ಮೈಸೂರು ನಗರ

ಮೈಸೂರಿನ ಕೇನ್ಸ್‌ ಟೆಕ್ನಾಲಜಿ ವಿಸ್ತರಣೆ : ಎಂ.ಬಿ ಪಾಟೀಲ್‌ ಭರವಸೆ

ಮೈಸೂರು : ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಕೇನ್ಸ್ ಟೆಕ್ನಾಲಜೀಸ್ ಮತ್ತು ಸೈಯಂಟ್ ಡಿ.ಎಲ್.ಎಂ ಕಂಪನಿಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಬುಧವಾರ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಹೂಡಿಕೆ ವಿಸ್ತರಣೆ ಮಾಡುವಂತೆ ಕೋರಿದರಲ್ಲದೆ, ಇದಕ್ಕೆ ಬೇಕಾದ ಭೂಮಿ ಮತ್ತಿತರ ಸೌಲಭ್ಯಗಳನ್ನು ಕ್ಷಿಪ್ರಗತಿಯಲ್ಲಿ ಒದಗಿಸುವ ಭರವಸೆ ನೀಡಿದರು.

‘ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಉತ್ಪಾದನೆಗೆ ಹೆಸರಾಗಿರುವ ಕೇನ್ಸ್ ಟೆಕ್ನಾಲಜೀಸ್ ಕಂಪನಿಯು ಚಾಮರಾಜನಗರದಲ್ಲಿ ತನ್ನ ಘಟಕವನ್ನು ವಿಸ್ತರಿಸಲು ೨೦ ಎಕರೆ ಭೂಮಿ ಕೇಳಿದೆ. ಈಗ ಅಲ್ಲಿ ಕಂಪನಿಗೆ ಹೊಂದಿಕೊಂಡಿರುವ ಭೂಮಿಯು ಕೃಷಿಯೇತರ ಉದ್ದೇಶಕ್ಕೆ ಮೀಸಲಾಗಿದೆ. ಇದನ್ನು ಬಗೆಹರಿಸಿ ಕಂಪನಿಗೆ ಭೂಮಿ ಕೊಡಲಾಗುವುದು ಎಂದು ಭರವಸೆ ನೀಡಿದರು.

ಏಳು ರಾಜ್ಯಗಳಲ್ಲಿ ಅಸ್ತಿತ್ವ ಹೊಂದಿರುವ ಕಂಪನಿಯು ಕರ್ನಾಟಕದಲ್ಲಿ ಮತ್ತಷ್ಟು ಹೂಡಿಕೆ ಮಾಡಬೇಕು. ಚಾಮರಾಜನಗರದಲ್ಲಿ ಕಂಪನಿಯು ಮುಂದಿನ ವರ್ಷದ ವೇಳೆಗೆ ಒಟ್ಟು ೧,೫೦೦ ಕೋಟಿ ರೂ. ಹೂಡಿಕೆಯಾದಂತಾಗಲಿದೆ. ಜತೆಗೆ ೩ ಸಾವಿರ ಜನ ಉಳಿದುಕೊಳ್ಳುವಂಥ ಹಾಸ್ವೆಲ್ ನಿರ್ಮಿಸಲಿದೆ’ ಎಂದು ಹೇಳಿದರು.

ಕೇನ್ಸ್ ಕಂಪನಿಯು ೧೯೮೮ರಲ್ಲಿ ಸ್ಥಾಪನೆಯಾದ ದಿನದಿಂದಲೂ ಮೈಸೂರನ್ನು ಕೇಂದ್ರ ಕಚೇರಿಯಾಗಿ ಹೊಂದಿದೆ. ೭೦ ಜನರಿಂದ ಆರಂಭವಾದ ಚಾಮರಾಜನಗರ ಘಟಕದಲ್ಲಿ ಈಗ ೭೦೦ ಉದ್ಯೋಗಿಗಳಾಗಿದ್ದಾರೆ. ಕಂಪನಿಯು ತನ್ನ ಉತ್ಪನ್ನಗಳನ್ನು ರೈಲ್ವೇಸ್, ಐಒಟಿ, ಐಟಿ, ವೈದ್ಯಕೀಯ, ಆಟೋಮೋಟೀವ್, ಏರೋಸ್ಪೇಸ್ ಮತ್ತು ರಕ್ಷಣಾ ವಲಯಗಳಿಗೆ ಸಮರ್ಥವಾಗಿ ಪೂರೈಸುತ್ತಿದೆ. ಕಂಪನಿಯು ಒಟ್ಟಾರೆಯಾಗಿ ೧,೫೦೦ ಉದ್ಯೋಗಿಗಳನ್ನು ಹೊಂದಿದ್ದು, ೩ ಖಂಡಗಳ ೨೬ ದೇಶಗಳಲ್ಲಿ ೨೫೦ಕ್ಕೂ ಹೆಚ್ಚು ಗ್ರಾಹಕ ಸಂಸ್ಥೆಗಳ ಜಾಲವನ್ನು ಹೊಂದಿದೆ ಎಂದು ತಿಳಿಸಿದರು.

ಇದನ್ನೂ ಓದಿ:-ಎಸ್‌ಐಆರ್‌ ಜಾರಿಯಿಂದ ಪ್ರಜಾಪ್ರಭುತ್ವ ದುರ್ಬಲ: ಸಂಸದೆ ಪ್ರಿಯಾಂಕಾ ಗಾಂಧಿ

ಮುಳುವಾಡದಲ್ಲೂ ಸ್ಥಾಪಿಸಲು ಮನವಿ:
ಪಿಸಿಬಿ ತಯಾರಿಸುವ ಕೇನ್ಸ್ ಕಂಪನಿಯು ವಿಜಯಪುರದ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ಕೂಡ ಒಂದು ಪಿಸಿಬಿ ಉತ್ಪಾದನಾ ಘಟಕ ಸ್ಥಾಪಿಸಬೇಕು; ಅಲ್ಲಿ ವಿದ್ಯುತ್ ಮತ್ತು ನೀರಿಗೆ ಯಾವ ಕೊರತೆಯೂ ಇಲ್ಲ. ಇದರಿಂದ ಕೈಗಾರಿಕಾ ವಿಕೇಂದ್ರೀಕರಣವನ್ನು ಕೂಡ ಸಾಽಸಿದಂತಾಗುತ್ತದೆ ಎಂದು ಮನವಿ ಮಾಡಿಕೊಂಡರು. ಜತೆಗೆ ಕೆಜಿಎಫ್ ನಲ್ಲಿ ಕೂಡ ಕೈಗಾರಿಕೆಗೆ ಭೂಮಿ ಲಭ್ಯವಿದೆ. ಕೇನ್ಸ್ ಕಂಪನಿ ಅಲ್ಲೂ ಘಟಕ ಸ್ಥಾಪಿಸಲು ಮನಸ್ಸು ಮಾಡಬೇಕು ಎಂದು ಸಚಿವರು ಪ್ರಸ್ತಾಪಿಸಿದರುಕೇನ್ಸ್ ಟೆಕ್ನಾಲಜೀಸ್ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ರಮೇಶ್ ಆರ್ ಕಣ್ಣನ್, ಅಧ್ಯಕ್ಷೆ ಸವಿತಾ ರಮೇಶ್, ನಿರ್ದೇಶಕ ಜಯರಾಂ,ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಆಯುಕ್ತ ರಾದ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಎಂ.ಮಹೇಶ್ ಹಾಜರಿದ್ದರು.

ಸೈಯಂಟ್ ಕಂಪನಿಗೂ ಭೇಟಿ: ಇದೇ ಸಂದರ್ಭದಲ್ಲಿ ಸಚಿವರು ಮತ್ತೊಂದು ಎಲೆಕ್ಟ್ರಾನಿಕ್ ಉತ್ಪನ್ನಗಳ ಕಂಪನಿಯಾದ ಸೈಯಂಟ್‌ಗೂ ಭೇಟಿ ನೀಡಿ, ಅಲ್ಲಿಯ ಸೌಲಭ್ಯಗಳನ್ನು ವೀಕ್ಷಿಸಿದರು. ಕಂಪನಿಯ ಉನ್ನತಾಽಕಾರಿಗಳು ಕಂಪನಿಯು ಮಾಡುತ್ತಿರುವ ಉನ್ನತ ಮಟ್ಟದ ವಿನ್ಯಾಸ, ಡಿಜಿಟಲ್ ಟ್ವಿನ್ ಕ್ರಿಯೇಷನ್, ದೀರ್ಘಾವಽ ತಾಂತ್ರಿಕ ಸಹಭಾಗಿತ್ವ ಇತ್ಯಾದಿಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. ಕಂಪನಿಯ ಸಿಎಫ್‌ಒ ಆರ್. ಸುಬ್ರಹ್ಮಣ್ಯನ್ ಇದ್ದರು.

ಆಂದೋಲನ ಡೆಸ್ಕ್

Recent Posts

ಅಕ್ರಮ ಗಾಂಜಾ ಮಾರಾಟ : ಮಹಿಳೆ ಪೊಲೀಸ್ ವಶಕ್ಕೆ

ಹನೂರು : ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೋರ್ವಳನ್ನು ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಹನೂರು…

48 mins ago

ಮತಗಳ್ಳತನದ ಹೋರಾಟದಲ್ಲಿ ರಾಜಕೀಯ ಉದ್ದೇಶವಿಲ್ಲ : ಡಿ.ಕೆ.ಶಿವಕುಮಾರ್

ಹೊಸದಿಲ್ಲಿ : ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಾವು ಮತಕಳ್ಳತನದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ…

2 hours ago

10 ವರ್ಷದ ಪ್ರೀತಿಗೆ ಮೋಸ,ಹಣವೂ ದೋಖಾ : ಬೇರೆ ಮದುವೆಗೆ ಮುಂದಾದ ಯುವಕನ ಮನೆಮುಂದೆ ಪ್ರಿಯತಮೆ ಗಲಾಟೆ

ಚಿಕ್ಕಮಗಳೂರು : ಅದೊಂದು ಬಹುಕಾಲದ ಪ್ರೀತಿ, ಪ್ರೀತಿ ಮಾಡಿ, ಪ್ರೇಯಸಿಯಿಂದ ಹಣ ಪಡೆದು, ಇದೀಗ ಬೇರೊಂದು ಮದುವೆಗೆ ಸಿದ್ಧವಾಗಿದ್ದ ಹುಡಗ…

3 hours ago

ವರ್ಷಾಂತ್ಯಕ್ಕೂ ಸಫಾರಿ ಪುನಾರಂಭ ಸಾಧ್ಯತೆ ಕ್ಷೀಣ

ಬಂಡೀಪುರ, ನಾಗರಹೊಳೆಯಲ್ಲಿ ಹೊಸ ವರ್ಷ ಆಚರಿಸಲು ಬಯಸಿದವರಿಗೆ ನಿರಾಸೆ ರೆಸಾರ್ಟ್, ಹೋಟೆಲ್ ಮಾಲೀಕರಿಂದ ಸಫಾರಿ ಪುನಾರಂಭಕ್ಕೆ ಒತ್ತಡ? ಮೈಸೂರು :…

4 hours ago

ಪ್ರತಿಭಟನೆ ಮಾಹಿತಿ ತಿಳಿದು ಕೆರೆಗೆ ನೀರು ತುಂಬಿಸಿದ ಅಧಿಕಾರಿಗಳು!

ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ, ಆಲನಹಳ್ಳಿ, ಜಿ. ಬಿ. ಸರಗೂರು ವ್ಯಾಪ್ತಿಯ ಐದು ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷಿ…

7 hours ago

ಓದುಗರ ಪತ್ರ | ರಸ್ತೆ ದುರಸ್ತಿ ಮಾಡಿ

ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಎದುರಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಲ್ಲೆಡೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು,…

7 hours ago