ಮೈಸೂರು: ಹನಗೋಡು ಸೊಸೈಟಿಯಲ್ಲಿ ನಾಲ್ಕು ಕೋಟಿ ಅವ್ಯವಹಾರ ನಡೆದಿದ್ದು, ರೈತರು ಕಟ್ಟಿರುವ ಹಣವನ್ನು ಅಲ್ಲಿನ ಕಾರ್ಯದರ್ಶಿ ಕೊಂಡೊಯ್ದಿದ್ದಾನೆ ಎಂದು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹನಗೋಡು ಸೊಸೈಟಿಯಲ್ಲಿ ಸತ್ತವರ ಹೆಸರಿನಲ್ಲೂ ಸಾಲ ಮಂಜೂರು ಮಾಡಿ ಹಣ ತಿಂದು ತಿಂದಿದ್ದಾರೆ. ಇದೀಗ ಸತ್ತವರ ಮಕ್ಕಳ ಕುಟುಂಬ ಸದಸ್ಯರಿಗೆ ನೋಟಿಸ್ ಬಂದಿವೆ ಎಂದು ಆರೋಪಿಸಿದರು.
ಇನ್ನು ಹುಣಸೂರಿನ ಹಾಲಿ ಶಾಸಕರು ನಿನ್ನೆ ಅನಗತ್ಯವಾಗಿ ನನ್ನನ್ನು ಎಳೆದು ತಂದಿದ್ದಾರೆ. ಅವರು ಎಲ್ಲಿಯೂ ನನ್ನ ಹೆಸರನ್ನು ಪ್ರಸ್ತಾಪ ಮಾಡಿಲ್ಲ. ಆದರೆ ಹದಿನೈದು ವರ್ಷ ಅಧಿಕಾರ ನಡೆಸಿದವರು ಎಂದು ಹೇಳಿದ್ದಾರೆ. ಹಾಗಾಗಿ ಬಹುತೇಕ ಮಾಧ್ಯಮಗಳಲ್ಲಿ ಮಾಜಿ ಶಾಸಕರ ಹೆಸರು ಹೇಳದೇ ಎಂದು ವರದಿಯಾಗಿದೆ. ನನ್ನ ಹದಿನೈದು ವರ್ಷಗಳ ಅವಧಿಯಲ್ಲಿ ಜನಪರ ಕಾರ್ಯಗಳನ್ನು ಮಾಡಿದ್ದೇನೆ. 2008ರಲ್ಲಿ ಗೊಬ್ಬರಕ್ಕೆ ಅಭಾವ ಉಂಟಾದಾಗ ಹುಣಸೂರು ರೈತರಿಗೆ ವೈಯಕ್ತಿಕವಾಗಿ 36 ಲಕ್ಷ ರೂಪಾಯಿ ವೆಚ್ಚದಲ್ಲಿ 27 ಸೊಸೈಟಿಗಳಿಗೆ ಗೊಬ್ಬರ ಪೂರೈಕೆ ಮಾಡಿದೆ. ನಾನು ರೈತ ವಿರೋಧೀನಾ? ಎಂದು ಪ್ರಶ್ನೆ ಮಾಡಿದರು.
ಇನ್ನು ದೇವರಾಜ ಅರಸು ಅವರ ಕಾಲಿನ ಧೂಳಿಗೂ ನಾವು ಸಮವಲ್ಲ. ಅರಸುರವರು ಕ್ಷೇತ್ರಕ್ಕೆ 4 ಏತ ನೀರಾವರಿ ಯೋಜನೆ ತಂದಿದ್ದಾರೆ. ನಾನು 11 ಏತ ನೀರಾವರಿ ಯೋಜನೆ ಮಾಡಿದ್ದೇನೆ. 21 ಸಾವಿರ ಹೆಕ್ಟೇರ್‌ಗೆ ನೀರು ಕೊಟ್ಟಿದ್ದೇನೆ. ನಾಲೆಗಳ ಆಧುನೀಕರದ ಮೂಲಕ 38 ಸಾವಿರ ಹೆಕ್ಟೇರ್ ಪ್ರದೇಶದ ರೈತರಿಗೆ ಅನುಕೂಲ ಮಾಡಿದ್ದೇನೆ. ಉಂಡುವಾಡಿ ಯೋಜನೆ ತಂದಿದ್ದೇ ನಾನು. ಕೆರೆಗಳಿಗೆ ನೀರು ತುಂಬುವ ಯೋಜನೆ ಜಾರಿಗೊಳಿಸಿದೆ. ರೈತರಿಗೋಸ್ಕರ ನಾನು ಇಷ್ಟೆಲ್ಲಾ ಮಾಡಿದ್ದೇನೆ. ಹಾಲಿ ಶಾಸಕರು ನಿನ್ನೆ ಧರ್ಮಾಪುರ ಮತ್ತು ಹೆಗ್ಗಂದೂರು ಸೊಸೈಟಿಗಳಿಗೋಸ್ಕರ ಹೋರಾಟ ಮಾಡಿದ್ದಾರೆ. ಆದರೆ ರೈತ ಕಟ್ಟಿದ ಹಣವನ್ನು ಸೆಕ್ರೆಟರಿಗಳು ತಿಂದುಕೊಂಡಿದ್ದಾರೆ. ಪರಿಣಾಮ ರೈತರು ಸಾಲ ತೀರಿಸಿದ್ದರೂ ಈಗ ಸಾಲ ಸಿಗುತ್ತಿಲ್ಲ. ಹಣ ಗುಳುಂ ಮಾಡಿರುವವರ ಪರವಾಗಿ ಇವರು ಹೋರಾಟ ಮಾಡಿದ್ದಾರೆ. ಸೆಕ್ರೆಟರಿಗಳನ್ನು ರಕ್ಷಣೆ ಮಾಡಲು ಹೋರಾಟ ಮಾಡಿದ್ದಾರೆ. ಇವರ ಹೋರಾಟ ರೈತರಿಗಾಗಿ ನಡೆದಿಲ್ಲ. ಕೇವಲ 91 ಜನರಿಗೋಸ್ಕರ ನಡೆದಿದೆ. ಧರ್ಮಾಪುರ ಸೊಸೈಟಿಯಲ್ಲಿ ಆಡಿಟ್ ನಡೆದಿಲ್ಲ. ಆಡಿಟ್ ನಡೆಯದೇ ಸಾಲ ಹೇಗೆ ಕೊಡುತ್ತಾರೆ ಎಂದು ಪ್ರಶ್ನಿಸಿದರು.
ಮಂಡ್ಯ : ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಏಪ್ರಿಲ್ 15) ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರಕ್ಕೆ ಮೊದಲ…
ವಾಷಿಂಗ್ಟನ್ : ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ-ಇರಾನ್ ಮಾತುಕತೆ ವಿಫಲವಾದ ನಂತರ, ಎರಡು ವಾರಗಳ ಕದನ ವಿರಾಮ ಕೊನೆಗೊಳ್ಳುವ ಮೊದಲು,…
ಬೆಂಗಳೂರು : ಅಸ್ಪೃಶ್ಯತೆ ಆಚರಣೆ, ಅಸಮಾನತೆ ವಿರುದ್ಧದ ಹೋರಾಟಗಳಲ್ಲಿ ಪಾಲ್ಗೊಂಡು, ಸಮ ಸಮಾಜ ನಿರ್ಮಾಣದ ಹಾದಿಯಲ್ಲಿ ಛಾಪು ಮೂಡಿಸಿದ ಐವರು…
ಟೆಹ್ರಾನ್ : ಅಮೆರಿಕ ಸರ್ಕಾರ ಹೇರಿದ ನೌಕಾ ದಿಗ್ಬಂಧನ ಎದುರಿಸಿ ಇರಾನ್‌ನ ಹಡಗುಗಳು ಹಾರ್ಮುಜ್ ಜಲಸಂಧಿ ದಾಟುವುದನ್ನು ಮುಂದುವರಿಸಿವೆ. ಕನಿಷ್ಠ…
ಮೈಸೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಬದುಕು ಮತ್ತು ಅವರು ಪ್ರತಿಪಾದಿಸಿದ ಸಮಾನತೆಯ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ…
ಚಾಮರಾಜನಗರ : ತಾಲ್ಲೂಕಿನ ವಿ.ಸಿ.ಹೊಸೂರು ಗ್ರಾಮಸ್ಥರು ತಮ್ಮ ಊರಿಗೆ ಇನ್ನೂ ಪೂರ್ವ ಮುಂಗಾರು ಮಳೆ ಪ್ರವೇಶ ಆಗದ ಹಿನ್ನೆಲೆಯಲ್ಲಿ ಮಳೆಗಾಗಿ…