ಮೈಸೂರು ನಗರ

ಮುಡಾ ಅಧಿಕಾರಿಗಳಿಂದ 8 ಎಕರೆ 28 ಗುಂಟೆ ಜಾಗ ವಶ ಪ್ರಕರಣ: ವಕೀಲ ಹೃತಿಕ್ ಗೌಡ ಪ್ರತಿಕ್ರಿಯೆ

ಮೈಸೂರು: ಮುಡಾದವರು ಏಕಾಏಕಿ ಬಡವರ ಮನೆಗೆ ಬಂದು ಯಾವುದೇ ನೋಟಿಸ್ ನೀಡದೇ ತೆರವು ಮಾಡಿದ್ದು, ಸರ್ವೇ ನಂಬರ್ 108, 109 ಜಾಗವು 2002ರಲ್ಲಿ ಭೂ ಸ್ವಾಧೀನವಾಗಿದೆ ಎಂದು ವಕೀಲ ಹೃತಿಕ್‌ ಗೌಡ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಮುಂಚೆ ಈ ಜಾಗ ಬಸವನಹಳ್ಳಿ ಗ್ರಾಮಕ್ಕೆ ಸೇರಿತ್ತು. ಇದೀಗ ವಿಜಯನಗರ 4ನೇ ಹಂತಕ್ಕೆ ಬಡಾವಣೆ ಮಾಡಲು ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಇಂದು ಬೆಳಗ್ಗೆ 6 ಗಂಟೆಗೆ ಬಂದು ಜಾಗ ತೆರವಿಗೆ ಮುಂದಾಗಿದ್ದಾರೆ. ಜಾಗಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿಯಿದೆ ಎಂದು ಮಾಹಿತಿ ನೀಡಿದರು.

ರಿಟ್ ಅರ್ಜಿ 1427/2024 ಹೈಕೋರ್ಟ್‌ನಲ್ಲಿ ಪೆಂಡಿಂಗ್ ಇದೆ. ಆದರೂ ಏಕಏಕಿ ಬಂದು ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿದ್ದಾರೆ. 25 ವರ್ಷಗಳಿಂದ ಖಾತೆ, ಕಂದಾಯ, ಎಲೆಕ್ಟ್ರಿಕಲ್ ಬಿಲ್ ಎಲ್ಲವು ಸಹ ವಾಸವಿರುವವರ ಹೆಸರಿನಲ್ಲಿದೆ. ಕಾನೂನಿನ್ವಯ ಈ ಜಾಗದಲ್ಲಿ ವಾಸವಿದ್ದಾರೆ. ಪ್ರಕರಣ ಯಾವುದೇ ನ್ಯಾಯಾಲಯದಲ್ಲೂ ಬಾಕಿ ಇರುವ ವೇಳೆ ಕಾನೂನಿನ್ವಯ ವಾಸಿಸುವ ಜನರನ್ನು ಹೊರದೂಡುವಂತಿಲ್ಲ. 2004ರ ತನಕ ಆರ್‌ಟಿಸಿ ಇದ್ದು ಪುಟ್ಟಮಾದಯ್ಯ ಎನ್ನುವವರಿಂದ ಬಂದಿರುವ ಜಾಗಕ್ಕೆ ಮೂವರು ಮಂದಿ ಮೊಮ್ಮಕ್ಕಳು ವಾರಸುದಾರರಾಗಿದ್ದಾರೆ.

ಹೈಕೋರ್ಟ್‌ನ ಡಬಲ್ ಬೆಂಚ್‌ನಲ್ಲಿ ಪ್ರಕರಣ ಪೆಂಡಿಂಗ್ ಇದೆ. ಆದರೂ ಸಹ ಮುಡಾ ಅಧಿಕಾರಿಗಳು ಲೆಕ್ಕಕ್ಕೆ ತೆಗೆದುಕೊಳ್ಳದೆ ಜಾಗ ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

4 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

4 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

4 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

7 hours ago

ಸುಮ್ಮನಿದ್ದರೂ ಪರಿಣಮಿಸುವ ರಂಗಭೂಮಿಯ ಝೆನ್ ಗುರು – ಜಂಬೆ ಮೇಷ್ಟ್ರು

ಸತೀಶ್ ತಿಪಟೂರು ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ - ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ…

7 hours ago

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಪ್ರತಿ ಭಾರತೀಯರ ಎದೆ ಬಡಿತದ ಚೇತನ ಗಾಂಧೀಜಿ:  ಕೈಯಲ್ಲೊಂದು ಕೋಲು ಹಿಡಿದು, ದುಂಡು ಕನ್ನಡಕ ಧರಿಸಿ, ಸತ್ಯ, ಅಹಿಂಸೆಯ ಅಸದಿಂದ…

7 hours ago