದರ್ಭಗಳಲ್ಲಿ…