ಮೈಸೂರು : ಉದ್ಯಮಿಯೊಬ್ಬ ಮೈಸೂರಿನ ತೆಂಗಿನಕಾಯಿ ಹೋಲ್ ಸೇಲ್ ವ್ಯಾಪಾರಿಗೆ 49,47,401/- ರೂ ವಂಚಿಸಿದ್ದಾನೆ. ಈ ಸಂಬಂಧ ತೆಂಗಿನಕಾಯಿ ವ್ಯಾಪಾರಿ ಸುಬೇಕ್ ಅಗರವಾಲ್ ಎಂಬುವರು ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಚೆನ್ನೈನ ಶ್ರೀವತ್ಸನ್ ಎಂಬಾತನೇ ವಂಚಿಸಿರುವ ಉದ್ಯಮಿ. ಪುಟ್ಟಣ್ಣ ಇಂಪೋರ್ಟ್ಸ್ ಅಂಡ್ ಎಕ್ಸ್ಪೋರ್ಟ್ ಎಂಬ ಹೆಸರಲ್ಲಿ ಉದ್ಯಮ ನಡೆಸುತ್ತಿರುವ ಶ್ರೀವತ್ಸನ್ ತಮಿಳುನಾಡಿನ ನಿವಾಸಿ. ಸುಬೇದ್ ಅಗರವಾಲ್ ರವರು ಮೈಸೂರಿನ ಮಂಡಿ ಮೊಹಲ್ಲಾದ ಅಕ್ಬರ್ ರಸ್ತೆಯಲ್ಲಿ ಸುನಿಲ್ ಕುಮಾರ್ ಅಗರವಾಲ್ ಹೆಸರಲ್ಲಿ 15 ವರ್ಷಗಳಿಂದ ತೆಂಗಿನ ಕಾಯಿ ವ್ಯಾಪಾರ ಮಾಡುತ್ತಿದ್ದಾರೆ. ಮಾರ್ಚ್ ತಿಂಗಳಲ್ಲಿ ಸುಬೇದ್ ಅಗರವಾಲ್ ರನ್ನ ಶ್ರೀವತ್ಸನ್ ಸಂಪರ್ಕಿಸಿ ವ್ಯಾಪಾರ ಕುದುರಿಸಿ ಸುಮಾರು 15 ಲಕ್ಷ ಮೌಲ್ಯದ ತೆಂಗಿನಕಾಯಿ ಖರೀದಿಸಿ 10 ಲಕ್ಷ ನೀಡಿದ್ದಾರೆ. ನಂತರ ಶ್ರೀವತ್ಸನ್ ರವರ ಸೂಚನೆಯಂತೆ ವಿವಿಧೆಡೆಗೆ ತೆಂಗಿನಕಾಯಿ ಲೋಡ್ ಕಳಿಸಿದ್ದಾರೆ. ತಿಂಗಳುಗಳು ಕಳೆದರೂ ತೆಂಗಿನಕಾಯಿ ಹಣ ಬಂದಿಲ್ಲ. ಶ್ರೀವತ್ಸನ್ ರವರಿಗೆ ಸೇರಿದ ನಾಲ್ಕು ಮೊಬೈಲ್ ಗಳು ಸ್ವಿಚ್ ಆಫ್ ಆಗಿದೆ. ಶ್ರೀವತ್ಸನ್ ರಿಂದ ಒಟ್ಟು 49,47,401/- ರೂ ಬಾಕಿ ಬರಬೇಕಿದೆ ಎಂದು ಸುಬೇದ್ ಅಗರವಾಲ್ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…
ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…
ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…
ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…
ಸತೀಶ್ ತಿಪಟೂರು ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ - ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ…
ಪ್ರತಿ ಭಾರತೀಯರ ಎದೆ ಬಡಿತದ ಚೇತನ ಗಾಂಧೀಜಿ: ಕೈಯಲ್ಲೊಂದು ಕೋಲು ಹಿಡಿದು, ದುಂಡು ಕನ್ನಡಕ ಧರಿಸಿ, ಸತ್ಯ, ಅಹಿಂಸೆಯ ಅಸದಿಂದ…