ಮೈಸೂರು: ಮುಡಾ ಮುಖಾಂತರವೇ ಇ-ಖಾತೆ ಮಾಡಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸುತ್ತೇನೆ ಎಂದು ಮೈಸೂರು ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸುಧಾಕರ್ ಶೆಟ್ಟಿ ಅವರು, ಮುಡಾ, ತನ್ನ ಅಡಿಯಲ್ಲಿದ್ದ ಎಲ್ಲಾ ಖಾಸಗಿ ಲೇಔಟ್‌ಗಳ ನಿವೇಶನಗಳ ಇ-ಖಾತೆ ಮಾಡಿಸಲು ಬೇರೆ ಬೇರ ಪಂಚಾಯಿತಿಗಳಿಗೆ ದಾಖಲೆಗಳನ್ನು ಕಳಿಸಿಕೊಟ್ಟಿದೆ. ಅಲ್ಲಿನ ಸ್ಥಳೀಯ ಪಂಚಾಯಿತಿ ಸದಸ್ಯರುಗಳು ಇದನ್ನು ತಮ್ಮ ಸ್ವಂತ ಆದಾಯದ ಮೂಲವನ್ನಾಗಿ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಇ-ಖಾತೆಯಿಂದ ಮುಡಾಗೆ ಹೋಗುತ್ತಿದ್ದ ಟ್ಯಾಕ್ಸ್ ಈಗ ಸ್ಥಳಿಯ ಪಂಚಾಯಿತಿಗಳಿಗೆ ಹೋಗಲಿದೆ ಎಂದು ಹೇಳಿದ್ದಾರೆ.
ಇ-ಖಾತೆ ನಂಬಿ ಬ್ಯಾಂಕ್ ಲೋನ್ ಅಥವಾ ಕಟ್ಟಡ ಕಟ್ಟುವುದಕ್ಕೆ ಹೋಗುವ ಲಕ್ಷಾಂತರ ನಿವೇಶನದಾರರಿಗೆ ಇ-ಖಾತೆ ಸಿಗಲು ತೊಂದರೆಯಾಗಲಿದೆ. ಪಂಚಾಯಿತಿ ಸದಸ್ಯರು ಕೇಳುವಷ್ಟು ಹಣ ಕೊಟ್ಟು ಇ-ಖಾತೆ ಮಾಡಿಸುವ ಪರಿಣಾಮ ಎದುರಾಗಿದೆ. ಆದ್ದರಿಂದ ಮುಡಾ ಮುಖಾಂತರವೇ ಇ-ಖಾತೆ ಮಾಡಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ.
ಕಲ್ಕತ್ತಾ : ದೇಶದ ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು, ನ್ಯಾಯ, ಸ್ವಾತಂತ್ರ್ಯ,…
ಉಡುಪಿ : ಐಲ್ಯಾಂಡ್‌ಗಳನ್ನೂ ಸೇರಿಸಿಕೊಂಡು, ಸಂಪೂರ್ಣ ಕರಾವಳಿ ಭಾಗದಲ್ಲಿ ಹೊಸ ದೃಷ್ಟಿಕೋನದಿಂದ ಪ್ರವಾಸೋದ್ಯಮ ಬೆಳೆಸುವುದಕ್ಕೆ ನಾವು ಉತ್ಸುಕರಾಗಿದ್ದೇವೆ. ಇದು ಕೇವಲ…
ಸೋಮವಾರಪೇಟೆ : ಸಮೀಪದ ಕಾಜೂರು ಗ್ರಾಮದ ಪುಷ್ಪ ಎಂಬುವವರ ಮನೆಗೆ ನೆನ್ನೆ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಮನೆ ಸಂಪೂರ್ಣ…
ಹೊಸದಿಲ್ಲಿ : ಹೊಸದಿಲ್ಲಿಯ ಕರ್ತವ್ಯಪಥದಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಧ್ವಜವನ್ನು ಧ್ವಜಾರೋಹಣ ಮಾಡಿ ಸಂಪ್ರದಾಯ…
ಬೆಂಗಳೂರು : ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ನಗರದ ಮಾಣೆಕ್‌ಷಾ ಪರೇಡ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ…
ಮೈಸೂರು : ಭಾರತದ ಸಂವಿಧಾನವು ನಮ್ಮ ದೇಶದ ಆತ್ಮವಾಗಿದ್ದು, ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಬಾಂಧವ್ಯದ ಮೂಲಭೂತ ತತ್ವಗಳನ್ನು ನೀಡಿದೆ.…