ಅಪ್ರಾಪ್ತ ಬಾಲಕಿ ಮೇಲೆ ಉಪನ್ಯಾಸಕನಿಂದ ಅತ್ಯಾಚಾರ ಆರೋಪ‌; ಆರೋಪಿ ಜಾಮೀನು ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಉಪನ್ಯಾಸಕ ಅತ್ಯಾಚಾರ ಮಾಡಿದ ಆರೋಪ‌ ಕೇಳಿಬಂದಿದ್ದು, ಆರೋಪಿ ಉಪನ್ಯಾಸಕನ ಜಾಮೀನನ್ನು ಹೈಕೋರ್ಟ್ ರದ್ದುಪಡಿಸಿದೆ. ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯಲ್ಲಿ 2018ರಲ್ಲಿ ಅತ್ಯಾಚಾರವೆಸಗಿ ನಗ್ನ ಫೋಟೋ ಸೆರೆ ಹಿಡಿದಿದ್ದ ಆರೋಪಿ ಮೇಲೆ 2021ರಲ್ಲಿ ಸಂತ್ರಸ್ತ ಬಾಲಕಿಯ ಪೋಷಕರು ದೂರು ದಾಖಲಿಸಿದ್ದರು. ಆದರೆ ಬಂಧನವಾದ ಎರಡೇ ದಿನಕ್ಕೆ ಉಪನ್ಯಾಸಕನಿಗೆ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನೀಡಿತ್ತು.

ಹೀಗಾಗಿ ನೊಂದ ಸಂತ್ರಸ್ತ ಬಾಲಕಿಯ ಪೋಷಕರು ಜಾಮೀನು ರದ್ದು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಸದ್ಯ ಆರೋಪಿ ಎಲ್.ಗುರುರಾಜ್ ಜಾಮೀನು ರದ್ದುಗೊಳಿಸಿ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ತೀರ್ಪು ನೀಡಿದ್ದಾರೆ.