ಮೈಸೂರು ನಗರ

ಆಷಾಢ ಮಾಸದ ಕೊನೆಯ ಶುಕ್ರವಾರವೂ ಚಾಮುಂಡಿ ತಾಯಿಯ ದರ್ಶನ ಪಡೆದ ಎಚ್.ಡಿ.ರೇವಣ್ಣ

ಮೈಸೂರು: ಇಂದು ಆಷಾಢ ಮಾಸದ ಕೊನೆಯ ಶುಕ್ರವಾರವಾಗಿರುವ ಹಿನ್ನೆಲೆಯಲ್ಲಿ ನಾಡ ಅಧಿದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಜೆಡಿಎಸ್‌ ನಾಯಕ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಭೇಟಿ ನೀಡಿ ತಾಯಿಯ ದರ್ಶನ ಪಡೆದರು.

ಪತ್ನಿ ಭವಾನಿ, ಪುತ್ರ ಸೂರಜ್ ಸೇರಿದಂತೆ ಕುಟುಂಬ ಸಮೇತ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು, ಶಕ್ತಿ ದೇವತೆ ಚಾಮುಂಡೇಶ್ವರಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಕಳೆದ ಮೂರು ಆಷಾಢ ಶುಕ್ರವಾರಗಳ ಜೊತೆಗೆ ನಿನ್ನೆ ನಡೆದ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿಯ ಹಿನ್ನೆಲೆಯಲ್ಲಿ ಎಚ್.ಡಿ.ರೇವಣ್ಣ ಬೆಟ್ಟಕ್ಕೆ ಆಗಮಿಸಿದ್ದರು. ಇಂದು ಕೊನೆಯ ಆಷಾಢ ಶುಕ್ರವಾರದ ಅಂಗವಾಗಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದು, ನಾಡಿಗೆ ಒಳಿತಾಗುವಂತೆ ಪ್ರಾರ್ಥನೆ ಸಲ್ಲಿಸಿದರು.

ಆಂದೋಲನ ಡೆಸ್ಕ್

Recent Posts

ಪ್ರವಾಸಿ ಮಹಿಳೆ ನಾಪತ್ತೆ

ಮಡಿಕೇರಿಗೆ ಬಂದಿದ್ದ ಕೇರಳ ಮೂಲದ ಟ್ರೆಕ್ಕರ್ ಮಡಿಕೇರಿ: ಪ್ರವಾಸಕ್ಕೆ ಬಂದಿದ್ದ ಮಹಿಳೆಯೊಬ್ಬರು ಚಾರಣಕ್ಕೆ ತೆರಳಿದ್ದಾಗ ನಾಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆಯ…

53 mins ago

ಓದುಗರ ಪತ್ರ: ಹಿರಿಯ ನಾಗರಿಕರಿಗೆ ರೈಲ್ವೆ ರಿಯಾಯಿತಿ

ಸೌಲಭ್ಯ ಮತ್ತೆ ಮುಂದುವರಿಯಲಿ ಕಳೆದ ಆರ್ಥಿಕ ವರ್ಷದಲ್ಲಿ (೨೦೨೫-೨೬), ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ರೂ.೪೪೯.೧೩ ಕೋಟಿ ರೂಪಾಯಿಗೂ ಹೆಚ್ಚು…

57 mins ago

ಓದುಗರ ಪತ್ರ: ಮರುಪರಿಶೀಲನೆ ಅತ್ಯಗತ್ಯ

ಇತ್ತೀಚಿನ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ( ಎಫ್. ಸಿ. ಆರ್. ಎ) ತಿದ್ದುಪಡಿಗಳು ಕೇವಲ ನಿಯಮಗಳಲ್ಲ, ಅವು ದಶಕಗಳಿಂದ…

60 mins ago

ಬಸ್‌ನಲ್ಲಿ ಚಿನ್ನಾಭರಣ ಕಳವು

೧೮ ಲಕ್ಷ ರೂ. ಮೌಲ್ಯದ ಒಡವೆಗಳ ಅಪಹರಣ ಮೈಸೂರು: ನಗರ ಸಾರಿಗೆ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಬ್ಯಾಗ್‌ನಲ್ಲಿದ್ದ ಸುಮಾರು ೧೮…

1 hour ago

ಮೈಸೂರು ಡಿಸಿ ಬಂಧನಕ್ಕೆ ವಾರಂಟ್

ಪಾಲನೆಯಾಗದ ಕೋರ್ಟ್ ಆದೇಶ: ಡಿಸಿಗೆ ನೋಟಿಸ್ ಮೈಸೂರು: ಭೂ ವ್ಯಾಜ್ಯ ಪ್ರಕರಣವೊಂದಕ್ಕೆ ಸಂಬಂಽಸಿದಂತೆ ನ್ಯಾಯಾಯದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ…

1 hour ago