cm siddhramiah
ಮೈಸೂರು: ಬಿಜೆಪಿಯವರು ಮಾಡುವ ಯಾತ್ರೆ ಧರ್ಮಯಾತ್ರೆಯಲ್ಲ, ಅದು ರಾಜಕೀಯ ಯಾತ್ರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣ ಎನ್.ಐ.ಎ ತನಿಖೆ ಮಾಡಿಸಿ ಅಂತ ಹೇಳ್ತಾರೆ. ನಮ್ಮ ಪೊಲೀಸರ ಮೇಲೆ ಬಿಜೆಪಿಗೆ ನಂಬಿಕೆ ಇಲ್ವಾ? ಬಿಜೆಪಿ ಮೊದಲು ತನಿಖೆ ಮಾಡಿ ಅಂತ ಹೇಳಲೇ ಇಲ್ಲ. ಡೆಡ್ ಬಾಡಿ ಸಿಗದೆ ಹೋದ ಮೇಲೆ ಹೇಳಿಕೆ ಕೊಡಲು ಶುರು ಮಾಡಿದ್ರು. ವೀರೇಂದ್ರ ಹೆಗಡೆ ಅವರೇ ಸ್ವಾಗತ ಮಾಡಿದ್ದಾರೆ. ಅವರ ಮೇಲೆ ಆರೋಪವಿದೆ. ಆದರೆ ಅವರೆ ಸ್ವಾಗತ ಮಾಡಿದ್ದಾರೆ. ನಾವು ತನಿಖೆ ಮಾಡಿಸುತ್ತಿದ್ದೇವೆ. ಯಾರು ಕೂಡ ನಾನು ಇಂಟರ್ ಫಿಯರ್ ಆಗಿಲ್ಲ ಎಂದರು.
ಇನ್ನು ವಿದೇಶದಿಂದ ಫಂಡಿಂಗ್ ಬಂದಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ದುಡ್ಡು ಬಂದಿರೋದು ಬಿಜೆಪಿಗೆ. ಇಷ್ಟೆಲ್ಲಾ ಮಾಡ್ತಿದ್ದಾರೆ ಎಲ್ಲಿಂದ ದುಡ್ಡು ಬರುತ್ತೆ? ಯಾರು ಕೊಡೋರು ಇವರಿಗೆ. ಎಲ್ಲಾ ವಿಚಾರಗಳನ್ನು ರಾಜಕೀಯ ಮಾಡಬಾರದು. ವಿರೋಧ ಪಕ್ಷ ಟೀಕೆ ಮಾಡಲಿ. ಇವರು ರಾಜಕೀಯಕ್ಕೆ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಸೌಜನ್ಯ ಕೇಸ್ ರಿ ಓಪನ್ ಆಗುತ್ತಾ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಿಬಿಐ ತನಿಖೆ ಮಾಡಿ ವರದಿ ಕೊಟ್ಟಿದೆ. ಸೌಜನ್ಯ ಕುಟುಂಬ ಸುಪ್ರೀಂ ಕೋರ್ಟ್ಗೆ ಹೋಗಲಿ. ಸೌಜನ್ಯ ಕೇಸ್ ಆರೋಪ ಬಂದಿರೋದು ವೀರೇಂದ್ರ ಹೆಗಡೆ ಕುಟುಂಬದ ಮೇಲೆ. ಬಿಜೆಪಿಯವರು ಯಾರ ಪರ? ಕೋರ್ಟ್‌ಗೆ ಹೋಗೋದು ಬಿಡೋದು ಸೌಜನ್ಯ ಕುಟುಂಬದವರಿಗೆ ಸೇರಿದ್ದು. ಬಿಜೆಪಿಯವರು ಒಂದು ಕಡೆ ವೀರೇಂದ್ರ ಹೆಗಡೆಗೆ ಜೈ ಅಂತಾರೆ. ಇನ್ನೊಂದು ಕಡೆ ಸೌಜನ್ಯ ಪರ ಅಂತಾರೆ. ಇದರಲ್ಲೂ ರಾಜಕೀಯ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ಲೇಖಕಿ ಬಾನು ಮುಸ್ತಾಕ್ ದಸರಾ ಉದ್ಘಾಟನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮಿರ್ಜಾ ಇಸ್ಮಾಯಿಲ್ ಅವರನ್ನು ಮಹಾರಾಜರು ಅಂಬಾರಿ ಮೇಲೆ ಕೂರಿಸಿ ಮೆರವಣಿಗೆ ಮಾಡಿದರು. ಅವಾಗ ಆರ್.ಎಸ್.ಎಸ್ ಹಾಗೂ ಬಿಜೆಪಿಯವರು ಎಲ್ಲಿ ಹೋಗಿದ್ರು? ನಿಸ್ಸಾರ್ ಅಹಮದ್ ದಸರಾ ಉದ್ಘಾಟನೆ ಮಾಡಿದ್ರು ಅವಾಗ ಎಲ್ಲಿ ಹೋಗಿದ್ರು? ಅರಿಶಿನ ಕುಂಕುಮ ಬಗ್ಗೆ ಮಾತನಾಡಿರೋದು ಬೇರೆ. ಕನ್ನಡದ ಮೇಲೆ ಪ್ರೀತಿ ಇಲ್ಲದೆ ಇದ್ದರೆ ಪುಸ್ತಕ ಬರಿತಿದ್ರಾ? ಆಕೆ ಮುಸ್ಲಿಂ ಲೇಡಿ ಕನ್ನಡದಲ್ಲಿ ಬರೆದಿದ್ದಾರೆ. ಈಗ ಬೇರೆ ಧರ್ಮದವರು ಅದು ಮಾಡಿ ಇದು ಮಾಡಿ ಅನ್ನೋಕಾಗುತ್ತಾ? ಎಂದು ಪ್ರಶ್ನೆ ಮಾಡಿದರು.
ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…
ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…
ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…
ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…
ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…