ಮೈಸೂರು ನಗರ

ಧರ್ಮಸ್ಥಳ ಪ್ರಕರಣ: ಸತ್ಯ ಹೊರ ಬರಲೆಂದೇ ಎಸ್‌ಐಟಿ ರಚನೆ ಎಂದ ಹೋಂ ಮಿನಿಸ್ಟರ್‌

ಮೈಸೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯ ಹೊರ ಬರಲೆಂದೇ ನಾವು ಎಸ್‌ಐಟಿ ರಚನೆ ಮಾಡಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ವಿಚಾರವಾಗಿ ಸದನದಲ್ಲಿ ಉತ್ತರ ಕೊಟ್ಟಿದ್ದೇನೆ. ಸತ್ಯ ಹೊರ ಬರಬೇಕು ಎಂದೇ ನಾವು ಎಸ್ಐಟಿ ರಚನೆ ಮಾಡಿದ್ದೇವೆ. ಈ ಮಧ್ಯೆ ಅನೇಕ ಹೇಳಿಕೆಗಳನ್ನು ಗಮನಿಸಿದ್ದೇನೆ. ಹೇಳಿಕೆಗಳಿಂದ ಸತ್ಯ ಹೊರ ಬರಲ್ಲ. ಹೇಳಿಕೆ ನಿಲ್ಲಿಸಿ ತನಿಖೆ ಮುಂದುವರೆಯಲು ಅವಕಾಶ ಮಾಡಿಕೊಡಬೇಕು. ಅವಾಗ ಸತ್ಯ ಹೊರಬರುತ್ತದೆ. ಇದರಲ್ಲಿ ರಾಜಕೀಯ ಮಾಡಬೇಡಿ. ಸತ್ಯ ಹೊರ ಬರಬೇಕು ಎಂಬುದಷ್ಟೇ ನಮ್ಮ ಉದ್ದೇಶ. ಈಗಾಗಲೇ ಮಾಸ್ಕ್‌ಮ್ಯಾನ್‌ ಚಿನ್ನಯ್ಯನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಮಾಡಿದ ಬಳಿಕ ಎಲ್ಲಾ ಸತ್ಯಾಸತ್ಯತೆ ಹೊರಬರುತ್ತದೆ. ಎನ್ಐಎ ತನಿಖೆ ಅವಶ್ಯಕತೆ ಬಗ್ಗೆ ಸದ್ಯ ತನಿಖೆ ಮಾಡುವವರೇ ನಿರ್ಧರಿಸುತ್ತಾರೆ ಎಂದು ಹೇಳಿದರು.

ಇನ್ನು ಜೆಡಿಎಸ್‌ನಿಂದ ಧರ್ಮಸ್ಥಳ ರ್ಯಾಲಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಜೆಡಿಎಸ್‌ನವರು ಕೂಡ ಮಂಜುನಾಥನ ದರ್ಶನ ಪಡೆಯಲಿ. ನಾವು ಯಾರನ್ನು ತಡೆಯಲ್ಲ. ಇದರಲ್ಲಿ ರಾಜಕಾರಣ ಬೇಡ ಎಂದು ಹೇಳಿದ್ದೇವೆ. ಮಂಜುನಾಥನ ದರ್ಶನ ಯಾರು ಬೇಕಾದ್ರೂ ಪಡೆಯಬಹುದು. ಈ ಪ್ರಕರಣದಲ್ಲಿ ತನಿಖೆಗೆ ಕಾಲ ನಿಗದಿ ಮಾಡೋದಕ್ಕೆ ಆಗಲ್ಲ. ಆದ್ರೆ ಅದಷ್ಟು ಬೇಗ ತನಿಖೆ ಮಾಡಿ ಎಂದು ಹೇಳಿದ್ದೇವೆ ಎಂದರು.

ಆಂದೋಲನ ಡೆಸ್ಕ್

Recent Posts

ಚಿರತೆ ದಾಳಿ: ಕೂಲಿ ಕಾರ್ಮಿಕನಿಗೆ ಗಾಯ

ಹುಣಸೂರು: ಕೂಲಿ ಕಾರ್ಮಿಕನ ಮೇಲೆ ಚಿರತೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ತಾಲ್ಲೂಕಿನ ಹನಗೋಡು ಹೋಬಳಿಯ ಕಣಗಾಲು ಗ್ರಾಮದ…

39 mins ago

ಓದುಗರ ಪತ್ರ: ಡಾಂಬರು ಕಾಣದ ಕಾಳಿಹುಂಡಿ ರಸ್ತೆ

ಸರಗೂರು ತಾಲ್ಲೂಕಿನ ಕಾಳಿಹುಂಡಿ ಗ್ರಾಮದ ರಸ್ತೆ ಡಾಂಬರು ಕಾಣದೆ ಹಲವು ವರ್ಷಗಳೇ ಆಗಿವೆ. ಈ ರಸ್ತೆಯು ಹಳ್ಳಕೊಳ್ಳಗಳಿಂದ ಕೂಡಿದೆ. ಈ…

42 mins ago

ಓದುಗರ ಪತ್ರ: ಬಿರು ಬೇಸಿಗೆಯಲ್ಲಿ ಇರಲಿ ಎಚ್ಚರ

ಬೇಸಿಗೆ ಶುರುವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸುಮಾರು ೩೪ ಸೆಲ್ಸಿಯಸ್‌ಗೂ ಹೆಚ್ಚು ಪ್ರಮಾಣದಲ್ಲಿ ಬಿಸಿಲಿನ ತಾಪ ಮಾನ ಏರಿಕೆಯಾಗಿರುವ…

45 mins ago

ಜಾ.ದಳ ತಾಲ್ಲೂಕು ಅಧ್ಯಕ್ಷ ಸ್ಥಾನಕ್ಕೆ ಮುಖಂಡರ ಪೈಪೋಟಿ

ಮಂಜು ಕೋಟೆ ಕೋಟೆ: ರಾಜೇಂದ್ರ, ಸಿ.ವಿ.ನಾಗರಾಜು, ಯೋಗಾನರಸಿಂಹೇಗೌಡ, ಗುಂಡತ್ತೂರು ಪ್ರಕಾಶ್ ಪ್ರಬಲ ಆಕಾಂಕ್ಷಿಗಳು ಎಚ್.ಡಿ.ಕೋಟೆ: ಜಾ.ದಳ ತಾಲ್ಲೂಕು ಅಧ್ಯಕ್ಷರನ್ನು ನೇಮಕ…

51 mins ago

ಎಲ್ಲೆಂದರಲ್ಲಿ ಕಸ ಸುರಿದರೆ ಬೀಳಲಿದೆ ದಂಡ!

ಪುರಸಭೆಯಿಂದ ಹಲವು ಕಡೆಗಳಲ್ಲಿ ಸಿಸಿಟಿವಿ ಅಳವಡಿಕೆ; ಸ್ವಚ್ಛ ಪಟ್ಟಣಕ್ಕೆ ಸಹಕರಿಸಲು ಮನವಿ ಗುಂಡ್ಲುಪೇಟೆ: ಪಟ್ಟಣದ ಕೆಲವೆಡೆ ಕಸ ಸುರಿಯದಂತೆ ಎಚ್ಚರಿಕೆ…

56 mins ago

ಅನಿಲ ಬಿಕ್ಕಟ್ಟು: ಕೃಷಿ, ಪ್ರವಾಸೋದ್ಯಮಕ್ಕೆ ಇಕ್ಕಟ್ಟು

ಕೆ.ಬಿ.ರಮೇಶನಾಯಕ ಮೈಸೂರು: ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಭಾರತದ ಮೇಲೆ ದಿನದಿಂದ ದಿನಕ್ಕೆ ಅನಿಲ ಬಿಕ್ಕಟ್ಟು ಬಿಗಡಾಯಿಸುತ್ತಿದ್ದು, ವಾಣಿಜ್ಯ ಬಳಕೆಯ…

1 hour ago