ಮೈಸೂರು ನಗರ

ಸಿಎಂ ಸಿದ್ದರಾಮಯ್ಯ ಒಬ್ಬ ಬೇಜವಾಬ್ದಾರಿ ಮನುಷ್ಯ: ಎಚ್‌.ವಿಶ್ವನಾಥ್‌ ವ್ಯಂಗ್ಯ

ಮೈಸೂರು: ಸಿಎಂ ಸಿದ್ದರಾಮಯ್ಯ ಒಬ್ಬ ಕೇರ್‌ ಲೇಸ್‌ ಪರ್ಸನ್‌. ಬೇಜವಾಬ್ದಾರಿ ಮನುಷ್ಯ, ಈ ಬೇಜವಾಬ್ದಾರಿಯಿಂದಲೇ ಇಷ್ಟೊಂದು ತೊಂದರೆ ತಂದುಕೊಂಡಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ವ್ಯಂಗ್ಯವಾಡಿದ್ದಾರೆ.

ಜೆಡಿಎಸ್‌ನಲ್ಲಿ ಸಿದ್ದರಾಮಯ್ಯ ಇದ್ದಾಗ ಕಾಂಗ್ರೆಸ್‌ ಬಗ್ಗೆ ಕಟುವಾಗಿ ಟೀಕಿಸುತ್ತಿದ್ದರು. ಬಳಿಕ ಜೆಡಿಎಸ್‌ನಿಂದ ಅವರನ್ನು ಹೊರ ಹಾಕಿದಾಗ ಬೀದಿಪಾಲಾಗಿದ್ದರು. ಆಗ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ಕರೆದು ತಂದದ್ದು ನಾವು. ಆದರೆ, ಸಿದ್ದರಾಮಯ್ಯ ಅದೇ ಪಕ್ಷದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದು ವಿಪರ್ಯಾಸದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ ಮಾತು ಎತ್ತಿದರೆ ನಾನು ಅಕ್ಕಿ ಕೊಟ್ಟೆ ಎನ್ನುತ್ತಾರೆ. ಆದರೆ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಅಕ್ಕಿ ಬೆಳೆಯುವ ಭೂಮಿಯನ್ನೇ ನೀಡಿದ್ದಾರೆ. ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ನೀಡಿದ ಆಡಳಿತವನ್ನು ಈಗ ನೀಡಲು ಸಾಧ್ಯವಾಗುತ್ತಿಲ್ಲ. ಜೊತೆಗೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಒಂದೂವರೆ ಕೋಟಿ ರೂ. ಬೆಲೆ ಬಾಳುವ ನಿವೇಶನಗಳನ್ನು ಕೇವಲ ಒಂದು ಸಾವಿರ ಅಥವಾ ಎರಡು ಸಾವಿರಕ್ಕೆ ನೀಡಿದ್ದಾರೆ. ಅದರಲ್ಲಿ ಸಿಎಂ ಪತ್ನಿಗೂ ಈ ರೀತಿಯಲ್ಲಿಯೇ ಹಂಚಿಕೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ.

ಬಳಿಕ. ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ಇತ್ತೀಚೆಗೆ ಜನತೆ ಲೋಕಾಯುಕ್ತ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಸಿಬಿಐ ಮತ್ತು ಇಡಿ ತನಿಖಾ ಸಂಸ್ಥೆಗಳಿಗೆ ಅಧಿಕೃತವಾಗಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

 

ಕೆಂಡಗಣ್ಣಸ್ವಾಮಿ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮದವನಾದ ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಪದವಿ ನಂತರದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ನೈಸರ್ಗಿಕ ಕೃಷಿ ಹಾಗೂ ಪಶು ಸಂಗೋಪನೆಗೆ ಹೆಚ್ಚು ಒತ್ತು ಕೊಡುತ್ತೇನೆ.‌ ಪರಿಸರ ಸಂರಕ್ಷಣೆ ಜೊತೆ ಜೊತೆಗೆ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ನಾನು ಶ್ರಮ ವಹಿಸುತ್ತಿದ್ದೇನೆ.‌ ನನ್ನ ಮೊಬೈಲ್‌ ಸಂಖ್ಯೆ: 9964859626, 9606570286

Recent Posts

ರಾಹುಲ್‌ ಗಾಂಧಿ ಜೊತೆ ಯಾವ ಮಾತುಕತೆಯೂ ಆಗಿಲ್ಲ: ಸಿಎಂ ಸಿದ್ದರಾಮಯ್ಯ

ಮೈಸೂರು: ಅಧಿಕಾರ ಹಂಚಿಕೆ‌ ವಿಚಾರ ಕುರಿತಂತೆ ಊಹಾಪೋಹಗಳ ಬಗ್ಗೆ ಚರ್ಚೆ ಮಾಡುತ್ತಿರುವುದು ಮಾಧ್ಯಮದವರು. ಹೈಕಮಾಂಡ್ ತೀರ್ಮಾನಕ್ಕೆ ನಾನು ಮತ್ತು ಡಿ.ಕೆ.ಶಿವಕುಮಾರ್…

4 mins ago

ಮೈಸೂರಿನಲ್ಲಿ ರಾಹುಲ್‌ ಗಾಂಧಿ ಸ್ವಾಗತಿಸಿದ ಸಿಎಂ ಹಾಗೂ ಡಿಸಿಎಂ

ಮೈಸೂರು: ಮೈಸೂರಿಗೆ ಆಗಮಿಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಸ್ವಾಗತಿಸಿದರು.…

19 mins ago

ಮೈಸೂರು ನಗರದಲ್ಲಿ ಹಳೆ ಬಸ್‌ಗಳ ಸಂಚಾರ ವಿಚಾರ: ಸಾರಿಗೆ ಇಲಾಖೆ ಪ್ರಾದೇಶಿಕ ಅಧಿಕಾರಿ ವಸಂತ್ ಚೌವ್ಹಾಣ್‌ ಪ್ರತಿಕ್ರಿಯೆ

ಮೈಸೂರು: ಬೆಂಗಳೂರು ಡಿಜಿಸ್ಟ್ರೇಷನ್‌ ಹಳೆಯ ಬಸ್‌ಗಳು ಮೈಸೂರು ನಗರದಲ್ಲಿ ಸಂಚಾರ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯ ಪ್ರಾದೇಶಿಕ ಅಧಿಕಾರಿ ವಸಂತ್…

35 mins ago

ಮೈಸೂರು: ಬೈಕ್‌ ಕಳ್ಳನ ಬಂಧನ

ಮೈಸೂರು: ಇಬ್ಬರು ಬೈಕ್ ಕಳ್ಳರನ್ನು ಬಂಧಿಸಿರುವ ಲಷ್ಕರ್ ಠಾಣೆ ಪೊಲೀಸರು, ಬಂಧಿತರಿಂದ 2.5 ಲಕ್ಷ ರೂ. ವೌಲ್ಯದ 3 ದ್ವಿಚಕ್ರ…

1 hour ago

ಮೈಸೂರು| ಅಂತರಾಜ್ಯ ಮನೆಗಳ್ಳನ ಬಂಧನ

ಮೈಸೂರು: ಅಂತರಾಜ್ಯ ಮನೆಗಳ್ಳನನ್ನು ಕುವೆಂಪು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 2.6 ಲಕ್ಷ ರೂ. ವೌಲ್ಯದ 20 ಗ್ರಾಂ…

1 hour ago

ಹನೂರು| ವಿದ್ಯುತ್‌ ಟವರ್‌ ದುರಸ್ತಿ ಕಾರ್ಯ ಪ್ರಗತಿಯಲ್ಲಿ: ಹಲವು ಗ್ರಾಮಗಳಲ್ಲಿ ವಿದ್ಯುತ್‌ ವ್ಯತ್ಯಯ

ಹನೂರು: ವಿದ್ಯುತ್ 66/11 ಕೆವಿ ಟವರ್ ದುರಸ್ತಿ, ವಿವಿಧ ಭಾಗದಲ್ಲಿ ವಿದ್ಯುತ್ ನಿಲುಗಡೆ ದುರಸ್ತಿಕಾರ್ಯ ಪ್ರಗತಿಯಲ್ಲಿರುವುದರಿಂದ ಹಲವು ಗ್ರಾಮಗಳಲ್ಲಿ ವಿದ್ಯುತ್…

1 hour ago