ಮೈಸೂರು ನಗರ

ಸಹಕಾರ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡರ ಕುಟುಂಬ ಮುಗಿಸೋದು ಸಿಎಂ ಪ್ಲಾನ್: ಎಂಎಲ್‌ಸಿ ಎಚ್.ವಿಶ್ವನಾಥ್‌

ಮೈಸೂರು: ಸಹಕಾರ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡ ಕುಟುಂಬ ಮುಗಿಸೋಕೆ ಸಿಎಂ ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಎಚ್.ವಿಶ್ವನಾಥ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಂಸಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಶಾಸಕರ ಸ್ಪರ್ಧೆ ವಿಚಾರಕ್ಕೆ ಕುರಿತಂತೆ ಪ್ರತಿಕ್ರಿಯಿಸಿದರು.

ಜಿ.ಟಿ.ದೇವೇಗೌಡ, ಹರೀಶ್ ಗೌಡ ಸಹಕಾರ ಕ್ಷೇತ್ರದಲ್ಲಿ ಇದ್ದಾರೆ. ಸಹಕಾರ ಕ್ಷೇತ್ರದಲ್ಲಿ ಇವರ ಹಿಡಿತ ತಪ್ಪಿಸಬೇಕು. ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ. ಕಾರ್ಯಕರ್ತರು ಚುನಾವಣೆಗೆ ನಿಂತರೆ ಹಣದ ಕೊರತೆ ಆಗುತ್ತೆ. ಶಾಸಕರು ನಿಂತರೇ ಹಣ ಖರ್ಚು ಮಾಡುತ್ತಾರೆ. ಸಹಕಾರ ಕ್ಷೇತ್ರದಲ್ಲಿ ಜಿಟಿ ದೇವೇಗೌಡ ಕುಟುಂಬ ಮುಗಿಸೋದು ಸಿಎಂ ಪ್ಲಾನ್ ಎಂದು ಆರೋಪಿಸಿದರು.

ಇನ್ನು ಅಧಿಕಾರ ಇರುವವರೇ ಮತ್ತೆ ಮತ್ತೆ ಅಧಿಕಾರ ಪಡೆದರೆ ಹೇಗೆ, ಇತರರಿಗೂ ಚುನಾವಣೆಗಳಲ್ಲಿ ಸ್ಪರ್ಧೆಸುವಂತೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ನಂಜನಗೂಡಿನಲ್ಲಿ ಆಟೋಗಳಿಗೆ ಮೀಟರ್ ದರ ಜಾರಿಯಾಗಲಿ

ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ. ಆದರೆ ಕೆಲವು ಆಟೋ ಚಾಲಕರು…

2 mins ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ‘ನಿಯೋನೇಟಲ್ ಕೇರ್’ ಸೇವೆಯ ಮಾತೆ ಡಾ.ಅರ್ಮಿಡಾ ಫೆರ್ನಾಂಡೀಸ್

ಏಷ್ಯಾದ ಪ್ರಪ್ರಥಮ ಎದೆಹಾಲಿನ ಬ್ಯಾಂಕನ್ನು ಆರಂಭಿಸಿದ ಕೀರ್ತಿ ಕರ್ನಾಟಕದಲ್ಲಿ ಹುಟ್ಟಿದ, ಗೋವಾ ಮೂಲದ, ಈಗ ಮುಂಬೈಯಲ್ಲಿ ತನ್ನ ಸಾಮಾಜಿಕ ಕಾರ್ಯಗಳನ್ನು…

4 mins ago

ಮಲೆ ಮಹದೇಶ್ವರ ಬೆಟ್ಟ| ಕಾಲ್ನಡಿಗೆ ಪಾದಯಾತ್ರಿಗಳಿಗೆ ಸೌಲಭ್ಯ ಕಲ್ಪಿಸಿ: ಡಿಸಿಎಂ ಡಿಕೆಶಿ ಸೂಚನೆ

ಮಹಾದೇಶ್‌ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಸಹ…

8 mins ago

ಕೊಳ್ಳೇಗಾಲ: ಕೇರಳ ಲಾಟರಿ ಮಾರಾಟ: ವ್ಯಕ್ತಿಯ ಬಂಧನ

ಕೊಳ್ಳೇಗಾಲ: ಅಕ್ರಮವಾಗಿ ಕೇರಳ ಲಾಟರಿಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಗರ ಮಾಂಬಳ್ಳಿ ಠಾಣೆಯ ಪೊಲೀಸರು ಬಂಧಿಸಿರುವ ಘಟನೆ ಮಂಗಳವಾರ ಜರುಗಿದೆ.…

9 mins ago

ಸ್ವಚ್ಛತೆಗೆ ಮೈಸೂರಿನ ಮಾರ್ಗದರ್ಶನ!

ಕೆ.ಬಿ.ರಮೇಶನಾಯಕ ರಾಯಚೂರು, ಮಸ್ಕಿ ತಂಡಗಳಿಗೆ ತರಬೇತಿ; ಸ್ವಚ್ಛ ಶೆಹರ್ ಯೋಜನೆಯಡಿ ಒಡಂಬಡಿಕೆ ಮೈಸೂರು: ಸ್ವಚ್ಛತೆಯಲ್ಲಿ ಹಲವು ಬಾರಿ ದೇಶದ ಗಮನ…

10 mins ago