ಮೈಸೂರು ನಗರ

ಇಸ್ರೋಗೆ ಅಭಿನಂದನೆ ಸಲ್ಲಿಸಿದ ಸಂಸದ ಯದುವೀರ್‌

ಮೈಸೂರು: ಇಸ್ರೋ ಸಂಸ್ಥೆ ಹಾಗೂ ಯುರೋಪಿನ್‌ ಬಾಹ್ಯಾಕಾಶ ಸಂಸ್ಥೆಯೂ ಜಂಟಿಯಾಗಿ ಪ್ರೋಬಾ-3 ನೌಕೆಯನ್ನು ನಭಕ್ಕೆ ಯಶಸ್ವಿಯಾಗಿ ಹಾರಿಸಿರುವುದಕ್ಕೆ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಭಾರತೀಯ ಬಾಹ್ಯಾಕಾಶ ಕೇಂದ್ರ(ಇಸ್ರೋ) ಹಾಗೂ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ (ಇಎಸ್ಎ) ಜಂಟಿಯಾಗಿ ಪ್ರೋಬಾ-3 ನೌಕೆಯನ್ನು ನಭಕ್ಕೆ ಯಶಸ್ವಿಯಾಗಿ ಹಾರಿಸಿದೆ. ಪಿಎಸ್ಎಲ್ವಿ-ಸಿ60 ರಾಕೆಟ್ 220ಕೆ.ಜಿ ತೂಕದ ಎರಡು ಸ್ಪೇಡೆಕ್ಸ್ ಉಪಗ್ರಹ ಮತ್ತು 24 ಪೇಲೋಡ್ಗಳನ್ನು ಹೊಂದಿರುವ ಪಿಒಇಎಂ-4 ಅನ್ನು ನಿಗದಿತ ಕಕ್ಷೆಗೆ ಸೇರಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಕಕ್ಷೆಯಲ್ಲಿ ಬಾಹ್ಯಾಕಾಶ ನೌಕೆಗಳ ‘ಡಾಕಿಂಗ್’ ಮತ್ತು ‘ಅನ್ಡಾಕಿಂಗ್’ ನಡೆಸುವ ಸಾಮರ್ಥ್ಯವನ್ನು ಪ್ರದರ್ಶಿಸುವ ಮಹತ್ತರ ಯೋಜನೆ ಇದಾಗಿದೆ. ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ ಬಾಹ್ಯಾಕಾಶ ನೌಕೆಗಳ ‘ಡಾಕಿಂಗ್’ ತಂತ್ರಜ್ಞಾನವನ್ನು ಹೊಂದಿರುವ ದೇಶಗಳಾಗಿವೆ. ಈ ಸಾಲಿಗೆ ಇಂದು ಭಾರತವು ಸೇರ್ಪಡೆಯಾಗಲಿರುವುದು ನಮ್ಮ ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಅರ್ಚನ ಎಸ್‌ ಎಸ್

Recent Posts

ಓದುಗರ ಪತ್ರ: ಪಿಎಚ್‌ಸಿಗಳಲ್ಲಿ ಬಿಪಿ, ಶುಗರ್ ಮಾತ್ರೆಗಳು ಸಿಗುವಂತೆ ಕ್ರಮ ಕೈಗೊಳ್ಳಿ

ಮೈಸೂರು ಜಿ ಎಚ್.ಡಿ.ಕೋಟೆ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶುಗರ್ ಮತ್ತು ಬಿಪಿಗೆ ಹಾಗೂ ಇತರೆ ಕಾಯಿಲೆಗಳಿಗೆ ಸಂಬಂಧಪಟ್ಟ…

18 mins ago

ಓದುಗರ ಪತ್ರ: ಬರ ಅಧ್ಯಯನ: ನೈಜ ಮೌಲ್ಯಮಾಪನ ನಡೆಯಲಿ

ರಾಜ್ಯದಲ್ಲಿ ಈ ಬಾರಿ ತೀವ್ರ ಬರ ಪರಿಸ್ಥಿತಿ ಇದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ…

20 mins ago

ಓದುಗರ ಪತ್ರ: ಗ್ರಾಹಕರಿಗೆ ಹೊರೆಯಾಗದಂತೆ ಹಾಲಿನ ದರ ಏರಿಸಿ

ರಾಜ್ಯ ಸರ್ಕಾರ ಹಾಲಿನ ದರವನ್ನು ಲೀಟರ್‌ಗೆ ೮ ರೂ. ಏರಿಕೆ ಮಾಡಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಲಿನ ದರವನ್ನು ಒಂದೇ…

22 mins ago

ಓದುಗರ ಪತ್ರ: ಅಂತರ್ಜಲ ಮರುಪೂರಣಕ್ಕೆ ನೈಜ ಯೋಜನೆ ಅಗತ್ಯ

ರಾಜ್ಯದಲ್ಲಿ ಬಳಕೆಯಲ್ಲಿರುವ ಒಟ್ಟು ೩೦ ಸಾವಿರ ಜಲಮೂಲಗಳಲ್ಲಿ ಕೇವಲ ಶೇ.೨೦ರಷ್ಟು ಮಾತ್ರ ಅಂತರ್ಜಲ ಮರುಪೂರಣಕ್ಕಾಗಿ ಬಳಕೆಯಾಗುತ್ತಿರುವುದು ಸರ್ಕಾರ ಹಾಗೂ ಸಾರ್ವಜನಿಕರ…

24 mins ago

ದಸರಾ ಸಂಭ್ರಮಕ್ಕೆ ಸುಗಮ ಸಂಚಾರದ ಸಾಥ್

ಟಿ. ಕೆ.ಹರೀಶ್, ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಭ್ರಮದ ಜೊತೆಗೆ ಸ್ವಚ್ಛತೆ, ಸುರಕ್ಷತೆ ಮತ್ತು…

26 mins ago

ಮಳೆಯ ಕೊರತೆ ನಡುವೆಯೂ ಶೇ.75 ಬಿತ್ತನೆ ಸಾಧನೆ

ಕೆ.ಬಿ.ಶಂಶುದ್ದೀನ್ ಕುಶಾಲನಗರ ತಾಲ್ಲೂಕಿನಲ್ಲಿ ಭತ್ತ, ಮುಸುಕಿನ ಜೋಳ ಬೆಳೆಗೆ ರೈತರ ಒತ್ತು  ಕುಶಾಲನಗರ: ಮುಂಗಾರು ಮಳೆಯ ಪ್ರಮಾಣದಲ್ಲಿ ಕೊರತೆ ಕಂಡುಬಂದಿರುವುದರ…

45 mins ago