ಮೈಸೂರು: ಮೈಸೂರು ನಗರ ಪಾಲಿಕೆ ಮಾಜಿ ಸದಸ್ಯ ಲೋಕೇಶ್ ಪಿಯಾ ನಿವಾಸಕ್ಕೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಬೆಳಗಿನ ಉಪಹಾರ ಸೇವಿಸಿದರು.
ನಗರದ ಸುಣ್ಣದಕೇರಿ ಬಡಾವಣೆಯಲ್ಲಿರುವ ಆಪ್ತ ಲೋಕೇಶ್ ಪಿಯಾ ನಿವಾಸಕ್ಕೆ ಇಂದು ಬೆಳಿಗ್ಗೆಯೇ ಭೇಟಿ ನೀಡಿದ್ದ ಸತೀಶ್ ಜಾರಕಿಹೊಳಿ ಅವರಿಗೆ ನಿವಾಸಿಗಳು ಅದ್ಧೂರಿ ಸ್ವಾಗತ ಕೋರಿದರು.
ಪಟಾಕಿ ಸಿಡಿಸಿ, ಹಾರ ತುರಾಯಿ ಹಾಕಿ ಲೋಕೇಶ್ ಪಿಯಾ ಬೆಂಬಲಿಗರು ಸ್ವಾಗತಿಸಿದರು.
ನಂತರ ಮನೆಗೆ ಆಗಮಿಸಿದ ಸಚಿವರು, ದೋಸೆ, ಅಕ್ಕಿರೊಟ್ಟಿ, ಚಟ್ನಿಪುಡಿ ಸೇರಿದಂತೆ ಉತ್ತರ ಕರ್ನಾಟಕದ ಶೈಲಿಯ ಉಪಹಾರ ಸೇವಿಸಿ ಖುಷಿಪಟ್ಟರು.
ಈ ವೇಳೆ ಅಲ್ಲಿ ನೆರೆದಿದ್ದ ಬೆಂಬಲಿಗರು ಹಾಗೂ ಸಾರ್ವಜನಿಕರು ಸತೀಶ್ ಜಾರಕಿಹೊಳಿ ಅವರನ್ನು ನೋಡಲು ಮುಗಿಬಿದ್ದರು.
ಮಾನವತೆಯ ಮೇರು ಸಾಹಿತಿ ದೇಮ ದಲಿತ ಸಂವೇದನೆಯ ಅತ್ಯಂತ ಸೃಜನಶೀಲ ಸಾಹಿತಿಗೆ ಸಂದ ಪಂಪ ಪ್ರಶಸ್ತಿ ಗೌರವ ಮೈಸೂರು: ಕನ್ನಡದ…
ಬೆಂಗಳೂರು: ನಾವು ಮುಂಚೂಣಿ ನಾಯಕರಾಗಿದ್ದೆವು. ಈಗ ಬೇರೆ ಕುದುರೆಗಳು ಬಂದಿವೆ. ಇದೊಂದು ರೇಸ್. ಈಗ ಅವರ ಕುದುರೆಗಳು ಮುಂದೆ ಇವೆ…
ಸೋಮವಾರಪೇಟೆ: ವಿಪರೀತ ಬಿಸಿಲಿನಿಂದ ಕಂಗೆಟ್ಟಿರುವ ತಾಲ್ಲೂಕಿನ ಗ್ರಾಮೀಣ ಜನರು ಮಳೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ. ಹಿರಿಕರ ಗ್ರಾಮದ ಕೃಷಿಕರು, ಗ್ರಾಮದ…
ಕಲಬುರ್ಗಿ: ಇಂದು(ಏಪ್ರಿಲ್.15, 2026) ರಾಜ್ಯದಲ್ಲಿಯೇ ಅತೀ ಹೆಚ್ಚು ಉಷ್ಣಾಂಶ ಕಲಬುರ್ಗಿ ಜಿಲ್ಲೆಯಲ್ಲಿ ದಾಖಲಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕಲಬುರ್ಗಿ ಜಿಲ್ಲೆಯ ನಾಲ್ಕು…
ಲಕ್ನೋ: ಕರ್ನಾಟಕ ಕಾಂಗ್ರೆಸ್‌ನ ಹಿರಿಯ ಶಾಸಕರು ಅಯೋಧ್ಯೆ ರಾಮಮಂದಿರಕ್ಕೆ ತೆರಳಿ ರಾಮಲಲ್ಲಾನ ದರ್ಶನ ಪಡೆದರು. 12 ಮಂದಿ ಶಾಸಕರು ಇಂದು…