ಮಾಣಿಕ್ ಸಾಹ ತ್ರಿಪುರಾ ನೂತನ ಸಿಎಂ

ತ್ರಿಪುರಾ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಮಾಣಿಕ್ ಸಾಹ ಅವರನ್ನು ನೇಮಿಸಲಾಗಿದೆ.
ತ್ರಿಪುರಾ ಮುಖ್ಯಮಂತ್ರಿ ಸ್ಥಾನಕ್ಕೆ ಬಿಪ್ಲವ್ ಕುಮಾರ್ ದೇವ್ ರಾಜೀನಾಮೆ ನೀಡಿದ ಬೆನ್ನಲ್ಲೇ ಅವರ ಸ್ಥಾನಕ್ಕೆ ಮಾಣಿಕ್ ಸಾಹ ನೇಮಕವಾಗಿದೆ. ಬಿಪ್ಲವ್ ಕುಮಾರ್ ದೇವ್ ರಾಜೀನಾಮೆ ನೀಡಿದ ನಂತರ ಸಂಜೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿತ್ತು. ಸಭೆಯ ಬಳಿಕೆ ಮಾಣಿಕ್ ಸಾಹಾ ಅವರನ್ನು ನೂತನ ಮುಖ್ಯಮಂತ್ರಿಯನ್ನಾಗಿ ಘೋಷಿಸಲಾಗಿದೆ. ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಬಿಜೆಪಿ ವರಿಷ್ಠರ ಸೂಚನೆಯಂತೆ ಬಿಪ್ಲವ್ ಕುಮಾರ್‍‌ ದೇವ್ ಅವರು ರಾಜೀನಾಮೆ ನೀಡಿದ್ದರು. ಈಗ ಅವರ ಸ್ಥಾನಕ್ಕೆ ರಾಜ್ಯಸಭಾ ಸದಸ್ಯ ಮಾಣಿಕ್ ಸಾಹ ಅವರನ್ನು ನೇಮಿಸಲಾಗಿದೆ. ನೂತನ ಮುಖ್ಯಮಂತ್ರಿ ಮಾಣಿಕ್ ಸಾಹ ಅವರಿಗೆ ಬಿಪ್ಲವ್ ದೇವ್ ಅಭಿನಂದನೆ ಸಲ್ಲಿಸಿದ್ದು. ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.