mysuru tree cutting case
ಮೈಸೂರು: ನಗರದ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ಕಚೇರಿ ಬಳಿಯ ರಸ್ತೆಯಲ್ಲಿನ ಮರಗಳನ್ನು ರಾತ್ರೋರಾತ್ರಿ ಕಡಿದಿರುವ ಘಟನೆಯನ್ನು ಖಂಡಿಸಿ ಏ.18ರಂದು ಸಂಜೆ 6.30ಕ್ಕೆ ಮರಗಳು ಕಡಿಯಲ್ಪಟ್ಟ ಜಾಗದಲ್ಲೇ ಕಪ್ಪುಪಟ್ಟಿ ಧರಿಸಿ, ಮೊಂಬತ್ತಿ ಹಚ್ಚಿ ಮೌನ ಪ್ರತಿಭಟನೆ ನಡೆಸಲಾಗುವುದು ಎಂದು ಪರಿಸರ ಉಳಿವಿಗಾಗಿ ಕ್ರಿಯಾ ಸಮಿತಿ ಸಂಸ್ಥಾಪಕ ಸದಸ್ಯ ಪರಶುರಾಮೇಗೌಡ ತಿಳಿಸಿದರು.
ಬುಧವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗತಿಕ ತಾಪಮಾನ ದಿನೇ ದಿನೇ ಏರುತ್ತಿದ್ದು, ಇದರ ಭೀಕರ ಪರಿಣಾಮಗಳನ್ನು ಜಗತ್ತಿನಾದ್ಯಂತ ಕಾಣಲಾಗುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಮರಗಳ ಮಾರಣ ಹೋಮ ನಡೆಯುತ್ತಿದೆ. ಅಕ್ರಮ ಗಣಿಗಾರಿಕೆಯಿಂದ ಬೆಟ್ಟ-ಗುಡ್ಡಗಳು ಕರಗುತ್ತಿದ್ದು, ಅಂತರ್ಜಲ ಪಾತಾಳ ಸೇರು ತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಳೆದ ವರ್ಷ ಮೈಸೂರಿನ ತಾಪಮಾನ 40 ಡಿಗ್ರಿ ಸೆಂಟಿಗ್ರೇಡ್ ದಾಟಿತ್ತು. ಈ ವರ್ಷ ಫೆಬ್ರವರಿ ತಿಂಗಳಲ್ಲೇ ರಾಜ್ಯದ ಕೆಲವು ಕಡೆಗಳಲ್ಲಿ 42 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶ ದಾಖಲಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಬೇಕಾದ ಅರಣ್ಯ ಇಲಾಖೆ ಸುಮಾರು 40 ದೊಡ್ಡ ಮರಗಳನ್ನು ಕಡಿಯಲು ಅನುಮತಿ ನೀಡಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇನ್ನು ಎಸ್‌ಪಿ ಕಚೇರಿ ಬಳಿ ರಸ್ತೆ ಅಗಲೀಕರಣದ ಅಗತ್ಯವೇ ಇರಲಿಲ್ಲ. ಆದರೂ ರಸ್ತೆ ಅಗಲೀಕರಣದ ಹೆಸರಿನಲ್ಲಿ ಅಮಾನುಷವಾಗಿ 40 ಮರಗಳನ್ನು ಕಡಿಯಲಾಗಿದೆ. ಅದೂ ಪರಿಸರ ವಾದಿಗಳು ಪ್ರತಿಭಟನೆ ನಡೆಸುವರು ಎಂಬ ಭಯದಿಂದ ಸಾರ್ವಜನಿಕವಾಗಿ ಗೋಚರವಾಗದಂತೆ ರಾತ್ರೋರಾತ್ರಿ ಮರಗಳ ಹನನ ಮಾಡಲಾಗಿದೆ ಎಂದು ದೂರಿದರು.
ಹೆಚ್ಚಿನ ಮಾಹಿತಿ:- ಮೈಸೂರು। ಮರಗಳ ಮಾರಣಹೋಮ ಖಂಡಿಸಿ ಪುಟಾಣಿಗಳಿಂದ ಪ್ರತಿಭಟನೆ
ಮರಗಳ ಅಮಾನುಷ ಹನನ ಕೃತ್ಯ ಖಂಡಿಸಿ ಏ.18ರಂದು ಮರಗಳನ್ನು ಕಡಿದ ಸ್ಥಳದಲ್ಲೇ ಪ್ರತಿಭಟನೆ ಹಮ್ಮಿಕೊಂಡು ಮರಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ನಾಗರಿಕರು, ಪರಿಸರ ಪ್ರೇಮಿ ಗಳು, ವಿದ್ಯಾರ್ಥಿಗಳು, ಯುವಜನತೆ, ಮಹಿಳೆಯರು ಮೊದಲಾದವರು ಈ ನಮ್ಮ ಸಾತ್ವಿಕ ಪ್ರತಿಭಟನೆ, ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಒಂದು ವೇಳೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗದವರು ಅಂದು ತಮ್ಮ ತಮ್ಮ ಮನೆಯಲ್ಲೇ ಕಪ್ಪು ಬಟ್ಟೆ ಧರಿಸಿ ಮೊಂಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಬಹುದು. ನಂತರ ವಾಟ್ಸಾಪ್ ಮೂಲಕ ನಮಗೆ ಪರಿಸರ ಸಂರಕ್ಷಣೆ ಜಾಗೃತಿಗಾಗಿ, ಪ್ರಚಾರಕ್ಕಾಗಿ ಕಳುಹಿಸಬಹುದು ಎಂದು ತಿಳಿಸಿದರು.
ಸಂಪರ್ಕಕ್ಕೆ ಶೈಲಜೇಶ್-ಮೊ.ಸಂ.: 9886085361, ಭಾಗ್ಯ ಶಂಕರ್ 8867481635, ಪ್ರಭಾ ನಂದೀಶ್ 9731992852 ಅವರಿಗೆ ಕರೆ ಮಾಡಬಹುದಾಗಿದೆ ಎಂದರು. ಪರಿಸರ ಉಳಿವಿಗಾಗಿ ಕ್ರಿಯಾ ಸಮಿತಿಯ ಸದಸ್ಯ ಪಿಯುಸಿಲ್ ಕಮಲ್ ಗೋಪಿನಾಥ್, ಕುಸುಮಾ ಆಯರಹಳ್ಳಿ, ವಕೀಲರಾದ ಗೋಕುಲ್, ವೆಂಕಟಯ್ಯ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಮೈಸೂರು ತಾಲ್ಲೂಕಿನ ನಾಗನಹಳ್ಳಿಯಿಂದ ಪ್ರತಿನಿತ್ಯ ಸಾರ್ವಜನಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಮೈಸೂರು ನಗರಕ್ಕೆ ತೆರಳುತ್ತಾರೆ. ಆದರೆ ನಾಗನಹಳ್ಳಿಯಿಂದ ಮೈಸೂರಿಗೆ…
ಮೈಸೂರಿನಲ್ಲಿ ಪಾರಂಪರಿಕತೆ ಹಾಗೂ ಆಧುನಿಕತೆಯನ್ನು ಸಮ್ಮಿಳಿಸಿಕೊಂಡು ನಿರ್ಮಿಸಲಾಗಿರುವ ತಾಲ್ಲೂಕು ಕಚೇರಿಯ ಕಟ್ಟಡದ ಆವರಣದಲ್ಲೇ ಕಸ ಸಂಗ್ರಹವಾಗಿದ್ದು, ಕೆಲಸ ಕಾರ್ಯಗಳಿಗಾಗಿ ಪ್ರತಿ…
ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಶಾಸಕ, ಹುಬ್ಬಳ್ಳಿಯ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ…
ಕಳೆದವಾರ, ಫೆಬ್ರವರಿ ೧೯, ಶಿವರಾಜಕುಮಾರ್ ಅಭಿನಯದ ‘ಆನಂದ್’ ಚಿತ್ರ ಸೆಟ್ಟೇರಿ ೪೦ ವರ್ಷ. ಅಭಿಮಾನಿಗಳು ಈ ನೆನಪಿನ ಸಂಭ್ರಮವನ್ನು ಆಚರಿಸಿದರು.…
ಮಾನವ-ವನ್ಯಜೀವಿ ಸಂಘರ್ಷ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ ತಾತ್ಕಾಲಿಕವಾಗಿ…
ಪುನೀತ್ ಮಡಿಕೇರಿ ಒಟ್ಟು ೮ ಕೋಟಿ ರೂ. ಮೊತ್ತದ ಯೋಜನೆ; ಸಾರಿಗೆ ಸಮಸ್ಯೆಗಳಿಗೆ ಸಿಗಲಿದೆ ಪರಿಹಾರ ಮಡಿಕೇರಿ: ಕುಶಾಲನಗರದ ಬಹು…