ಮೈಸೂರು ನಗರ

ಸ್ಮರ್ಧಾತ್ಮಕ ಜಗತ್ತಿಗೆ ದೃಢ ವಿಶ್ವಾಸ ಮುಖ್ಯ ; ಸಂವಾದದಲ್ಲಿ ಐಎಎಸ್‌ ಅಧಿಕಾರಿ ಕೆ.ಆರ್‌ ನಂದಿನಿ ಅಭಿಮತ

ಮೈಸೂರು: ನಕಾರಾತ್ಮಕ ಚಿಂತನೆ ಬಿಡಿ. ಗುರಿಗೆ ಸಮಯ ನಿಗದಿಪಡಿಸಿಕೊಳ್ಳಿ. ಸ್ಮರ್ಧಾತ್ಮಕ ಜಗತ್ತಿಗೆ ದೃಢ ವಿಶ್ವಾಸವೇ ಮುಖ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್ ನಂದಿನಿ (K R Nandini) ಅಭಿಪ್ರಾಯಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ವತಿಯಿಂದ ಕಾವೇರಿ ಸಭಾಂಗಣದಲ್ಲಿ ನಡೆಯುತ್ತಿರುವ ಐಎಎಸ್‌ ಹಾಗೂ ಕೆಎಎಸ್ ಪರೀಕ್ಷಾ ತರಬೇತಿಯ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.

ಸ್ಮರ್ಧಾತ್ಮಕ ಪರೀಕ್ಷೆ ಕುರಿತು ಗೊಂದಲ ನಿವಾರಿಸಿದ ಅವರು, ಸಿದ್ದತೆ ಹೇಗಿದ್ದರೆ ಉತ್ತಮ, ಓದುವುದು ಹೇಗೆ, ಓದಿದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಹೇಗೆ. ಪ್ರಶ್ನೆಗೆ ಉತ್ತರಿಸುವ ಕ್ರಮ, ಎಷ್ಟು ಅಂಕದ ಪ್ರಶ್ನೆಗಳಿಗೆ ಓದಲು ಆದ್ಯತೆ ನೀಡಬೇಕು.

ವಿಷಯವಾರು ಅಧ್ಯಯನ ಮಾಡುವ ವಿಧಾನ, ಓದಿದನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಅವರು ಅನುಸರಿಸಿದ ತಂತ್ರ, ಪ್ರತಿನಿತ್ಯ ಎಷ್ಟು ವಿಷಯ ಓದಬಹುದು, ಕಂಠಪಾಠ ಅಥವಾ ಅರ್ಥ ಮಾಡಿಕೊಂಡು ಓದುವುದರಲ್ಲಿ ಯಾವ ವಿಧಾನ ಉತ್ತಮ, ಮನನ ಕ್ರಮ ಹೇಗೆ, ಓದಿದ್ದನ್ನು ಬರೆದು ಅಭ್ಯಾಸ ಮಾಡಿದರೆ ನೆನಪಿನಲ್ಲಿ ಉಳಿಯುತ್ತಾ….. ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಗುರಿಗೆ ನಿರ್ಣಯ ಮಾಡುವುದು ಮುಖ್ಯ. ಸರಿಯಾದ ಸಮಯಕ್ಕೆ ಸರಿಯಾದ ನಿರ್ಣಯ ಮಾಡಬೇಕು. ಪರೀಕ್ಷೆ ಎದುರಿಸುವುದಕ್ಕೆ ಧೈರ್ಯ ಮಾಡಿ. ಪರೀಕ್ಷೆಯೇ ಅಂತಿಮ ಅಲ್ಲ. ಎರಡು ವರ್ಷ ಓದಿ ಪರೀಕ್ಷೆ ಆಗಲಿಲ್ಲ ಅಂದರೆ ದೃತಿಗೇಡಬೇಡಿ. ಮುಂದಿನ ದಾರಿ ಹುಡುಕಿ ಎಂದು ಸಲಹೆ ನೀಡಿದರು.

ಯುಪಿಎಸ್‌ಸಿ ಜರ್ನಿ ಯುನಿಕ್ ಆಗಿದೆ. ಬೇರೆಯವರೊಂದಿಗೆ ನೀವು ಹೊಲಿಕೆ ಮಾಡಿಕೊಳ್ಳಬೇಡಿ. ಪರೀಕ್ಷೆ ಬರೆಯುವವರು ಪ್ರಸ್ತುತ ವಿದ್ಯಾಮಾನ ಬಗ್ಗೆ ಗಮನ ಹರಿಸಿ. ನೀವು ಪ್ರಸ್ತುತ ಓದುತ್ತಿರುವ ವಿಷಯದ ಕುರಿತು ಸಂಪೂರ್ಣ ತಿಳಿದುಕೊಳ್ಳಿ. ಬೆಸಿಕಲಿ ಎನ್ ಸಿ ಆರ್ ಟಿ ಪುಸ್ತಕ ಸಹಾಯ ಮಾಡುತ್ತೆ.

ಇಂಗ್ಲಿಷ್‌, ಹಿಂದಿ ಹಾಗೂ ಕನ್ನಡ ಎಂಬ ಮಾಧ್ಯಮ ಅಸಹಾಕತೆ ಬೇಡೆ. ಕನ್ನಡದಲ್ಲಿ ನೀವು ಉತ್ತಮವೇ ಕನ್ನಡದಲ್ಲೇ ಪರೀಕ್ಷೆ ಎದುರಿಸಿ. ನಾನು ಸಹ ಯುಪಿಎಸ್‌ಸಿಯಲ್ಲಿ ಐಚ್ಚಿಕ ವಿಷಯ ಕನ್ನಡವನ್ನೇ ಆಯ್ಕೆ ಮಾಡಿಕೊಂಡಿದ್ದೆ ಎಂದು ಉದಾಹರಿಸುವ ಮೂಲಕ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ.ರಂಗೇಗೌಡ ಅವರು ಮಾತನಾಡಿ, ಓದಿಗೆ ಆಸಕ್ತಿ ಮುಖ್ಯ. ಇಲ್ಲಿ ಬಹಳ ಕನ್ನಡ ಮಾಧ್ಯಮ ವಿದ್ಯಾರ್ಥಿಗಳೆ ಇದ್ದಾರೆ. ಮಾಧ್ಯಮ ಮುಖ್ಯ ಅಲ್ಲ. ಓದುವ ಆಸಕ್ತಿ ಮುಖ್ಯ. ಹೀಗಾಇ ನನಗೆ ಇಂಗ್ಲಿಷ್‌ ಬರಲ್ಲ, ಹಿಂದಿ ಬರಲ್ಲ ಎನ್ನುವ ಹಿಂಜರಿಕೆ ಬೇಡ. ನಿಮಗೆ ದೃಢವಿರುವ ಮಾಧ್ಯಮದಲ್ಲೇ ಓದಿ ಪರೀಕ್ಷೆ ಎದುರಿಸಿ ಎಂದರು.

ಓದುವ ಅನಿರ್ವಾಯ ಸೃಷ್ಟಿಸಿಕೊಳ್ಳಿ. ಎರಡು ವರ್ಷ ಓದಿಗೆ ಅಂತನೆ ಮೀಸಲಿಡಿ. ಒಳ್ಳೆ ಒಳ್ಳೆ ಪುಸ್ತಕ ತೆಗೆದುಕೊಳ್ಳಿ. ನಿಮ್ಮ ಸ್ನೇಹತರ ಜೊತೆ ವಿಷಯವಾರು ಚರ್ಚೆ ಮಾಡಿ. ಒಟ್ಟಾರೆ ಪರೀಕ್ಷೆ ಎದುರಿಸುವ ಛಲ ಬೆಳಿಸಿಕೊಳ್ಳಿ ಎಂದು ಹೇಳಿದರು.

ಶ್ರದ್ದೆ ಹಾಗೂ ಸತತ ನಿರಂತರ ಪ್ರಯತ್ನದಿಂದ ತಮ್ಮ ಗುರಿ ಮುಟ್ಟುವ ತನಕ ಅಭ್ಯಾಸ ಮಾಡಿ. ಸಮಸ್ಯೆಗೆ ಹೆದರಿ ಅಭ್ಯಾಸ ನಿಲ್ಲಿಸಬೇಡಿ. ಜೊತೆಗೆ ಸಮಯವನ್ನು ವ್ಯರ್ಥ ಮಾಡದೆ ಸದುಪಯೋಗ ಮಾಡಿಕೊಳ್ಳಿ. ನಿಮ್ಮ ಶೈಕ್ಷಣಿಕ ಅರ್ಹತೆಗೆ ಪೂರಕವಾದ ಎಲ್ಲಾ ಪರೀಕ್ಷೆಗಳನ್ನು ಧೈರ್ಯವಾಗಿ ತೆಗೆದುಕೊಳ್ಳಿ ಎಂದರು.

ಪರೀಕ್ಷೆ ಎದುರಿಸಲು ನಿಮ್ಮ ವೈಯಕ್ತಿಕ ಆಸಕ್ತಿ ಮುಖ್ಯವಾಗಿರಬೇಕೆ ಹೊರತು ಬೇರೆಯವರ ಒತ್ತಾಯಕ್ಕೆ ಓದಬಾರದು. ನಿಮ್ಮ ಗುರಿ ಅಚಲವಾಗಿರಬೇಕು ಎಂದು ಹೇಳಿದರು.

ಕುಲಪತಿ ಪ್ರೊ.ವಿ.ಶರಣಪ್ಪ ಹಲಸೆ ಅವರು ಮಾತನಾಡಿದರು. ಕುಲಸಚಿವ ಪ್ರೊ.ಕೆ.ಬಿ ಪ್ರವೀಣ್‌, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯಾನಾರಯಣ ಇದ್ದರು.

ಆಂದೋಲನ ಡೆಸ್ಕ್

Recent Posts

ಅಧ್ಯಾಯ ಎರಡು ಇಲ್ಲಿಂದು ಶುರು: ನಟ ರಿಷಬ್‌ ಶೆಟ್ಟಿ ಮಾಹಿತಿ

ಕಾಂತಾರ ಚಾಪ್ಟರ್‌ 1 ಯಶಸ್ಸಿನಲ್ಲಿರುವ ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ಯುಗಾದಿ ದಿನವೇ ಅಧ್ಯಾಯ ಎರಡು ಇಲ್ಲಿಂದ ಶುರು…

2 hours ago

ರಾಜ್ಯದಲ್ಲಿ ಮಳೆ ಆರ್ಭಟ: ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಹವಾಮಾನ ವೈಪರೀತ್ಯ ಹಾಗೂ ಗುಡುಗು ಸಹಿತ ಮಳೆಯ ಅಬ್ಬರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ…

2 hours ago

ರಾಜ್ಯದಲ್ಲಿ ಇಂದು ಕೂಡ ಅಬ್ಬರಿಸಲಿದ್ದಾನೆ ವರುಣ

ಬೆಂಗಳೂರು: ಕಳೆದ ಮೂರು ದಿನಗಳಿಂದ ಕರ್ನಾಟಕದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಇಂದು ಸಂಜೆಯ ವೇಳೆಗೆ ಕೆಲ ಜಿಲ್ಲೆಗಳಲ್ಲಿ ಭಾರೀ ಭಾರೀ…

2 hours ago

ದೇಶದೊಳಗಿನ ದೇಶದ್ರೋಹಿಗಳ ವಿರುದ್ಧ ಇರಾನ್‌ ಕಠಿಣ ಕ್ರಮ

ಟೆಹರಾನ್:‌ ಇರಾನ್‌ ಮೇಲೆ ಯುದ್ಧ ಆರಂಭವಾಗಿ ಸುಮಾರು 20 ದಿನಗಳು ಕಳೆಯುತ್ತಿರುವ ಬೆನ್ನಲ್ಲೇ ಪೊಲೀಸ್‌ ಅಧಿಕಾರಿಗಳ ಕೊಲೆ ಮತ್ತು ಅಮೇರಿಕಾ…

2 hours ago

ಅಯೋಧ್ಯೆ ರಾಮಮಂದಿರಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

ಲಕ್ನೋ: ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಉತ್ತರ ಪ್ರದೇಶದ ರಾಜ್ಯಪಾಲರಾದ…

13 hours ago

ಮುಕ್ತಾಯ ಹಂತಕ್ಕೆ ತಲುಪಿದ ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆ

ಬೆಂಗಳೂರು: ಉದ್ಯಮಿ ಸಿಜೆ ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ಮುಂದಿನ ವಾರದಲ್ಲಿ ತನಿಖಾ ತಂಡ…

13 hours ago