ಮೈಸೂರು ನಗರ

ಮೈಸೂರು| ಅಗ್ನಿ ಅವಘಡ: ವೃದ್ಧ ಸಜೀವ ದಹನ

ಮೈಸೂರು: ಅಗ್ನಿ ಅವಘಡ ಸಂಭವಿಸಿದ ಪರಿಣಾಮ ವೃದ್ಧ ಸಜೀವ ದಹನವಾಗಿರುವ ಘಟನೆ ಮೈಸೂರಿನ ಮಂಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಿದ್ದನಾಯ್ಕ ಎಂಬುವವರೇ ಮೃತ ದುರ್ದೈವಿಯಾಗಿದ್ದಾರೆ. ಸಿದ್ದನಾಯ್ಕ ಅವರು ಪತ್ನಿ ಲಕ್ಷ್ಮೀಯೊಂದಿಗೆ ವಾಸವಾಗಿದ್ದರು. ಬೆಳಿಗ್ಗೆ ಪತ್ನಿ ಲಕ್ಷ್ಮೀ ಮೊಮ್ಮಗಳ ಜೊತೆ ಹೊರ ಹೋದ ಸಂದರ್ಭದಲ್ಲಿ ಈ ಘಟನೆ ಜರುಗಿದೆ.

ಇದನ್ನು ಓದಿ :ಶ್ರೀರಂಗಪಟ್ಟಣ| ಕಾವೇರಿ ನದಿ ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ

ದಂಪತಿಗಳು ಮನೆಯಲ್ಲಿ ಹಳೆಯ ಪದಾರ್ಥಗಳನ್ನು ಸಂಗ್ರಹಿಸಿ ಇಟ್ಟಿದ್ದರು. ಹೀಗಿರುವಾಗಲೇ ಬೀಡಿ ಸೇದಿ ಎಸೆದ ಪರಿಣಾಮ ಬೆಂಕಿ ಕಾಣಿಸಿಕೊಂಡು ಮನೆ ತುಂಬ ವ್ಯಾಪಿಸಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಮನೆಯಿಂದ ಹೊರಬರಲು ಸಾಧ್ಯವಾಗದೇ ಸಿದ್ದನಾಯ್ಕ ಸಜೀವ ದಹನವಾಗಿದ್ದಾರೆ.

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಮಂಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಂದೋಲನ ಡೆಸ್ಕ್

Recent Posts

ಹಡುಗುಗಳ ಮೇಲೆ ದಾಳಿ : ಇಬ್ಬರು ಭಾರತೀಯರ ಸಾವು

ಹೊಸದಿಲ್ಲಿ : ಪಶ್ಚಿಮ ಏಷ್ಯಾದ ಸಂಘರ್ಷ ಪೀಡಿತ ಸಮುದ್ರ ವಲಯದಲ್ಲಿ ವ್ಯಾಪಾರಿ ಹಡಗುಗಳ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯರು…

41 mins ago

ಗುಂಡ್ಲುಪೇಟೆ | ಕತ್ತು ಕೂಯ್ದು ವ್ಯಕ್ತಿಯ ಬರ್ಬರ ಹತ್ಯೆ

ಗುಂಡ್ಲುಪೇಟೆ : ಪಟ್ಟಣದ ಹೊರವಲಯದ ವಿಜಯಪುರ ಅಮಾನಿ ಕೆರೆಯ ಬಳಿ ವ್ಯಕ್ತಿಯೊಬ್ಬ ಬರ್ಬರವಾಗಿ ಕೊಲೆಯಾಗಿರುವ ಘಟನೆ ನಡೆದಿದೆ. ತಾಲ್ಲೂಕಿನ ಮೂಖಹಳ್ಳಿ…

53 mins ago

ಬಿಡುಗಡೆಗೂ ಮುನ್ನವೆ ದಾಖಲೆ ಬರೆದ ಧುರಂಧರ್‌ -2 ; ಮುಂಗಡ ಬುಕ್ಕಿಂಗ್‌ನಲ್ಲಿ ದಾಖಲೆ ಗಳಿಕೆ

ಮುಂಬೈ : ರಣವೀರ್ ಸಿಂಗ್ ಅಭಿನಯದ ಬಹು ನಿರೀಕ್ಷಿತ ‘ಧುರಂಧರ್‌ : ದಿ ರೆವೆಂಜ್‌ನ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ…

1 hour ago

ಹೊರ್ಮುಜ್‌ನಲ್ಲಿ ಹಡಗುಯಾನ ಅಡಚಣೆ : ಎಲ್ಲ ದೇಶಗಳಿಗೆ ಎಚ್ಚರಿಕೆ ನೀಡಿದ ವಿಶ್ವಸಂಸ್ಥೆ

ವಿಶ್ವಸಂಸ್ಥೆ : ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಹೊರ್ಮುಜ್ ಜಲಸಂಧಿ ಮುಚ್ಚಿದರೆ ಜಾಗತಿಕ ವ್ಯಾಪಾರ ಮತ್ತು ಅಭಿವೃದ್ಧಿ ಕುಂಠಿತದ ಜೊತೆಗೆ…

2 hours ago

ಮೈಸೂರು | ತಾಲ್ಲೂಕು ಕಚೇರಿಗೆ ಆಯುಕ್ತರ ದಿಢೀರ್‌ ಭೇಟಿ, ಕಡತ ಪರಿಶೀಲನೆ

ಮೈಸೂರು : ಮೈಸೂರು ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಅವರು ಬುಧವಾರ ತಾಲ್ಲೂಕು ಕಛೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ…

2 hours ago

ರಾಜ್ಯದಲ್ಲಿ ಏ.15ರಿಂದ ವಸತಿ ಗಣತಿ

ಬೆಂಗಳೂರು : ರಾಜ್ಯದಲ್ಲಿ ಏಪ್ರಿಲ್ 15 ರಿಂದ ಮೇ 15 ರವರೆಗೆ ’ಮನೆಗಳ ಪಟ್ಟಿ ಮತ್ತು ವಸತಿ ಗಣತಿ’ ಪ್ರಕ್ರಿಯೆ…

2 hours ago