ಮೈಸೂರು ನಗರ

ಮುಡಾ ಹಗರಣ: ಸಿಎಂ ಪತ್ನಿ ನಿವೇಶನ ಹಿಂತಿರುಗಿಸಿದ ಬಗ್ಗೆ ಶಾಸಕ ಶ್ರೀವತ್ಸ ಕಿಡಿ

 

ಮೈಸೂರು: ರಾಜ್ಯದಲ್ಲಿ ಮುಡಾ ಹಗರಣ ಒಂದು ದೊಡ್ಡ ಸಂಚಲನವನ್ನು ಸೃಷ್ಠಿಸಿದ್ದು, ಮುಡಾದ 14 ನಿವೇಶನಗಳನ್ನು ವಾಪಾಸ್ ನೀಡಿರುವ ಬಗ್ಗೆ ಶಾಸಕ ಟಿ.ಎಸ್‌.ಶ್ರೀವತ್ಸವ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮುಡಾ ಹಗರಣದಿಂದ ಕರ್ನಾಟಕದ ಮಾನ-ಗೌರವ ಹೋಗಿದೆ. ಈಗ ನಿವೇಶನವನ್ನು ವಾಪಸ್ಸು ನೀಡುವ ಬದಲು 3 ತಿಂಗಳುಗಳ ಹಿಂದೆಯೇ ನೀಡಿದ್ದರೆ ರಾಜ್ಯ ಮಾನ ಉಳಿಯುತ್ತಿತ್ತು. ಅಲ್ಲದೇ ಈ ನಿರ್ಧಾರವನ್ನು ಮೊದಲೇ ತೆಗೆದುಕೊಂಡಿದ್ದರೆ ಇನ್ನೂ ಹಲವಾರನ್ನು ಬಲಿಯಾಕಬಹುದಿತ್ತು. ಆಗ ಅವಕಾಶಗಳನ್ನು ಬಿಟ್ಟು ಬಿಟ್ಟರು. ಆದರೆ ಈಗ ಈ ನಿರ್ಧಾರವನ್ನು ಯಾಕೆ ತೀರ್ಮಾನಿಸಬೇಕಿತ್ತು. ಇದರಿಂದ ಕಾಂಗ್ರೆಸ್‌ ಹೈಕಮಾಂಡ್‌, ಮುಖಂಡರು ಹಾಗೂ ಕಾರ್ಯಕರ್ತರಿಗೆ ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದರು.

ಮುಡಾ ಹಗರಣದಲ್ಲಿ 14 ಸೈಟ್‌ಗಳು ಮಾತ್ರ ಸಿದ್ದರಾಮಯ್ಯ ಅವರ ಕಣ್ಣಿಗೆ ಮುಖ್ಯವಾಗಿ ಕಂಡು ಅವುಗಳನ್ನು ಉಳಿಸಿಕೊಳ್ಳಲು ಹೋಗಿ ಬಾಕಿ ಇನ್ನುಳಿದ 4,865 ನಿವೇಶನಗಳ ತನಿಖೆಯನ್ನು ಯಾರು ನಡೆಸುತ್ತಾರೆ. ನಾವು ಮುಡಾದಲ್ಲಿನ 14 ಸೈಟ್‌ಗಳ ಬಗ್ಗೆ ಸಿದ್ದರಾಮಯ್ಯ ಅವರಿಗೆ ಮೊದಲೇ ಎಚ್ಚರಿಕೆ ನೀಡಿದ್ದೇವೆ. ಇದರಲ್ಲಿ ನಿಮ್ಮನ್ನು ಉಪಯೋಗಿಸಿಕೊಳ್ಳತ್ತಿದ್ದಾರೆ ಎಂದು ಆದರೆ ಸಿದ್ದರಾಮಯ್ಯ ನಮ್ಮ ಮಾತನ್ನು ಕೇಳಲೇ ಇಲ್ಲ. ಸಿಎಂ ಸಿದ್ದರಾಮಯ್ಯ ಯಾಕೆ ಮುಡಾದ 14 ನಿವೇಶನಗಳಲ್ಲಿ ಮುಡಾ ಆಯುಕ್ತ ನಟೇಶ್‌ ಕುಮಾರ್‌ ಬಗ್ಗೆ ಕ್ರಮ ತೆಗೆದುಕೊಳ್ಳಲಿಲ್ಲ. ಅವರೇಕೆ ದಿನೇಶ್‌ ಕುಮಾರ್‌ ಅವರ ಅಮಾನತ್ತನ್ನು ವಾಪಾಸ್‌ ತೆಗೆದುಕೊಂಡರೂ? ಇದರಿಂದಲೇ ತಿಳಿಯುತ್ತದೆ. ಸರ್ಕಾರದಿಂದ ಹೆಜ್ಜೆ ಹೆಜ್ಜೆಗೂ ತಪ್ಪು ಮಾಡಿ ಅವರೇ ಸಿಕ್ಕಿ ಬೀಳುತ್ತಿದ್ದಾರೆ. ಮುಡಾದ 14 ನಿವೇಶನಗಳನ್ನು ಹಿಂತಿರುಗಿಸಿರುವುದು ಒಳ್ಳೆಯದೇ ಆದರೆ ಸಮಯ ಸರಿ ಆಗಿಲ್ಲ ಎಂದರು.

ಮಧ್ಯಪ್ರದೇಶ ವಿ/ಎಸ್‌ ಲಕ್ಷ್ಮೀನಾರಾಯಣ ಎಂಬ 2019ರ ಕೇಸ್‌ನಲ್ಲಿ ಸುಪ್ರೀಕೋರ್ಟ್‌ ಸ್ಪಷ್ಟವಾಗಿ ಒಬ್ಬ ಸಾರ್ವಜನಿಕ ಅಧಿಕಾರಿ ಹಾಗು ಮತ್ತೊಬ್ಬರು ಜಂಟಿಯಾಗಬಹುದೇ ಹೊರತು ಕೇಸ್‌ನಲ್ಲಿ ಆಗಲು ಸಾಧ್ಯವಿಲ್ಲ. ಹೀಗಾಗಿ ಆ ಕೇಸ್‌ನಂತೆಯೇ ಸಿಎಂ ಸಿದ್ದರಾಮಯ್ಯನವರೇ ನೀವಾಗಿ ನೀವೇ ರಾಜೀನಾಮೆ ಕೊಡುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರೆ ತಪ್ಪಲಾಗರಾದು ಅದಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲೇಬೇಕು ಎಂದು ಆಗ್ರಹಿಸಿದರು.
ಕಳೆದ ಹತ್ತು ವರ್ಷಗಳಿಂದ ಮುಡಾದಲ್ಲಿ ರಿಯಲ್‌ ಎಸ್ಟೇಟ್‌ ದಂಧೆ ತಡೆಯುತ್ತಿದೆ. ಇದರಿಂದ ಸಾರ್ವಜನಿಕರಿಗೆ ಯಾರಿಗೂ ಮುಡಾದಲ್ಲಿ ಸೈಟ್‌ಗಳು ದೊರೆತ್ತಿಲ್ಲ. 14 ನಿವೇಶನಗಳಲ್ಲದೇ ಇನ್ನುಳಿದ ನಿವೇಶನಗಳ ಬಗ್ಗೆಯೂ ತನಿಖೆಯಾಗಬೇಕು ಎಂದು ಆಗ್ರಹಿಸಿ ಹೋರಾಟ ಮಾಡುತ್ತಿದ್ದೇವೆ ಎಂದು ಶಾಸಕ ಶ್ರೀವತ್ಸ ತಿಳಿಸಿದರು.

ಅರ್ಚನ ಎಸ್‌ ಎಸ್

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago