ಕೊಪ್ಪಳ: ಆರೋಗ್ಯ ಇಲಾಖೆ ಸಿಬ್ಬಂದಿ ಎಡವಟ್ಟು; ಲಸಿಕೆ ಪಡೆದ ಕೈ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ ವ್ಯಕ್ತಿ

ಕೊಪ್ಪಳ: ಆರೋಗ್ಯ ಇಲಾಖೆ ಸಿಬ್ಬಂದಿ ಎಡವಟ್ಟಿನಿಂದ ವ್ಯಕ್ತಿಯೊರ್ವರು ಕೈ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ ಘಟನೆ ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಬಳಿ ನಡೆದಿದೆ. ಜೀವ ಉಳಿಸುವ ವ್ಯಾಕ್ಸಿನೇಷನ್‌ ಕಂಠಕವಾಗಿದೆ. ಕೊಪ್ಪಳದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸರಿಯಾಗಿ ಕೈಗೆ ಲಸಿಕೆ ಹಾಕದ ಹಿನ್ನೆಲೆ, ಬಹದ್ದೂರಬಂಡಿ ನಿವಾಸಿ ಹನುಮಂತಪ್ಪ ತಳವಾರ್ ಕೈ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಕಳೆದ ಅಕ್ಟೋಬರ್ 4 ರಂದು ಬಹದ್ದೂರಬಂಡಿ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಕೊವಿಡ್​ ಲಿಸಿಕೆ ಹಾಕಿಸಿಕೊಂಡಿದ್ದ ಹನುಮಂತಪ್ಪನ ಕೈಗೆ ಗಂಭೀರ ಗಾಯವಾಗಿದೆ.

ಸ್ಟಾಫ್ ನರ್ಸ್ ಪ್ರಭಾವತಿ ಎನ್ನುವರು ಹನುಮಂತಪ್ಪನ ಕೈಗೆ ಲಸಿಕೆ ಹಾಕಿದ್ದರು. ಪ್ರಭಾವತಿ ಹನುಮಂತಪ್ಪನ ಕೈಗೆ ಸರಿಯಾಗಿ ಲಸಿಕೆ ಹಾಕದ ಹಿನ್ನಲೆಯಲ್ಲಿ, ವ್ಯಾಕ್ಸಿನೇಷನ್‌ ಹಾಕಿಸಿಕೊಂಡ ನಾಲ್ಕು ದಿನದಲ್ಲಿ ಹನುಮಂತಪ್ಪನ ಕೈಯಲ್ಲಿ ಬಾವು ಕಾಣಿಸಿಕೊಂಡಿದೆ. ಬಳಿಕ ಹನುಮಂತಪ್ಪನ ಕೈಗೆ ಗಂಭೀರ ಗಾಯವಾಗಿದೆ. ಕೈ ಗಾಯದ ಕುರಿತು ಹನುಮಂತಪ್ಪ ಆರೋಗ್ಯ ಇಲಾಖೆಯವರ ಗಮನಕ್ಕೆ ತಂದಿದ್ದಾರೆ.