ಮೈಸೂರು ನಗರ

ಆಕರ್ಷಿಸುತ್ತಿರುವ ಶಿಲಾಯುಗದ ಪ್ರಾಚ್ಯವಸ್ತು ಪ್ರದರ್ಶನ..!

ವಿಶ್ವ ಪರಂಪರೆ ಸಪ್ತಾಹ ಪ್ರಯುಕ್ತ ಉತ್ಖನನ ವಸ್ತುಗಳ ಅನಾವರಣ

ಮೈಸೂರು : ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ದೊಡ್ಡಾಲತ್ತೂರು ಗ್ರಾಮದಲ್ಲಿ ದೊರೆತ ಬೃಹತ್ ಶಿಲಾಯುಗದ ಪ್ರಾಚ್ಯವಸ್ತುಗಳ ಪ್ರದರ್ಶನವು ಸಾರ್ವಜನಿಕರನ್ನು ಸೂಜಿಗಲ್ಲಿನಂತೆ ಆಕರ್ಷಿಸಿತು.

ಮಾನಸಗಂಗೋತ್ರಿ ಆವರಣದಲ್ಲಿರುವ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಲ್ಲಿ ಸೋಮವಾರ ಪುರಾತತ್ವ ಅಧ್ಯಯನ ವಿಭಾಗ ಹಾಗೂ ಮಿಥಿಕ್ ಸೊಸೈಟಿಯ ಸಹಯೋಗದಲ್ಲಿ ವಿಶ್ವ ಪರಂಪರೆ ಸಪ್ತಾಹ ಪ್ರಯುಕ್ತ 5 ದಿನಗಳ ಪ್ರದರ್ಶನದಲ್ಲಿ ಉತ್ಖನನದಲ್ಲಿ ದೊರೆತ ಸುಮಾರು 50 ಪ್ರಾಚ್ಯ ವಸ್ತುಗಳು ಗಮನ ಸೆಳೆಯುತ್ತಿವೆ.

ಅಂತ್ಯಕ್ರಿಯೆಗೆ ಬಳಸುತ್ತಿದ್ದ ಮಣ್ಣಿನ ಮಡಕೆಗಳು, ವೃತ್ತಾಕಾರದ ಕಬ್ಬಿಣದ ಗುರಾಣಿ, ಕತ್ತಿ, ಕೊಡಲಿ, ಬಾಣಗಳ ತಲೆ, ಶೂಲವಿರುವ ಆಯುಧ ಪ್ರದರ್ಶನದಲ್ಲಿವೆ. ಇದಲ್ಲದೇ ಬೇರೆ ಸ್ಥಳಗಳಲ್ಲಿ ಸಂಗ್ರಹಿಸಿದ ಸಮಾಧಿಗೆ ಬಳಸುವ ತೊಟ್ಟಿ, ವೀರಗಲ್ಲುಗಳ ವಿದ್ಯಾರ್ಥಿಗಳು ಹಾಗೂ ಸಂಶೋಧಕರ ಕುತೂಹಲ ಮೂಡಿಸುತ್ತಿವೆ.

ಪ್ರದರ್ಶನಕ್ಕೆ ಚಾಲನೆ : ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆಯ ಉತ್ಖನನ ಶಾಖೆ ಅಧೀಕ್ಷಕ ಆರ್.ಎನ್.ಕುಮಾರ ಪ್ರದರ್ಶನಕ್ಕೆ ಚಾಲನೆ ನೀಡಿದರು, ಬಳಿಕ ಮಾತನಾಡಿದ ಅವರು, ಮಾನವ ಚರಿತ್ರೆ ಅರಿಯಲು ಉತ್ಖನನ ಪ್ರಕ್ರಿಯೆ ಅತ್ಯಂತ ಅಗತ್ಯ. ಜನ ಜೀವನದ ವಾಸ್ತವ ಮಾಹಿತಿ ಲಭ್ಯವಾಗಲು ಶಾಸನ ಮತ್ತು ಸಾಹಿತ್ಯ ಜ್ಞಾನವೂ ಜತೆಯಲ್ಲಿ ಸಾಗಬೇಕು ಎಂದು ಹೇಳಿದರು.

ಬಾದಾಮಿ, ಐಹೊಳೆ, ಪಟ್ಟದಕಲ್ಲು ಮುಂತಾದ ವಿಶ್ವ ಪಾರಾಂಪರಿಕ ಸ್ಥಳಗಳು ಮಾತ್ರವಲ್ಲದೇ ಅನೇಕ ಸ್ಥಳೀಯ ಸ್ಥಳಗಳೂ ಐತಿಹಾಸಿಕ ಮಹತ್ವ ಹೊಂದಿವೆ. ಅವುಗಳನ್ನು ಅರಿತು ಸಂಶೋಧಿಸುವ ಅಗತ್ಯವಿದೆ. ಆಧುನಿಕ ಜಿಪಿಎಸ್, ಸರ್ವೆ, ಸ್ಥಳೀಯ ಜನರ ಮಾಹಿತಿಗಳು ಉತ್ಖನನ ಜಾಗವನ್ನು ಆಯ್ದುಕೊಳ್ಳುವಲ್ಲಿ ಸಹಾಯ ಮಾಡುತ್ತವೆ ಎಂದು ಮಾಹಿತಿ ನೀಡಿದರು.

ದೊಡ್ಡಾಲತ್ತೂರು ಪ್ರಾಚ್ಯವಸ್ತುಗಳಲ್ಲಿ ತ್ರಿಶೂಲ, ಗುರಾಣಿಗಳು ದೊರೆತಿರುವುದು ಬಹಳ ಅಪರೂಪದ ಶೋಧನೆಯಾಗಿದೆ. ದೊಡ್ಡ ಮಡಿಕೆಗಳಲ್ಲಿ ಶವ ಅಥವಾ ಅಸ್ಥಿಯನ್ನು ತುಂಬಿಸಿಡುವ ಪ್ರಕ್ತಿಯೆಯೂ ಭಿನ್ನ. ಇಂಥ ಉತ್ಖನನಗಳು ಚರಿತ್ರೆಕಾರರಿಗೆ ಹೊಸ ಹೊಳವು ನೀಡುತ್ತದೆ. ಜ್ಞಾನ ವಿಸ್ತರಿಸಲಿದೆ ಎಂದರು.

ಇದನ್ನೂ ಓದಿ:-ಧರ್ಮಸ್ಥಳ ಪ್ರಕರಣ | ಸಾಕ್ಷಿ ದೂರುದಾರ ಚಿನ್ನಯ್ಯಗೆ ಜಾಮೀನು

ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನಕ್ಕೆ ಆಸಕ್ತಿ ಹಾಗೂ ಕುತೂಹಲ ಬಹುಮುಖ್ಯ. ಹಿಂದಿನ ಸಮಾಜ ಹೇಗಿತ್ತು, ಮುಂದೆ ಹೇಗಿರಬೇಕು ಎಂಬುದನ್ನು ಅರಿಯಲು ಪ್ರಾಚೀನ ಇತಿಹಾಸ ಅಗತ್ಯ ಎಂದರು.

32 ಕೋಟಿ ವೆಚ್ಚದಲ್ಲಿ ಜಾನಪದ ವಸ್ತು ಸಂಗ್ರಹಾಲಯದಲ್ಲಿ, ವಸ್ತುಗಳ ಸಂಗ್ರಹ, ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿಯೂ ಉತ್ಖನನದಿಂದ ದೊರೆತ ವಸ್ತುಗಳ ಪ್ರದರ್ಶನಕ್ಕೆ ವ್ಯವಸ್ಥೆಯಾಗಬೇಕಿದೆ. ಆಸಕ್ತರು ಸಹಕರಿಸಬೇಕು ಎಂದರು.

ಮಿಥಿಕ್ ಸೊಸೈಟಿ ಅಧ್ಯಕ್ಷ ವಿ.ನಾಗರಾಜ್ ಮಾತನಾಡಿ, ಉತ್ಖನನಗಳು ಅಥವಾ ಪ್ರಾಚ್ಯವಸ್ತುಗಳ ಅಧ್ಯಯನವು ದೇಶದ ಸಮಗ್ರತೆಗೂ ಅಗತ್ಯ ವಾತಾವರಣ ಕಲ್ಪಿಸುತ್ತವೆ. ಲಿಪಿಗಳ ಕುರಿತ ಅಧ್ಯಯನವು ಎಲ್ಲದರ ಮೂಲ ಬ್ರಾಹ್ಮಿ ಲಿಪಿ ಎಂಬುದನ್ನು ತಿಳಿಸಿ ಐಕ್ಯತೆ ಮೂಡಿಸಿದೆ. ಪ್ರಪಂಚದಲ್ಲಿಯೇ ನಮ್ಮದು ಅತ್ಯಂತ ಪುರಾತನ ಸಂಸ್ಕೃತಿ ಮತ್ತು ಪರಂಪರೆ, ಇದು ನಿರಂತರತೆಯನ್ನೂ ಹೊಂದಿದೆ, ಅಗಾಧವಾಗಿದೆ ಎಂದು ಹೇಳಿದರು.

ವಿಭಾಗದ ನಿರ್ದೇಶಕಿ ಪ್ರೊ.ವಿ.ಶೋಭಾ, ಮಿಥಿಕ್ ಸೊಸೈಟಿ ಕಾರ್ಯದರ್ಶಿ ಎಸ್.ರವಿ, ಕ್ಯೂರೇಟರ್ ಎಸ್‌.ಶಶಿಕುಮಾರ್‌, ಆಂಟಿಕ್ವಿಟಿ ಸಹಾಯಕ ಅನಿಲ್‌ ಹಾಜರಿದ್ದರು.

ಆಂದೋಲನ ಡೆಸ್ಕ್

Recent Posts

ಚಾ.ಬೆಟ್ಟದ ತಪ್ಪಲಿನಲ್ಲಿ ಬೆಂಕಿ : ಕಿಡಿಗೇಡಿಗಳ ಕೃತ್ಯಕ್ಕೆ ಸಸ್ಯ ಸಂಕುಲ ಹಾನಿ

ಮೈಸೂರು:  ಕಿಡಿಗೇಡಿಗಳು ಬೆಂಕಿ ಹಚ್ಚಿದ ಕೃತ್ಯಕ್ಕೆ ಚಾಮುಂಡಿಬೆಟ್ಟದ ತಪ್ಪಲಿನ ಕೆಲವು ಪ್ರದೇಶ ಹೊತ್ತಿ‌ಉರಿದಿದ್ದು,ಕೆಲಕಾಲ‌ ಆತಂಕ‌ ನಿರ್ಮಾಣವಾಗಿತ್ತು. ಚಾಮುಂಡಿಬೆಟ್ಟದ ತಪ್ಪಲಿನ ರಿಂಗ್…

4 hours ago

ಮೈಸೂರು | ಅಪೋಲೋ ಆಸ್ಪತ್ರೆಯಲ್ಲಿ ರೋಬೊಟಿಕ್‌ ಶಸ್ತ್ರಚಿಕಿತ್ಸೆ ಸೌಲಭ್ಯ

ಮೈಸೂರು : ನಗರದ ಅಪೋಲೋ ಬಿಜಿಎಸ್ ಆಸ್ಪತ್ರೆಯು ಮೈಸೂರಿನಲ್ಲಿ ಮೊದಲ ಸಮಗ್ರ ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ಆರಂಭಿಸಿದೆ. ಇದು ಈ ವ್ಯಾಪ್ತಿಯಲ್ಲಿ…

4 hours ago

ಆವಿಷ್ಕಾರ,ವಿಜ್ಞಾನ, ತಂತ್ರಜ್ಞಾನದ ಬಗ್ಗೆ ರೈತರಿಗೆ ಅರಿವು ಮೂಡಿಸಿ : ಎನ್.ಚಲುವರಾಯಸ್ವಾಮಿ

ಬೆಂಗಳೂರು : ಕೃಷಿ ಹಾಗೂ ಜಲಾನಯನ ಇಲಾಖೆ ವತಿಯಿಂದ ಕೈಗೊಳ್ಳಲಾಗಿರುವ ಎಲ್ಲಾ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಕೃಷಿ ಸಚಿವರಾದ…

6 hours ago

ಬಜೆಟ್ ಘೋಷಣೆಯಂತೆ ಚಾಲುಕ್ಯ ಉತ್ಸವದ ಆಯೋಜನೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬಾಗಲಕೋಟೆ : 2025-26ರ ಬಜೆಟ್ ನಲ್ಲಿ ಮಾಡಿದ ಘೋಷಣೆಯಂತೆ ಬಾದಾಮಿಯ ಐತಿಹಾಸಿಕ ಪರಂಪರೆಯನ್ನು ಸಾರುವ ಚಾಲುಕ್ಯ ಉತ್ಸವವಕ್ಕೆ ಚಾಲನೇ ನೀಡಲು…

6 hours ago

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್‌ ಅವಿರೋಧ ಆಯ್ಕೆ

ಹೊಸದಿಲ್ಲಿ : ನಿರೀಕ್ಷೆಯಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಬಿಹಾರ ಮೂಲದ ನಿತಿನ್ ನಬಿನ್ ಅವರು ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ…

6 hours ago

ವಿಡಿಯೋ ವೈರಲ್‌ ಬೆನ್ನಲ್ಲೇ ಡಿಜಿಪಿ ರಾಮಚಂದ್ರರಾವ್‌ ಅಜ್ಞಾತ ಸ್ಥಳಕ್ಕೆ

ಬೆಂಗಳೂರು : ಡಿಜಿಪಿ ರಾಮಚಂದ್ರರಾವ್‌ ಅವರ ರಾಸಲೀಲೆ ವಿಡಿಯೋ ವೈರಲ್ ಆಗಿದೆ. ಈ ಬೆನ್ನಲ್ಲೇ ಡಿಜಿಪಿ ರಾವ್‌ ಅವರು ಹತ್ತು…

7 hours ago