ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ: ಸಂಸದ ಪ್ರತಾಪಸಿಂಹ ಹೇಳಿದ್ದೇನು?

ಮೈಸೂರು: ಮೈಸೂರು-ಕೊಡಗು ಜನ ನನಗೆ ಸಂಸದ ಸ್ಥಾನ ನೀಡಿದ್ದಾರೆ, ಅಷ್ಟೇ ಸಾಕು ಸಂಸದ ಪ್ರತಾಪಸಿಂಹ ಹೇಳಿದರು.

ಕೇಂದ್ರ ಸಚಿವ ಸಂಪುಟಕ್ಕೆ ತಮ್ಮ ಹೆಸರು ಪ್ರಸ್ತಾಪ ವಿಚಾರವಾಗಿ ಮಾತನಾಡಿದ ಅವರು, ಕ್ಷೇತ್ರದ ಜನರ ಸೇವೆ ಮಾಡಲು ನನಗೆ ಕೊಟ್ಟಿರುವ ಸಂಸದ ಸ್ಥಾನವೇ ಸಾಕು ಎಂದು ಪ್ರತಿಕ್ರಿಯಿಸಿದರು.

ಸಂಸದನಾದ ಮೇಲೆ ಸಚಿವ ಆಗಬೇಕು. ಸಚಿವರ ನಂತರ ಸಿಎಂ ಆಗಬೇಕು ಎನ್ನುವ ಆಸೆಗಿಂತ ಕೊಟ್ಟಿರುವ ಸ್ಥಾನದಲ್ಲಿ ಮುಂದುವರಿಯುವುದು ಉತ್ತಮ. ಒಂದರ ನಂತರ ಒಂದು ಸ್ಥಾನಕ್ಕೆ ಆಸೆ ಪಡುವ ಬದಲು ಇರುವ ಹುದ್ದೆಯಲ್ಲೇ ಕೆಲಸ ಮಾಡಬೇಕು ಎಂದು ತಿಳಿಸಿದರು.