ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಪಾಲಿಕೆ ಅಧಿಕಾರಿಗೆ ಬಿತ್ತು ಗೂಸಾ

ಮೈಸೂರು: ಆಶ್ರಯ ಮನೆಗಾಗಿ ವಾಸ ದೃಢೀಕರಣ ಪತ್ರ ಕೇಳಿದ ಮಹಿಳೆಯೋರ್ವಳೊಂದಿಗೆ ಅಸಭ್ಯವಾಗಿ ಮಾತನಾಡಿದ ಮೈಸೂರು ಮಹಾನಗರ ಪಾಲಿಕೆಯ ವಲಯ ಅಧಿಕಾರಿಗೆ ಮಹಿಳೆಯರು ಧರ್ಮದೇಟು ನೀಡಿದ್ದಾರೆ ಎನ್ನಲಾದ ವಿಡಿಯೋ ತಡವಾಗಿ ಬೆಳಕಿಗೆ ಬಂದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಾಲಿಕೆಯ ವಲಯ ಅಧಿಕಾರಿಯೊಬ್ಬರು ಮಹಿಳೆಯೊಂದಿಗೆ ಅಶ್ಲೀಲವಾಗಿ ಮಾತನಾಡಿದ ಆರೋಪ ಎದುರಿಸುತ್ತಿದ್ದು, ಅವರ ವರ್ತನೆಯಿಂದ ಕೋಪಗೊಂಡ ಮಹಿಳೆಯರು ಶಾರದಾದೇವಿನಗರದ ವಲಯ ಕಚೇರಿಗೆ ನುಗ್ಗಿ ಥಳಿಸಿದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಆಶ್ರಯ ಮನೆಗಾಗಿ ವಾಸ ಧೃಡೀಕರಣ ಪತ್ರಕ್ಕೆ ಮನವಿ ಮಾಡಿದ್ದ ಮಹಿಳೆಯೊಂದಿಗೆ ವಿಷಕಂಠೇಗೌಡ ಅಸಭ್ಯ ಹಾಗೂ ಅಶ್ಲೀಲ ಮಾತುಗಳನ್ನಾಡಿದ್ದರು ಎಂದು ಮಹಿಳೆಯರು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us