ಮೈಸೂರು ನಗರ

ಭಾರತೀಯಳಿಗೆ, ಕನ್ನಡತಿಗೆ ಬೂಕರ್‌ ಸಿಗಲೆಂದ ಪ್ರಾರ್ಥಿಸಿ ; ಲೇಖಕಿ ಬಾನು ಮುಷ್ತಾಕ್‌ ಮನವಿ

ಮೈಸೂರು: ‘ಬೂಕರ್‌ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿನ 6 ಕೃತಿಗಳಲ್ಲಿ ನನ್ನ ‘ಹಾರ್ಟ್‌ ಲ್ಯಾಂಪ್’ ಕಥಾಗುಚ್ಛ ಕೂಡ ಸ್ಥಾನ ಪಡೆದಿದೆ. ಮೇ 20ರಂದು ಲಂಡನ್‌ನಲ್ಲಿ ಪ್ರಶಸ್ತಿ ಘೋಷಣೆಯಾಗಲಿದ್ದು, ಮೂವರು ಮಕ್ಕಳೊಂದಿಗೆ ಹೋಗುತ್ತಿರುವೆ. ಪ್ಲೀಸ್‌, ಪ್ರೇ ಫಾರ್‌ ಮಿ– ಭಾರತೀಯಳಿಗೆ, ಕನ್ನಡತಿಗೆ ಬೂಕರ್ ಸಿಗಲೆಂದು ಪ್ರಾರ್ಥಿಸಿ’ ಎಂದು ಲೇಖಕಿ ಬಾನು ಮುಷ್ತಾಕ್ ಕೋರಿದರು.

ನಗರ ಜೆಎಲ್‌ಬಿ ರಸ್ತೆಯ ಎಂಜಿನಿಯರುಗಳ ಸಂಸ್ಥೆಯಲ್ಲಿ ಬುಧವಾರ, ತಮ್ಮ ಕೃತಿ ‘ಹಸೀನಾ ಮತ್ತು ಇತರ ಕಥೆಗಳು’ ಪರಿಷ್ಕೃತ ಮುದ್ರಣದ ಬಿಡುಗಡೆಯಲ್ಲಿ ಮಾತನಾಡಿದ ಅವರು, ಬರಹದ ಯಾನವನ್ನು ಓದುಗರಿಗೆ ತೆರೆದಿಟ್ಟರು.

‘ಗಿರೀಶ್‌ ಕಾಸರವಳ್ಳಿ ಅವರು ಚಲನಚಿತ್ರ ಮಾಡಲು ಎರಡು ದಶಕದ ಹಿಂದೆ ಹೆಣ್ಣು ಮಕ್ಕಳ ಕಥೆಗಳನ್ನು ಹುಡುಕಿ ಸುಸ್ತಾಗಿದ್ದರು. ಆಗೊಬ್ಬರು ನನ್ನ ‘ಕರಿ ನಾಗರಗಳು’ ಕಥೆಯನ್ನು ಹುಡುಕಿಕೊಟ್ಟಿದ್ದರು. ಈ ವಿಷಯ ನನಗೂ ಗೊತ್ತಾಯಿತು. ಆಗೆಲ್ಲ, ದಿನ ರಾತ್ರಿ ಕಾಸರವಳ್ಳಿ ಕರೆ ಮಾಡುತ್ತಾರೆ ಎಂದು ಕನಸು ಕಾಣುತ್ತಿದ್ದೆ. ಒಂದು ಮುಂಜಾನೆ ಕಾಸರವಳ್ಳಿ ಕರೆ ಮಾಡಿದ್ದರು. ನನಗೇನು ಆಶ್ಚರ್ಯವಾಗಿರಲಿಲ್ಲ. ಈಗಲೂ ಹಾಗೇ ಆಗುತ್ತದೆ ಎಂದುಕೊಂಡಿರುವೆ’ ಎಂದು ನಗೆಯುಕ್ಕಿಸಿದರು.

‘ಕರಿ ನಾಗರಗಳು’ ಕಥೆ ಹಸೀನಾ ಆಗಿ 2004ರಲ್ಲಿ ಬಿಡುಗಡೆಯಾಗಿತ್ತು. ಅದರ ಪ್ರೀಮಿಯರ್ ಪ್ರದರ್ಶನದಲ್ಲಿ ನಟಿ ತಾರಾ ನನ್ನ ಕುರ್ಚಿಯ ಪಕ್ಕ ಕೈ ಹಿಡಿದು ಕೂತು ನೋಡಿದ್ದರು. ಕಣ್ಣೀರು ತುಂಬಿ ನಿಮಗೆ ರಾಷ್ಟ್ರಪ್ರಶಸ್ತಿ ಬರುತ್ತದೆ ಎಂದಿದ್ದೆ. ಐಶ್ವರ್ಯ ರೈ ಮತ್ತು ತಾರಾ ನಡುವೆ ಪೈಪೋಟಿಯಿತ್ತು. ಕೊನೆಗೆ ನಾನು ಹೇಳಿದಂತೆ ಕನ್ನಡತಿಗೆ ಪ್ರಶಸ್ತಿ ಬಂದಿತ್ತು’ ಎಂದು ನೆನೆಪು ಮಾಡಿಕೊಂಡರು.

‘ನನ್ನ ಕಥೆಗಳನ್ನು ಇಂಗ್ಲಿಷ್‌ಗೆ ಯಾರಾದರೂ ಅನುವಾದ ಮಾಡುತ್ತಾರೆಯೇ ಎಂದು ಪತ್ರಕರ್ತ ಬಸವ ಬಿರಾದರ್ ಮೂರು ವರ್ಷದ ಹಿಂದೆ ಅವರನ್ನು ಕೇಳಿದ್ದೆ. ಅವರು ದೀಪಾ ಭಸ್ತಿ ಅವರ ಮೊಬೈಲ್‌ ನಂಬರ್‌ ಕೊಟ್ಟಿದ್ದರು. ಮಣಿಪಾಲದಲ್ಲಿ ಹೃದಯದ ಬೈಪಾಸ್‌ ಶಸ್ತ್ರಚಿಕಿತ್ಸೆ ನಡೆಯಲಿತ್ತು. ಆಗ ದೀಪಾ ಅವರು ಕರೆ ಮಾಡಿ ನಿಮ್ಮ ಕಥಾ ಸಂಕಲನ ಯುನೈಟೆಡ್‌ ಕಿಂಗ್‌ಡಮ್‌ ಅಲ್ಲಿಯೇ ಪ್ರಕಟವಾಗಬೇಕು, ಅನುಮತಿ ಬೇಕೆಂದು ಕೋರಿದ್ದರು. ನಾನೂ ಸಹಿ ಮಾಡಿದ್ದೆ. ಅದಕ್ಕೆ ‘ಪೆನ್‌’ ಪ್ರಶಸ್ತಿಯೂ ಸಿಕ್ಕಿತು. ಇದೀಗ ಬೂಕರ್‌ ಪ್ರಶಸ್ತಿಯ ಅಂತಿಮ ಪಟ್ಟಿವರೆಗೂ ಬರುತ್ತದೆಂದು ಅಂದುಕೊಂಡಿರಲಿಲ್ಲ’ ಎಂದರು.

ನಂತರ ನಡೆದ ಸಂವಾದದಲ್ಲಿ ಲೇಖಕಿ ಪ್ರೀತಿ ನಾಗರಾಜ್, ‘ನೀವೆಂದಾದರೂ ಬರಹಗಾರ್ತಿ ಆಗುತ್ತೇನೆ ಎಂದುಕೊಂಡಿದ್ದಿರಾ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಮದುವೆಯಾಗುತ್ತಲೇ ಕೆಲಸ ಬಿಡಬೇಕಾಯಿತು. ಅವಿಭಕ್ತ ಕುಟುಂಬ. ಹೀಗಾಗಿ ನಿರ್ಬಂಧಗಳೂ ಹೆಚ್ಚು. ಗಂಡನಿಗೆ ಹೆಂಡತಿ, ಮಕ್ಕಳ ತಾಯಿಯಾಗಿ ಜವಾಬ್ದಾರಿ ಹೆಚ್ಚಿದ್ದವು. ಮೂರು ವರ್ಷ ಮನೆಯಲ್ಲಿಯೇ ಇದ್ದೆ. ಆಮೇಲೆ ಬರಹವನ್ನು ಮುಂದುವರಿಸಿದೆ’ ಎಂದರು.

ಸಂವಾದದಲ್ಲಿ ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ, ವಿಜ್ಞಾನ ಲೇಖಕಿ ಪದ್ಮಾ ಶ್ರೀರಾಮ, ‘ಮೈಸೂರು ಲಿಟ್ರರಿ ಫೋರಂ ಚಾರಿಟಬಲ್ ಟ್ರಸ್ಟ್’ನ ಶುಭಾ ಸಂಜಯ ಅರಸ್, ಪ್ರಕಾಶಕ ಅಭಿರುಚಿ ಗಣೇಶ್ ಪಾಲ್ಗೊಂಡಿದ್ದರು.

ಆಂದೋಲನ ಡೆಸ್ಕ್

Recent Posts

ಮೈವಿವಿಯಲ್ಲಿ ಫ್ರೆಂಚ್‌ ಭಾಷೆ ವಿಭಾಗ ಪುನರಾಂಭಿಸಲು ಚರ್ಚೆ

ಮೈಸೂರು : ಮೈಸೂರು ವಿಶ್ವವಿದ್ಯಾನಿಲಯಕ್ಕೆ ಫ್ರಾನ್ಸ್ ದೇಶದ ರಾಯಭಾರಿಗಳ ನಿಯೋಗ ಭೇಟಿ ನೀಡಿ ಫ್ರೆಂಚ್ ಭಾಷೆ ವಿಭಾಗವನ್ನು ಮರು ಆರಂಭಿಸುವ…

10 mins ago

ʼಗ್ಯಾರಂಟಿʼ ಜನರ ಬದುಕಿನ ಆಧಾರ

ಬೆಳಗಾವಿ(ಸುವರ್ಣ ವಿಧಾನ ಸೌಧ) : ಗ್ಯಾರಂಟಿ ಯೋಜನೆಗಳ ಮೂಲಕ ನಾಗರಿಕರಿಗೆ ನೇರವಾಗಿ ಹಣ ವರ್ಗಾವಣೆಯಿಂದ ಅವರ ಆರ್ಥಿಕ ಬದುಕು ಬಹಳಷ್ಟು…

30 mins ago

ಪತ್ರಿಕೋದ್ಯಮ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

ಮೈಸೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ 2025-26ನೇ ಸಾಲಿನ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟ…

55 mins ago

ತೊಗರಿ – ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯ ; ಸಿಎಂ‌ ಪತ್ರದೊಂದಿಗೆ ಕೇಂದ್ರ ಸಚಿವರಿಗೆ ಮನವಿ ನೀಡಿದ ಸಂಸದರ ನಿಯೋಗ

ಹೊಸದಿಲ್ಲಿ : ಕರ್ನಾಟಕ ರಾಜ್ಯದಲ್ಲಿ‌ ಭಾರತದ ರಾಷ್ಟ್ರೀಯ ಕೃಷಿ‌ ಸಹಕಾರಿ ಮಾರುಕಟ್ಟೆ ಒಕ್ಕೂಟ ಹಾಗೂ ಭಾರತದ ರಾಷ್ಟ್ರೀಯ ಸಹಕಾರಿ ಗ್ರಾಹಕರ…

1 hour ago

ಹಾಡಿ ಕುಟುಂಬಗಳಿಗೆ ಗ್ಯಾರಂಟಿ ಯೋಜನೆ ತಲುಪಿಸಿ: ಅರುಣ್ ಕುಮಾರ್

ಮೈಸೂರು : ಜಿಲ್ಲೆಯಲ್ಲಿರುವ ಹಾಡಿಗಳಲ್ಲಿ ವಾಸವಾಗಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ತಲುಪಿಸಿ, ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ…

2 hours ago

ಗ್ಯಾರಂಟಿ ಯೋಜನೆಗಳಿಂದಲೇ ರಾಜ್ಯದ ಜನತೆಯ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ: ಕೆ.ಎನ್.ರಾಜಣ್ಣ

ಬೆಳಗಾವಿ: ಗ್ಯಾರಂಟಿ ಯೋಜನೆಗಳಿಂದಲೇ ರಾಜ್ಯದ ಜನತೆಯ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ, ಗ್ಯಾರಂಟಿ ಯೋಜನೆಗಳ ಜೊತೆ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳು ಕೂಡ…

3 hours ago