ಅರುಣ್ ಸಿಂಗ್ ಬಂದಿದ್ದೆ ದುಡ್ಡು ಕಲೆಕ್ಷನ್‌ಗೆ: ಕುಮಾರಸ್ವಾಮಿ

ಮೈಸೂರು: ಜೆಡಿಎಸ್ ಪಕ್ಷ ಮುಳುಗುತ್ತಿರುವ ಹಡಗು ಎಂದಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಇಲ್ಲಿಗೆ ಬಂದಿದ್ದೆ ದುಡ್ಡು ಕಲೆಕ್ಷನ್‌ಗೆ. ಇಂತಹ ದಲ್ಲಾಳಿಗೆ ಯಾರೂ ಬೆಲೆ ಕೊಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊನ್ನೆ ನಡೆದ ಮೇಯರ್ ಚುನಾವಣೆಯಲ್ಲಿ ಸಾ.ರಾ.ಮಹೇಶ್ ಮನೆಗೆ ಅರ್ಧ ರಾತ್ರಿ ಬಂದು ಬಾಗಿಲು ತಟ್ಟಿದವರು ಯಾರು? ನಾವೇನು ಅವರ ಬಳಿ ಹೋಗಿ ಬೆಂಬಲ ನೀಡುತ್ತೇವೆ ಎಂದಿದ್ದೆವಾ? ಮೊದಲು ಅವರ ಪಕ್ಷವನ್ನು ಸರಿ ಮಾಡಿಕೊಳ್ಳಲಿ. ಬಿಜೆಪಿಯವರು ಮೈಸೂರು- ಚಾಮರಾಜನಗರದಲ್ಲಿ ೧೩ ಸೀಟು ಗೆಲ್ಲುತ್ತೇವೆ ಎಂದಿದ್ದಾರೆ. ನೋಡುವ ಎಷ್ಟು ಸೀಟು ಗೆಲ್ಲುತ್ತಾರೆ ಅಂತಹ ಛೇಡಿಸಿದರು.

× Chat with us