ತನ್ನ ಮದುವೆ ದಿನವೇ ಬಿ.ಕಾಂ ಪರೀಕ್ಷೆ ಬರೆದ ಮದುಮಗಳು

ಮಂಡ್ಯ : ವಿದ್ಯಾರ್ಥಿಯೊಬ್ಬಳು ತನ್ನ ಮದುವೆ ದಿನವೇ ಪ್ರಥಮ ವರ್ಷದ ಬಿ. ಕಾಂ. ಪರೀಕ್ಷೆ ಬರೆಯುವ ಮೂಲಕ ವಿದ್ಯಾಭ್ಯಾಸವೂ ಮುಖ್ಯ  ದಾಂಪತ್ಯ ಜೀವನವೂ ಮುಖ್ಯ ಎಂದು ಸಾಭೀತು ಪಡಿಸಿದ್ದಾಳೆ.

ಪಾಂಡವಪುರ ತಾಲ್ಲೂಕ್ಕಿನ ಚಿನಕುರುಳಿ ಎಸ್‌.ಟಿ.ಜಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ ಓದುತ್ತಿರುವ ಲಿಂಗಾಪುರ ಗ್ರಾಮದ  ಐಶ್ವರ್ಯ ಪರೀಕ್ಷೆ ಬರೆಯುವ ಮೂಲಕ ಪರೀಕ್ಷೆಯ ಮಹತ್ವವನ್ನು ಸಾರಿದ್ದಾರೆ.

ತನ್ನ ಮದುವೆ ದಿನವೇ ಪ್ರಥಮ ವರ್ಷದ ಪರೀಕ್ಷೆ ನಿಗದಿಯಾಗಿದ್ದರಿಂದ ತಾಳಿ ಕಟ್ಟಿ ಧಾರೆಯೆರೆದ ತಕ್ಷಣ ಕಲ್ಯಾಣ ಮಂಟಪದಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದಿದ್ದಾರೆ.