ಮೈಸೂರು ನಗರ

ಅಂಗನವಾಡಿ ಕಾರ್ಯಕರ್ತೆಯರ ವೇತನ ಬಾಕಿ ಉಳಿಸಿಕೊಂಡಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಮೈಸೂರು: ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು ಬಾಕಿ ಉಳಿಸಿಕೊಂಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರ ವೇತನ ಆಗದ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಂ ಸಿದ್ದರಾಮಯ್ಯ ಅವರು, ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಆದರೆ ನಾವು ಯಾವುದೇ ವೇತನ ಬಾಕಿ ಉಳಿಸಿಕೊಂಡಿಲ್ಲ. ಒಂದು ವೇಳೆ ವೇತನ ಉಳಿಸಿಕೊಂಡಿದ್ದರೆ ಆ ಬಗ್ಗೆ ಮಾಹಿತಿ ಪಡೆದು ಎಲ್ಲವನ್ನೂ ಸರಿಪಡಿಸುತ್ತೇವೆ. ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುವ ಅವಶ್ಯಕತೆಯಿಲ್ಲ. ರಾಜ್ಯ ಸರ್ಕಾರ ಎಲ್ಲರ ಸಮಸ್ಯೆಗೆ ಸ್ಪಂದಿಸಲಿದೆ ಎಂದರು.

ಇನ್ನು ಸಿದ್ದರಾಮಯ್ಯ ಅವರು ಒಪ್ಪಿಗೆ ಕೊಟ್ಟರೆ ಸಿಎಂ ಆಗುತ್ತೇನೆ ಎಂಬ ಹಿರಿಯ ನಾಯಕ ಆರ್‌.ವಿ.ದೇಶಪಾಂಡೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಆಗಲು ಪರ್ಮಿಷನ್‌ ಕೊಡೋಕೆ ನಾನ್ಯಾರು. ಅದು ಪಕ್ಷದ ಶಾಸಕರು ಹಾಗೂ ಹೈಕಮಾಂಡ್‌ಗೆ ಬಿಟ್ಟ ತೀರ್ಮಾನ ಎಂದು ನಗುತ್ತಾ ಹೇಳಿದರು.

 

ಕೆಂಡಗಣ್ಣಸ್ವಾಮಿ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮದವನಾದ ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಪದವಿ ನಂತರದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ನೈಸರ್ಗಿಕ ಕೃಷಿ ಹಾಗೂ ಪಶು ಸಂಗೋಪನೆಗೆ ಹೆಚ್ಚು ಒತ್ತು ಕೊಡುತ್ತೇನೆ.‌ ಪರಿಸರ ಸಂರಕ್ಷಣೆ ಜೊತೆ ಜೊತೆಗೆ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ನಾನು ಶ್ರಮ ವಹಿಸುತ್ತಿದ್ದೇನೆ.‌ ನನ್ನ ಮೊಬೈಲ್‌ ಸಂಖ್ಯೆ: 9964859626, 9606570286

Recent Posts

ನರಪೇತಲ ರೇಣುಕಾಸ್ವಾಮಿಗೆ ಮಾತಿಗೊಂದು ಏಟು

ನೆತ್ತಿ,ಕೈ ಬೆರಳುಗಳಿಂದ ಸೋರುತ್ತಿದ್ದ ರಕ್ತ, ಬೆಳಿಗ್ಗೆಯಿಂದ ಸಂಜೆಯವರೆಗೂ ಬಿದ್ದಿತ್ತು ಹೊಡೆತ ದರ್ಶನ್‌ಗಿದ್ದ ಸಿಟ್ಟನ್ನು ಸಾರಿ ಹೇಳುತ್ತಿದ್ದವು ರೇಣುಕಾಸ್ವಾಮಿಯ ಮೈಮೇಲಿನ ಬಾಸುಂಡೆ…

9 mins ago

ರೇಣುಕಾಸ್ವಾಮಿ ಕೊಲೆಯಾದ ದಿನ ನಡೆದಿದ್ದೇನು?

ಸಿನಿಮೀಯ ಮಾದರಿಯಲ್ಲೇ ದರ್ಶನ್ ಹೊಡೆತ; ರೇಣುಕಾಸ್ವಾಮಿಗೆ ಬಿದ್ದ ಪ್ರತಿ ಏಟಿನಲ್ಲೂ ಇತ್ತು ದರ್ಶನ್ ಸಿಟ್ಟು  ಮಾಫಿ ಸಾಕ್ಷಿಯಾದ 14ನೇ ಆರೋಪಿ:…

27 mins ago

ಓದುಗರ ಪತ್ರ: ಅರಿವು ಹೆಚ್ಚಿಸುವ ಚೆನ್ನಬಸವಣ್ಣ ಅವರ ಲೇಖನ

ವಿಐಪಿಗಳು ಬಂದಾಗ ಇಲ್ಲವೆ, ದೊಡ್ಡ ಸಮಾರಂಭಗಳು ಇಲ್ಲವೆ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಬಿಗಿ ಬಂದೋಬಸ್ತ್ ಪದ ಬಳಕೆಯ ಪರಿಚಯ…

4 hours ago

ಓದುಗರ ಪತ್ರ: ಹೊಸ ರಾಜ್ಯಪಾಲರು ರಾಜ್ಯದ ಪ್ರಗತಿಗೆ ಮಾರ್ಗದರ್ಶನ ನೀಡಲಿ

ರಾಜ್ಯದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ಹೊರಡಿಸಿದ್ದು, ರಾಜ್ಯದ ರಾಜ್ಯಪಾಲರಾಗಿ…

4 hours ago

ಓದುಗರ ಪತ್ರ: ದರ ವ್ಯತ್ಯಾಸ: ಗ್ರಾಹಕರ ಹಿತವೇ ಮುಖ್ಯ

ಔಷಧಿಗಳ ನೈಜ ದರಕ್ಕೂ ಮತ್ತು ಮಾರಾಟ ದರಕ್ಕೂ ಅಜಗಜಾಂತರ ವ್ಯತ್ಯಾಸ ಇರುವುದನ್ನು ಇತ್ತೀಚೆಗೆ ದೇಶದ ಸರ್ವೋಚ್ಚ ನ್ಯಾಯಾಲಯ ಗಮನಿಸಿ ತೀವ್ರ…

5 hours ago

ದೇವಭೂಮಿ ದ್ವಾರಕಾದ ‘ಮೀಟಾಪುರ್ ಮದರ್ ಥೆರೇಸಾ’

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಬಡಪಾಯಿಗಳ ಸೇವೆ ಮಾಡಿ ಜನರ ಹೃದಯ ಗೆದ್ದ ಮಾತೆ  ಮದರ್ ಥೆರೇಸಾ ಈಗ ನಮ್ಮ…

5 hours ago