ಹನೂರು: ಶ್ರೀಲಕ್ಷ್ಮಿ ವೆಂಕಟರಮಣಸ್ವಾಮಿ ರಥೋತ್ಸವ

ಹನೂರು: ತಾಲ್ಲೂಕಿನ ಶಿರಗೋಡು ಗ್ರಾಮದ ಶ್ರೀಲಕ್ಷ್ಮಿ ವೆಂಕಟರಮಣಸ್ವಾಮಿ ರಥೋತ್ಸವ ಶುಕ್ರವಾರ ಬೆಳಿಗ್ಗೆ ವಿಜೃಂಭಣೆಯಿಂದ ಜರುಗಿತು.

ಲೋಕ್ಕನಹಳ್ಳಿ ಹೋಬಳಿ ಚಿಕ್ಕಮಾಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಶಿರಗೋಡು ಗ್ರಾಮದ ಶ್ರೀಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಜಾತ್ರೆಯ ಪ್ರಯುಕ್ತ ರಥೋತ್ಸವವನ್ನು ವಿವಿಧ ಫಲಪುಷ್ಪ ಮತ್ತು ಬಣ್ಣದ ಬಟ್ಟಿಂಗ್ಸ್ ಗಳಿಂದ ಶೃಂಗಾರಗೊಳಿಸಲಾಗಿತ್ತು.

ಸಿಂಗಾರಗೊಳಿಸಿದ ರಥದ ಮೇಲೆ ಲಕ್ಷ್ಮೀ ವೆಂಕಟರಮಣಸ್ವಾಮಿ ಉತ್ಸವ ಮೂರ್ತಿ ಇಟ್ಟು ಪೂಜೆ ಸಲ್ಲಿಸಿದ ಬಳಿಕ ಛತ್ರಿ ಚಮರ ಸತ್ತಿಗೆ ಸೂರಿಪಾನಿ ತಮಟೆ ವಾದ್ಯ ಮೇಳದೊಂದಿಗೆ ತೇರು ಎಳೆದು ದೇವಸ್ಥಾನ ಸುತ್ತ ಪ್ರದಕ್ಷಣೆ ಹಾಕಿದರು.

ಎರಡನೇ ದಿನವಾದ ಇಂದು ಗರುಡ ದೇವರಿಗೆ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಮಾಡಿ ಗರುಡೋತ್ಸವ ಪೂಜಾ ಕಾರ್ಯಕ್ರಮವನ್ನು ಮಾಡಲಾಯಿತು. ಇದೇ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಜನರಿಗೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯವನ್ನು ಹಸಿರು ತೋರಣಗಳಿಂದ ಸಿಂಗರಿಸಿ ಕಂಗೊಳಿಸುವಂತೆ ಮಾಡಲಾಗಿತ್ತು. ಜಾತ್ರೆಯ ಪ್ರಯಕ್ತ ರಾತ್ರಿ ಶಿವಕುಮಾರ ಶಾಸ್ತ್ರಿ ಮತ್ತು ವೃಂದದವರಿಂದ ಹರಿಕಥೆ ಏರ್ಪಡಿಸಲಾಗಿತ್ತು.

ಎಲ್ಲಾ ಪೂಜಾ ಕೈಂಕಾರ್ಯಗಳನ್ನು ಕೊಳ್ಳೇಗಾಲದ ಪುರೋಹಿತ ನಂದಕುಮಾರ್ ಹಾಗೂ ದೇವಸ್ಥಾನ ಅರ್ಚಕ ರಾಮಕೃಷ್ಣ ನೆರವೇಸಿದರು.

× Chat with us