ಅರಮನೆಯಿಂದ ಏಕಾಏಕಿ ಓಡಿಬಂದ ಕಂಜನ್ ಆನೆ
ಮೈಸೂರು: ನಾಡಹಬ್ಬ ದಸರೆಗೆ ಬಂದಿದ್ದ ಧನಂಜಯ ಹಾಗೂ ಕಂಜನ್ ಆನೆ ನಡುವೆ ಗುದ್ದಾಟ ನಡೆದಿದ್ದು, ಬಳಿಕ ಕಂಜನ್ ಆನೆ ಅರಮನೆಯ ಜಯಮಾರ್ತಾಂಡ ದ್ವಾರದ ಆವರಣ ಮೂಲಕ ರಸ್ತೆಗೆ ನುಗ್ಗಿದ ಘಟನೆ ಶುಕ್ರವಾರ ರಾತ್ರಿ 8ರ ಸುಮಾರಿಗೆ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾತಲಾಣದಲ್ಲಿ ಹರಿದಾಡಿದೆ.
ಕಂಜನ್ ಹಾಗೂ ಧನಂಜಯ ನಡುವೆ ಗುದ್ದಾಟ ನಡೆದಿದ್ದು, ಈ ವೇಳೆ ಕಂಜನ್ ಕಾಲಿಗೆ ಕಟ್ಟಿದ್ದ ಸರಪಳಿಯನ್ನು ಬಿಡಿಸಿಕೊಂಡು ಅರಮನೆಯಾಚೆಗೆ ಬಂದಿದ್ದಾನೆ. ಅವನನ್ನು ಹಿಡಿದು ತರಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾವುತರು ಹರಸಾಹಸ ಪಡುತ್ತಿರುವ ದೃಶ್ಯ ಸೆರೆಯಾಗಿದೆ.
ಓಡಿಹೋದ ಕಂಜನ್‌ನನ್ನು ನಿಯಂತ್ರಿಸಿಲು ಧನಂಜಯ ಹಿಂದಿನಿಂದ ಓಡಿತು. ಈ ವೇಳೆ ಜನರು ಆನೆ ಓಡಿಬರುವುದನ್ನು ನೋಡಿ ದಿಕ್ಕಾಪಾಲಾಗಿ ಓಡಿದರು.
ದೊಡ್ಡಕೆರೆ ಮೈದಾನದ ರಸ್ತೆಗೆ ಬಂದಿದ್ದ ಕಂಜನ್, ವಾಹನಗಳನ್ನು ನೋಡಿ ಬೆದರಿ ನಿಂತಿದ್ದಾನೆ. ಮಾವುತರು ಕಾವಾಡಿಗರು ಸಮಾಧಾನ ಪಡಿಸಿ, ಆನೆಗಳ ಆಟೋಟಕ್ಕೆ ಬ್ರೇಕ್ ಹಾಕಿದ್ದಾರೆ. ಸದ್ಯ ಎರಡು ಆನೆಗಳು ಅರಮನೆ ಆವರಣ ಸೇರಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.
ಹಾಸನ: ಹಾಸನ ಜಿಲ್ಲೆಯ ಮಲೆನಾಡು ಭಾಗದ ಗ್ರಾಮಗಳಿಗೆ ಕಾಡಾನೆ ಭೀಮು ಎಂಟ್ರಿ ಕೊಡುತ್ತಿದೆ. ಶಾಂತ ಸ್ವಭಾವದ ಭೀಮನನ್ನು ನೋಡಲು ಜನರು…
ಬೆಂಗಳೂರು: ಇಲ್ಲಿನ ಯಲಹಂಕ, ಫಕೀರ್ ಕಾಲೋನಿ ಹಾಗೂ ವಸೀಮ್ ಲೇಔಟ್ನಲ್ಲಿರುವ ಮುಸ್ಲಿಂ ವಸತಿಗಳ ತೆರವು ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಬುಲ್ಡೋಜರ್…
ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಮಾರ್ಕ್ ಚಿತ್ರಕ್ಕೂ ಪೈರಸಿ…
ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಕಷ್ಟ ಎಂದು ಮಾಜಿ ಎಚ್ಡಿಡಿ ಹೇಳಿಕೆ ಕುರಿತು ಬಿಜೆಪಿ…
ಬೆಂಗಳೂರು: ಸರ್ಕಾರ ಕೆಲವು ತಿಂಗಳ ಹಿಂದೆ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿರುವ ಹೆಸರುಘಟ್ಟ ಕೆರೆ ಸೇರಿದಂತೆ 5678 ಎಕರೆ ಹುಲ್ಲುಗಾವಲು…
ಕಾಸರಗೋಡು: ಹಳಿ ದಾಟುವಾಗ ಯುವಕ ಸಾವನ್ನಪ್ಪಿರುವ ಘಟನೆ ಕಾಸರಗೋಡು ನಿಲ್ದಾಣದಲ್ಲಿ ನಡೆದಿದೆ. ಕೊಡಗು ಜಿಲ್ಲೆ ಗೋಣಿಮಾಗೂರಿನ ಸೋಮವಾರಪುರದ ಚೆನ್ನಯ್ಯ ಅವರ…