ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಪತ್ನಿ ವಿಜಯಾ ನಿಧನ

ಕೊಳ್ಳೇಗಾಲ: ಇಲ್ಲಿನ ಶಾಸಕ, ಮಾಜಿ ಸಚಿವ ಎನ್.ಮಹೇಶ್ ಅವರ ಪತ್ನಿ ವಿಜಯಾ (64) ಭಾನುವಾರ ನಿಧನರಾದರು.

ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ,ಪತಿ ಎನ್.ಮಹೇಶ್ ಹಾಗೂ ಪುತ್ರ ಇದ್ದಾರೆ. ಅಂತ್ಯ ಕ್ರಿಯೆ ಬೆಂಗಳೂರು‌ ಬಳಿಯ ಕನಕಪುರದಲ್ಲಿರುವ ಕಾನ್ಸಿ ಫೌಂಡೇಷನ್‌ನಲ್ಲ ಸಂಜೆ ನಡೆಯಲಿದೆ.

ಉಸಿರಾಟದ ಸಮಸ್ಯೆ ಕಾರಣದಿಂದ ನಿನ್ನೆಯಷ್ಟೇ ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ 11.30 ಸುಮಾರಿಗೆ ಕೊನೆಯುಸಿರೆಳೆದರು.

ಮಂಡ್ಯ ಅಪೆಕ್ಸ್ ಬ್ಯಾಂಕ್ ಮ್ಯಾನೇಜರ್ ಆಗಿದ್ದ ವಿಜಯಾ ಅವರು ನಿವೃತ್ತರಾಗಿ 3 ವರ್ಷಗಳಾಗಿತ್ತು.