rowdy sheeter avva madhesh
ಮೈಸೂರು: ಹಫ್ತ ಕೇಳಿದ ರೌಡಿ ಶೀಟರ್ ಅವ್ವ ಮಾದೇಶ್ (Rowdy Sheeter Avva Madhesh) ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮೈಸೂರಿನ ಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃಷ್ಣಕಾಮಿ ರೆಡ್ಡಿ ಎಂಬಾತನಿಗೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ.
ಗೋಕುಲಂ ಬಡಾವಣೆಯಲ್ಲಿ ಬರಿಸ್ಥಾ ಕೆಫೆ ತೆರೆಯಲು ಮಂಚೇಗೌಡನಕೊಪ್ಪಲಿನ ನಿವಾಸಿ ರೆಡ್ಡಿ ಮುಂದಾಗಿದ್ದರು. ಈ ವೇಳೆ ಕೆಫೆ ಆರಂಭಿಸಬೇಕಾದರೆ 5 ಲಕ್ಷ ರೂ ಹಣ ನೀಡಬೇಕು ಎಂದು ಅವ್ವ ಮಾದೇಶ್ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನಾಗು ಎಂಬಾತ ಬಿಲ್ಡಿಂಗ್ ಬಳಿ ಬಂದು ಗಲಾಟೆ ಮಾಡಿದ್ದಲ್ಲದೇ, ಅವ್ವ ಮಾದೇಶ್ ದೂರವಾಣಿ ಮೂಲಕ ಹೆದರಿಸಿದ್ದ ಎನ್ನಲಾಗಿದೆ. ಮನೆಗೆ ಬಾ ಎಂದು ಧಮ್ಕಿ ಹಾಕಿದ್ದು, ಐದು ಲಕ್ಷ ಕೊಡುವವರೆಗೆ ಕೆಲಸ ಮಾಡಲು ಬಿಡಲ್ಲ ಎಂದು ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಲಂ 308(2) ರೆವಿ 3/4 ಭಾರತೀಯ ನ್ಯಾಯ ಸಂಹಿತೆ ಪ್ರಕಾರ ದೂರು ದಾಖಲಾಗಿದೆ.
ಇನ್ನು ಅವ್ವ ಮಾದೇಶ ಹುಣಸೂರಿನ ಜೋಡಿ ಕೊಲೆ ಆರೋಪಿಯಾಗಿದ್ದು, ಪಡುವಾರಹಳ್ಳಿ ದೇವು ಮರ್ಡರ್ ಕೇಸ್ ನಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಪರಿಣಾಮ ಹಲವು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದಿದ್ದಾನೆ.
ಪಿರಿಯಾಪಟ್ಟಣ: ಮಹಿಳೆಯರು ಇವತ್ತು ಕಟ್ಟುಪಾಡುಗಳನ್ನು ಒಡೆದು ಮುಂದೆ ಸಾಗುತ್ತಿದ್ದಾರೆ. ಸ್ವಾಭಿಮಾನದ ಜೀವನ ಕಂಡುಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ…
ಮೈಸೂರು: ಸಮಾಜದ ನೈತಿಕ ಬೆಳವಣಿಗೆಗೆ ಮಹನೀಯರ ಆದರ್ಶಗಳೇ ದಾರಿ ದೀಪ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಹೇಳಿದರು.…
ಆದಿತ್ಯ ಧರ್ ನಿರ್ದೇಶನದ ರಣವೀರ್ ಸಿಂಗ್ ಅಭಿನಯದ ಧುರಂಧರ್ 2 ಸಿನಿಮಾ ಬಿಡುಗಡೆಯಾದ ಒಂದೇ ವಾರದಲ್ಲಿ 1000 ಕೋಟಿ ರೂ…
ಮೈಸೂರು : ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ:ಹೆಚ್.ಸಿ ಮಹದೇವಪ್ಪ ಅವರು ಇಂದು(ಮಾರ್ಚ್.28) 120 ಕೋಟಿ ರೂ…
ಮೈಸೂರು : ನಗರದ ಹೊರ ವರ್ತುಲ ರಸ್ತೆಯಲ್ಲಿ ಹಗಲು ವೇಳೆ ಸಾಕಷ್ಟು ವಾಹನಗಳು ಹಾಗೂ ಸಾರ್ವಜನಿಕರು ಓಡಾಡಲು ಸ್ವಚ್ಛತೆ ಕೊರತೆ…
ಬೆಂಗಳೂರು: ಐಪಿಎಲ್ ಪಂದ್ಯಗಳಿಗೆ ಸಂಬಂಧಿಸಿದಂತೆ ನನ್ನ ಹೆಸರಿನಲ್ಲಿ ಯಾವುದೇ ಟಿಕೆಟ್ ಅಥವಾ ಪಾಸ್‌ಗಳನ್ನು ವಿತರಿಸಬಾರದೆಂದು ಬಿಜೆಪಿ ಶಾಸಕ ಸುರೇಶ್ ಕುಮಾರ್…