ಮೈಸೂರು: ಮೈಸೂರಿನ ಡಿಆರ್‌ಸಿ ಚಿತ್ರಮಂದಿರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅನ್ನ ಸಿನಿಮಾ ವೀಕ್ಷಣೆ ಮಾಡಿ ಖುಷಿಪಟ್ಟಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು, ನಿನ್ನೆ ಮೈಸೂರಿನ ಡಿಆರ್‌ಸಿ ಚಿತ್ರಮಂದಿರದಲ್ಲಿ ಅನ್ನ ಸಿನಿಮಾ ವೀಕ್ಷಣೆ ಮಾಡಿದ್ದೆ. ಅನ್ನ ಉಣ್ಣಲು ನನ್ನೂರಿನ ಜನ ಹಬ್ಬಕ್ಕಾಗಿ ಕಾಯುತ್ತಿದ್ದ ನನ್ನ ಬಾಲ್ಯದ ದಿನಗಳು ಈ ಸಿನಿಮಾದ ಕಥೆಯ ಮೂಲಕ ಕಣ್ಣೆದುರು ಬಂದವು. ನಾನು ಕಂಡ ಹಸಿವು, ಬಡತನಗಳು ನಾಡಿನ ಯಾರೊಬ್ಬರನ್ನು ಬಾಧಿಸದಿರಲಿ ಎಂದು 2023ರಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ಕೊಟ್ಟಿದ್ದೆ. ಚಿತ್ರದ ಕೊನೆಯಲ್ಲಿ ಈ ಯೋಜನೆಯ ಮಹತ್ವದ ಬಗ್ಗೆಯೂ ಸಿನಿಮಾ ಬೆಳಕು ಚೆಲ್ಲಿದೆ.
ಮನೋರಂಜನೆಯ ಜೊತೆಗೆ ಹಸಿವಿನ ಎದುರು ಬೇರೆಲ್ಲಾ ಸಂಬಂಧಗಳು ಹೇಗೆ ನಗಣ್ಯವೆನಿಸುತ್ತವೆ ಎಂಬ ಸಂದೇಶವನ್ನು ಒಳಗೊಂಡ ಈ ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಚಿತ್ರತಂಡಕ್ಕೆ ಶುಭವಾಗಲಿ, ಚಿತ್ರ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.
ಕೀರ್ತಿ ಇದನ್ನು ನೀವು ಊಹಿಸಲೂ ಸಾಧ್ಯವಿಲ್ಲ. ಚಹ ಮಾಡಿದ ನಂತರ ಉಳಿದ ಜೊಗಟು, ಈರುಳ್ಳಿ ಸಿಪ್ಪೆ, ಚಿಂದಿ ಬಟ್ಟೆ, ಹರಿದ…
ಅಮೆರಿಕದ ಸಿಯಾಟಲ್‌ನಲ್ಲಿ ಮಗನಿಗೆ ಹೊಸ ಕೆಲಸ ಸಿಕ್ಕಿತ್ತು. ಮನೆ ಮಾಡಿದ. ಅಲ್ಲಿ ಮನೆ ಶಿಫ್ಟ್ ಮಾಡುವುದೆಂದರೆ ನಾವೇ ಸಕಲವೂ ಆಗಿರುವುದರಿಂದ…
ಮುಂಚೆ ಕಾಲವೊಂದಿತ್ತು. ಸಮಯ ಕಳೆಯಲು ಎಲ್ಲರೂ ಪುಸ್ತಕದ ಮೊರೆ ಹೋಗು ತ್ತಿದ್ದರು. ಮನೆ ಹತ್ತಿರದ ಪುಸ್ತಕ ದಂಗಡಿ, ಗ್ರಂಥಾಲಯ, ಸ್ನೇಹಿತರ…
ತೃತೀಯ ಲಿಂಗಿಯೊಬ್ಬರು ವಿಜಯನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯಕ್ಕೆ ಕನ್ನಡ ಸಹಾಯಕ ಪ್ರಾಧ್ಯಾಪಕಿ ಯಾಗಿ ಆಯ್ಕೆಯಾಗಿರುವುದು ರಾಜ್ಯದ ಇತಿಹಾಸ ದಲ್ಲೇ ಮೊದಲಾಗಿದ್ದು,…
ಒಂದೆಡೆ ತಂಪಿನ ವಾತಾವರಣ : ಮತ್ತೊಂದೆಡೆ ಕಿರಿಕಿರಿ ಉಂಟುಮಾಡುವ ಕೆಸರುಮಯ ತಾಣ ಜಿ. ತಂಗಂ ಗೋಪಿನಾಥಂ ಮಂಡ್ಯ: ಕಳೆದ ಎರಡು…
ಚಿರಂಜೀವಿ ಸಿ. ಹುಲ್ಲಹಳ್ಳಿ ಮಂಡ್ಯ: ಕೃಷಿಯಲ್ಲಿ ಪ್ರಾಮುಖ್ಯತೆ ಪಡೆದಿರುವ ಮಂಡ್ಯ ಜಿಲ್ಲೆಯಲ್ಲಿ ಸಾಹಿತ್ಯಾಸಕ್ತರು ಮತ್ತು ಸಾಹಿತಿಗಳು ಕಡಿಮೆ ಏನಿಲ್ಲ ಎಂಬುದನ್ನು…