ತಿಂಗಳಲ್ಲೇ ʻಆರ್ಕೇಸ್ಟ್ರಾʼದಲ್ಲಿ ತಾರೆಗಳೊಂದಿಗೆ ತೆರೆಗೆ ಮಾದಪ್ಪ! 

ಮೈಸೂರು: ʻಬಾರಿಸು ಕನ್ನಡ ಡಿಂಡಿಮ, ಓ ಕರ್ನಾಟಕ ಹೃದಯ ಶಿವಾʼ, ʻನಿನ್ನ ಪೂಜೆಗೆ ಬಂದೆ ಮಹದೇಶ್ವರʼ ಎಂಬ ಗೀತೆಗಳು ಇಂದಿಗೂ ಜನರ ಮನಸ್ಸಲ್ಲಿ ನೆಲೆಸಿರುವ ಹೊತ್ತಿನಲ್ಲೇ ಮತ್ತೊಂದು ಸುತ್ತಿನಲ್ಲಿ ಮೂವರು ತಾರೆಗಳೊಂದಿಗೆ ಮಾದಪ್ಪನ ಕುರಿತ ʻಆರ್ಕೇಸ್ಟ್ರಾʼ ಚಿತ್ರದ ಹಾಡು ಈ ತಿಂಗಳಲ್ಲೇ ತೆರೆ ಕಾಣಲಿದೆ.
dolli
ಈ ಕುರಿತು ʻಆಂದೋಲನʼದೊಂದಿಗೆ ಮಾತನಾಡಿರುವ ಗಾಯಕ ನವೀನ್‌ ಸಜ್ಜು ಅವರು, ಮೈಸೂರು ತಂಡದೊಂದಿಗೆ ಮತ್ತೊಮ್ಮೆ ಮಹದೇಶ್ವರನ ಕುರಿತಂತೆ ಹಾಡೊಂದಕ್ಕೆ ರಘುದೀಕ್ಷಿತ್‌ ಅವರೊಂದಿಗೆ ನಾನು ಹಾಡಿದ್ದೇನೆ. ಮೊದಲ ಬಾರಿಗೆ ರಘುದೀಕ್ಷಿತ್‌ ಅವರೊಟ್ಟಿಗೆ ಕೆಲಸ ಮಾಡಿದ್ದು, ಖುಷಿ ತರಿಸಿದೆ ಎಂದರು.
dalli
ನಟ ಧನಂಜಯ್‌ ಅವರು  ʻಎಲ್ಲೆಲ್ಲೂ ಮಾದಪ್ಪ, ಮಾಡಿಸೋನೆ ಕೈಯಾರೆ ಡಮರಗುವಾʼ ಎಂಬ ಗೀತೆಯನ್ನು ಸ್ವತಃ ಬರೆದು, ನಟಿಸಿರುವುದು ಖುಷಿ ತರಿಸಿದೆ. ಸುನೀಲ್‌ ಮೈಸೂರು ಅವರು ನಿರ್ದೇಶನ ಮಾಡಿದ್ದಾರೆ. ಮೈಸೂರು ತಂಡದ ಸುನೀಲ್‌ ಅವರ ಜತೆಗೆ ಕೆಲಸ ಮಾಡುವುದೇ ಖುಷಿಯ ವಿಚಾರವಾಗಿದೆ. ನಾಯಕರಾಗಿ ಪೂರ್ಣಚಂದ್ರ, ನಾಯಕಿಯಾಗಿ ರಾಜಲಕ್ಷ್ಮಿ ಹಾಗೂ ಮುಖ್ಯ ಪಾತ್ರದಲ್ಲಿ ದಿಲೀಪ್‌ ರಾಜ್ ಕಾಣಿಸಿಕೊಂಡಿದ್ದಾರೆ. ಬಾದಲ್‌, ರಘು ದೀಕ್ಷಿತ್‌‌, ದನಂಜಯ್‌,‌ ಮಾಸ್ಟರ್‌ ಸುಖಿ ಅವರು ನಟಿಸಿದ್ದಾರೆ.
dalli
ಶ್ರೀರಂಗಪಟ್ಟಣ ತಾಲ್ಲೂಕಿನ ಬಳ್ಳೆಕೆರೆ ಗ್ರಾಮದಲ್ಲಿ ಮೂರು ದಿನಗಳ ಶೂಟಿಂಗ್‌ ನಡೆಸಿದ್ದೇವೆ. ಡಾಬಾ ಪಬ್‌ಗಳ ಹಾಡಿನಲ್ಲಿದ್ದ ನಮಗೆ ಜನಪದದ ಗಾಯನದತ್ತ ಮತ್ತೆ ಅವಕಾಶ ದೊರೆತಿದ್ದು ಸಂತಸ ತರಿಸಿದೆ. ಜನಪದ ಪರಂಪರೆಯನ್ನೇ ಬಿಂಬಿಸುವ ಚಿತ್ರೀಕರಣ ಹಾಗೂ ಸಾಹಿತ್ಯ ಜನರ ಮೆಚ್ಚುಗೆಯನ್ನು ಗಳಿಸುವ ವಿಶ್ವಾಸವಿದೆ. ಈ ತಿಂಗಳಲ್ಲೇ ʻಎಲ್ಲೆಲ್ಲೂ ಮಹದೇವʼ ಸಾಂಗ್‌ ಬಿಡುಗಡೆಯಾಗಲಿದೆ ಎಂದರು.
× Chat with us