ಮೈಸೂರು: ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜೀವನ ಸಾಧನೆಯೇ ಒಂದು ದೊಡ್ಡ ಮೈಲಿಗಲ್ಲು ಎಂದು ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರಾದ ಎಸ್.ಎಲ್.ಚನ್ನಬಸವಣ್ಣ ಹೇಳಿದರು.
ವಿಜಯನಗರ 1ನೇ ಹಂತದ ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಬುದ್ಧ ವಿಹಾರದಲ್ಲಿ ಕರ್ನಾಟಕ ಬುದ್ಧ ಧಮ್ಮ ಸಮಿತಿ ವತಿಯಿಂದ ಶುಕ್ರವಾರ ಸಂಜೆ ಆಯೋಜಿಸಿದ್ದ ಬೋಧಿಸತ್ವ ಬಾಬಾಸಾಹೇಬ್ ಅಂಬೇಡ್ಕರ್‌ರವರ ಪರಿನಿರ್ವಾಣ ದಿನಾಚರಣೆ ಮತ್ತು ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಬಹುಜನರು, ತಳ ಸಮುದಾಯವನ್ನು ಶಿಕ್ಷಣದ ಮೂಲಕವೇ ಮೇಲೆತ್ತುವ ಕೆಲಸ ಮಾಡಿದರು. ಇಂತಹ ಕೆಲಸ ಯಾವ ದೇಶದಲ್ಲೂ ಆಗಿಲ್ಲ. ಬೇರೆ ದೇಶಗಳಲ್ಲಿ ಜನರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹಿಂಸಾತ್ಮಕ ಕೃತ್ಯವನ್ನು ಅನುಸರಿಸಿದ್ದರಿಂದ ರಕ್ತ ಕ್ರಾಂತಿಗಳೇ ನಡೆದಿವೆ, ಹಿಂಸೆಯ ಮೂಲಕವೇ ಹಕ್ಕುಗಳನ್ನು ಪಡೆಯುವ ಕೆಲಸವಾಗಿದೆ. ಆದರೆ ಭಾರತದಲ್ಲಿ ಬಾಬಾ ಸಾಹೇಬರು ಇದಕ್ಕೆ ಅವಕಾಶ ನೀಡದೆ ಶಾಂತಿಯುತ ಹೋರಾಟದ ಮೂಲಕವೇ ಜನರಿಗೆ ಸಮಾನತೆಯನ್ನು ತಂದುಕೊಡುವ ಕೆಲಸ ಮಾಡಿದರು ಎಂದು ಸ್ಮರಿಸಿದರು.
ಯಾವುದೇ ಭಾಷೆ, ಧರ್ಮ, ಸಂಸ್ಕೃತಿಯನ್ನು ಪಾಲನೆ ಮಾಡಲು ಸಂವಿಧಾನವೇ ಮೂಲಕಾರಣ. ಆದ್ದರಿಂದ ಈ ದೇಶದ ನಿಜವಾದ ಧರ್ಮ ಗ್ರಂಥ ಸಂವಿಧಾನವಾಗಿದೆ. ಇಂದಿನ ಪೀಳಿಗೆಗೆ ಬಾಬಾ ಸಾಹೇಬರನ್ನು ಪರಿಚಯಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್. ಮಹದೇವಪ್ಪ ಮಾತನಾಡಿ, ಹಿಮಾಲಯದ ಮಾನಸ ಸರೋವರದಲ್ಲಿ ಹುಟ್ಟಿ, ಹಳ್ಳಕೊಳ್ಳ ಪ್ರದೇಶ, ಗಿರಿಕಂದರಗಳನ್ನು ದಾಟಿ ಬಯಲಾಗಿ ಹರಿಯುವ ಗಂಗಾನದಿಯು ಕೋಟ್ಯಂತರ ಜನರ ಜೀವನಾಡಿಯಾಗಿದೆ. ಅನೇಕ ಸಂಸ್ಕೃತಿ, ಧಾರ್ಮಿಕ ಕೇಂದ್ರಗಳ ಭಕ್ತಿ ಭಾವದ ಸೆಲೆಯಾಗಿ ಹರಿಯುವ ಗಂಗಾನದಿಯಂತೆ ಬಾಬಾಸಾಹೇಬರು ಈ ದೇಶದ ಕೋಟ್ಯಂತರ ಶೋಷಿತ ಜನರ ಧ್ವನಿಯಾಗಿ, ಅವರ ಬದುಕಿನ ದಾರಿದೀಪವಾಗಿದ್ದಾರೆ.
ಸಾವಿರಾರು ಕಿಲೋ ಮೀಟರ್ ದೂರ ಹರಿಯುವ ಗಂಗಾನದಿಯನ್ನು ಪೂಜ್ಯನೀಯ ಭಾವದಿಂದ ಗೌರವಿಸುತ್ತಾರೆ. ಬಾಬಾ ಸಾಹೇಬರು ಕೂಡ ಶೋಷಿತರ ನಡುವೆ ಇಂತಹದ್ದೇ ಸ್ಥಿತಿಯನ್ನು ತಲುಪಿದ್ದಾರೆ. ಹಾಗಾಗಿ ಬಾಬಾಸಾಹೇಬರನ್ನು ಸಾಂಸ್ಕೃತಿಕ ನಾಯಕರನ್ನಾಗಿ ಸ್ವೀಕರಿಸಿದ್ದಾಗ ಮಾತ್ರ ನಮ್ಮ ನಡುವೆ ಉಳಿಯುತ್ತಾರೆ ಎಂದರು.
ಇದೇ ವೇಳೆ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಪ್ರೊ.ಸಿದ್ದಣ್ಣ ಲಂಗೋಟಿ, ಸಮಿತಿಯ ಅಧ್ಯಕ್ಷರಾದ ಪ್ರೊ.ಡಿ.ನಂಜುಂಡಯ್ಯ, ಸಹ ಕಾರ್ಯದರ್ಶಿ ಎಚ್. ಶಿವರಾಜ್, ಎಂ.ಸಾವಕಯ್ಯ , ನಿವೃತ್ತ ಇಂಜಿನಿಯರ್ ಆರ್. ನಟರಾಜ್, ರಾಜು ಹಂಪಾಪುರ, ನಿಸರ್ಗ ಸಿದ್ದರಾಜು, ಕ್ರಾಂತಿರಾಜ್ ಓಡೆಯರ್, ಪುಟ್ಟಸ್ವಾಮಿ, ದಯಾನಂದಮೂರ್ತಿ, ಕೆ. ಮಹಾದೇವಯ್ಯ, ಡಾ.ಸತ್ತಿಗೆಹುಂಡಿ ಮಂಜು, ಶಶಿಕಲಾ, ಮಾ.ನಾಗಯ್ಯ, ಪ್ರೇಮಲತಾ, ಬಿ. ಗಾಯತ್ರಿದೇವಿ, ರಾಜಮ್ಮ, ಪುಟ್ಟಮಾದಯ್ಯ, ಡಾ. ಎಸ್. ಜಯರಾಜು, ಎಚ್. ವಾಸು, ಪಿ.ಮರಿಸ್ವಾಮಿ, ಮಹದೇವಸ್ವಾಮಿ, ಕೆ. ಸಿದ್ದರಾಜು, ಎಸ್. ಆರ್. ಪ್ರಶಾಂತ್, ಸಣ್ಣಯ್ಯ ಲಕ್ಕೂರು, ರೂಪೇಶ್, ವಿಜಯ್ ಕುಮಾರ್, ಸಚಿನ್, ವಿವಿಧ ಸಂಘ -ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.
ಬೆಳಗಾವಿ: ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಕರ್ನಾಟಕ…
ಬೆಳಗಾವಿ: ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿರುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ…
ಮಂಡ್ಯ: ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಲಿರುವ ಕನ್ನಡ ನುಡಿ ಜಾತ್ರೆಗೆ ನಾಳೆ ಅದ್ಧೂರಿ ಚಾಲನೆ ಸಿಗಲಿದ್ದು,…
ನವದೆಹಲಿ: ಬಾಬಾಸಾಹೇಬ್ ಅಂಬೇಡ್ಕರ್ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಯ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.…
ತುಮಕೂರು: 70 ಲಕ್ಷ ಕರೆಂಟ್ ಬಿಲ್ ಕಟ್ಟುವಂತೆ ಸಿದ್ಧಗಂಗಾ ಮಠಕ್ಕೆ ನೀಡಿದ್ದ ನೋಟಿಸನ್ನು ಸರ್ಕಾರ ಹಿಂಪಡೆದಿದೆ. ಸರ್ಕಾರಿ ನೀರಾವರಿ ಯೋಜನೆಗೆ…
ಹೈದರಾಬಾದ್: ಟಾಲಿವುಡ್ ಚಲನಚಿತ್ರ ಬಳಗಂ ಮೂಲಕ ಪ್ರಖ್ಯಾತಿ ಗಳಿಸಿದ್ದ ಜನಪ್ರಿಯ ಜಾನಪದ ಕಲಾವಿದ ದರ್ಶನಂ ಮೊಗಿಲಯ್ಯ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.…