ಕೊಡಗಿನಲ್ಲಿ ಮುಂದುವರಿದ ಕಾಡಾನೆ ದಾಳಿ: ವ್ಯಕ್ತಿ ಗಂಭೀರ

ಮಡಿಕೇರಿ: ಕೊಡಗಿನಲ್ಲಿ ಕಾಡಾನೆ ದಾಳಿ ಮುಂದುವರಿದಿದ್ದು, ವಾಕಿಂಗ್ ತೆರಳಿದ ಸಂದರ್ಭ ಕಾಡಾನೆಗಳ ದಾಳಿಯಿಂದ ವ್ಯಕ್ತಿಯೊಬ್ಬರ‌ ಕಾಲು ಮುರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅರುವತೊಕ್ಕಲು ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆದಿದೆ.

ಪಿಎಚ್‌ಎಸ್‌ ಕಾಲೋನಿಯ ನಿವಾಸಿ ವಿದ್ಯುತ್ ಗುತ್ತಿಗೆದಾರ ರಂಗಸ್ವಾಮಿ (52) ಕಾಡಾನೆ ದಾಳಿಗೆ ಒಳಗಾದ ವ್ಯಕ್ತಿ. ಇವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಗ್ರಾಮದಲ್ಲಿ ಸುಮಾರು 6 ಕಾಡಾನೆಗಳು ಬೀಡುಬಿಟ್ಟಿದ್ದು, ತಕ್ಷಣ ಕಾಡಿಗಟ್ಟುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

× Chat with us