ಮೈಸೂರು ನಗರ

ಮುಡಾ ಹಗರಣ: ಸಮಗ್ರ ತನಿಖೆಗೆ ಸಾ.ರಾ ಮಹೇಶ್‌ ಆಗ್ರಹ

ಮೈಸೂರು: ಮುಡಾದಲ್ಲಿ ನಾನು 50;50 ಅನುಪಾತದಲ್ಲಿ ನಿವೇಶನ ಪಡೆದಿದ್ದರೆ ಅಥವಾ ನನ್ನ ಸಂಬಂಧಿಕರಿಗೆ ಶಿಫಾರಸ್ಸು ಮಾಡಿದ್ದನ್ನು ನಗರಾಭಿವೃದ್ಧಿ ಸಚಿವರು ಬಹಿರಂಗಪಡಿಸಿದರೆ ಪ್ರಾಧಿಕಾರಕ್ಕೆ ನಿವೇಶನ ವಾಪಸ್‌ ಮಾಡಿಸುವೆ ಎಂದು ಮಾಜಿ ಸಚಿವ ಸಾ.ರಾ ಮಹೇಶ್‌ ಹೇಳಿದ್ದಾರೆ.

ನಗರದಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗಾರಾಭಿವೃದ್ಧಿ ಸಚಿವರು ಮುಡಾ ಹಗರಣದಲ್ಲಿ ಸುಖಾ ಸುಮ್ಮನೆ ನನ್ನ ಹೆಸರು ತಂದಿದ್ದಾರೆ. ಅವರು ಹೇಳಿರುವ ಸರ್ವೆ ನಂಬರ್‌ ನಾನೇ ಹುಡುಕಿಸುವೆ. ಆರ್‌ಟಿಐಗೆ ಅರ್ಜಿ ಸಲ್ಲಿಸಿ ಮಾಹಿತಿ ಪಡೆದು ಎಲ್ಲವನ್ನು ಬಹಿರಂಗಪಡಿಸುತ್ತೇನೆ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.

ನಗಾರಾಭಿವೃದ್ಧಿ ಸಚಿವರು ನಿನ್ನೆ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಅದರಲ್ಲಿರುವ ಅಷ್ಟು ಮಾಹಿತಿ ನಿಜವಾಗಿದ್ದರೆ ಅಷ್ಟು ಜಮೀನು ಸ್ವಂತ ಹಣದಲ್ಲಿ ಖರೀದಿಸಿ ಪ್ರಾಧಿಕಾರಕ್ಕೆ ವಾಪಸ್‌ ಕೋಡುತ್ತೇವೆ. ಸುಮ್ಮನೆ ವಿಚಾರ ಡೈವರ್ಟ್‌ ಮಾಡಲು ಸುಳ್ಳು ಹೇಳಬೇಡಿ. ಮುಡಾ ಹಗರಣದ ಬಗ್ಗೆ ದಿಕ್ಕು ತಪ್ಪಿಸುವ ಬದಲು ಸಮಗ್ರ ತನಿಖೆ ನಡೆಸಲು ಮುಂದಾಗಬೇಕು ಎಂದು ಸಾ.ರಾ ಮಹೇಶ್‌ ಆಗ್ರಹ ಮಾಡಿದರು.

ಮುಡಾದಲ್ಲಿ ನಡೆದಿರುವ ಎಲ್ಲ ಅವ್ಯವಹಾರ ನನಗೆ ಗೊತ್ತು. ಯಾರು ಎಷ್ಟು ಸೈಟ್‌ ಪಡೆದಿದ್ದಾರೆ ಎಲ್ಲವೂ ಗೊತ್ತಿದೆ. ಆದರೆ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ವಿಶ್ರಾಂತಿ ಪಡೆಯಿರಿ ಎಂದು ಜನ ನನ್ನನ್ನು ಸೋಲಿಸಿದ್ದಾರೆ. ವಿಶ್ರಾಂತಿ ಪಡೆಯುತ್ತಿದ್ದೇನೆ. ಸುಮ್ಮನೆ ನನ್ನ ಹೆಸರು ತರ್ತೀರಾ? ಎಂದು ವಾಗ್ದಾಳಿ ನಡೆಸಿದರು.

 

 

 

 

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಮಿರ್ಜಾಪುರದಲ್ಲಿ ಸರಣಿ ಅಪಘಾತ: 11 ಮಂದಿ ಸಾವು

ಮಿರ್ಜಾಪುರ (ಉತ್ತರ ಪ್ರದೇಶ): ಬಹು ವಾಹನಗಳು ಡಿಕ್ಕಿಯಾಗಿ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಮಕ್ಕಳು ಸೇರಿದಂತೆ 11 ಮಂದಿ ಸಾವನ್ನಪ್ಪಿರುವ…

1 hour ago

ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯ ಚಿಂತನೆ ಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯ ಚಿಂತನೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಪೆಟ್ರೋಲ್‌ ಮತ್ತು…

2 hours ago

ಮಂಡ್ಯದಲ್ಲಿ ಸಿಇಟಿ ಗದ್ದಲ: ವಿದ್ಯಾರ್ಥಿನಿಯರ ಓಲೆ ಬಿಚ್ಚಿಸಿದ ಪರಿವೀಕ್ಷಕರು

ಮಂಡ್ಯ: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಇಂದು ಸಿಇಟಿ ಪರೀಕ್ಷೆ ಹಿನ್ನೆಲೆ ರಾಜ್ಯ ಸರ್ಕಾರದ ವಸ್ತ್ರ ಸಂಹಿತೆ ಕಡ್ಡಾಯವಾಗಿ ಜಾರಿಗೊಂಡಿದೆ. ಪರೀಕ್ಷೆಗೆ…

2 hours ago

ಮೈಸೂರಿನಲ್ಲಿ ಮೀನು ಮಾರಾಟ ಮಳಿಗೆಗೆ ಬೆಂಕಿ: ಅಂಗಡಿ ಸಾಮಾಗ್ರಿಗಳು ಸಂಪೂರ್ಣ ಸುಟ್ಟು ಕರಕಲು

ಮೈಸೂರು: ಮೈಸೂರಿನಲ್ಲಿ ಮೀನು ಮಾರಾಟ ಮಳಿಗೆಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಂಗಡಿ ಸಾಮಾಗ್ರಿಗಳು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ…

2 hours ago

ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ | ನಾಳೆ ವಿಶೇಷ ಸಂಪುಟ ಸಭೆ

ಬೆಂಗಳೂರು : ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ಕಲ್ಪಿಸುವ ಉದ್ದೇಶಕ್ಕಾಗಿ ನಾಳೆ(ಏ.24)ವಿಶೇಷ ಸಚಿವ ಸಂಪುಟ ಸಭೆ ನಿಗದಿಯಾಗಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ…

3 hours ago

ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ: ಕುಟ್ಟ ಖಾಸಗಿ ಹೋಂಸ್ಟೇ ಪರವಾನಗಿ ರದ್ದು

ಪೊನ್ನಂಪೇಟೆ: ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಗ್ರಾಮದಲ್ಲಿ ವಿದೇಶಿ ಮಹಿಳೆ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟ್ಟ ಖಾಸಗಿ…

3 hours ago