ಸಂಸ್ಕೃತ ವಿವಿ ಕಟ್ಟಡ ನಿರ್ಮಾಣಕ್ಕೆ; ರಾಜ್ಯ ಮುಕ್ತ ವಿವಿಯ ಹಣ!

ಮೈಸೂರು: ರಾಜ್ಯ ಸರ್ಕಾರವು ಮಾಗಡಿ ತಾಲ್ಲೂಕಿನಲ್ಲಿ ರಾಜ್ಯ ಸಂಸ್ಕೃತ ವಿವಿ ಸ್ಥಾಪಿಸಲು ಮುಂದಾಗಿರುವುದು ಈಗಾಗಲೇ ಭಾರೀ ವಿರೋಧಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರವು ಮಾಗಡಿ ತಾಲ್ಲೂಕಿನಲ್ಲಿ ರಾಜ್ಯ ಸಂಸ್ಕೃತ ವಿವಿ ಸ್ಥಾಪಿಸಲು ಮುಂದಾಗಿರುವುದು ಈಗಾಗಲೇ ಭಾರೀ ವಿರೋಧಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ ಸಂಸ್ಕೃತ ವಿವಿ ಕಟ್ಟಡ ನಿರ್ಮಾಣಕ್ಕೆ ಅವಶ್ಯವಾದ ಸಂಪೂರ್ಣ ವೆಚ್ಚವನ್ನು ಮೈಸೂರಿನಲ್ಲೇ ಇರುವ ಕರ್ನಾಟಕ ರಾಜ್ಯಮುಕ್ತ ವಿಶ್ವವಿದ್ಯಾನಿಲಯವೇ ಭರಿಸಲು ಮುಂದಾಗಿರುವುದು ಕುತೂಹಲ ಕೆರಳಿಸಿದೆ.

ಈ ಸಂಬಂಧ ಕರ್ನಾಟಕ ರಾಜ್ಯ ಮುಕ್ತ ವಿವಿಯ ವ್ಯವಸ್ಥಾಪನಾ ಮಂಡಳಿಯು ಸಭೆಯಲ್ಲಿ ನಿರ್ಣಯವನ್ನೂ ಕೈಗೊಂಡಿದ್ದು, ಸಂಸ್ಕೃತ ವಿಶ್ವವಿದ್ಯಾನಿಲಯ ನಿರ್ಮಾಣಕ್ಕೆ 25 ಕೋಟಿ ರೂ. ನಿಗದಿಪಡಿಸಿ ಅನುಮೋದನೆ ಪಡೆಯಲಾಗಿದೆ.

ಪ್ರೊ.ಕೆ.ಎಸ್‌.ರಂಗಪ್ಪ ಅವರ ಅವಧಿಯಲ್ಲಿ 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದರು. ಜೊತೆಗೆ ವಿವಿ ಕಾಯ್ದೆ ನಿಯಮ ಹಾಗೂ ಸ್ಟ್ಯಾಚೂಟ್‌ಗಳ ಪ್ರಕಾರವೇ ಹೊಸ ಕೋರ್ಸ್ ಗಳನ್ನು ಆರಂಭಿಸಲಾಗಿದೆ ಎಂಬುದು ಸಾಬೀತಾಯಿತು. ಪರಿಣಾಮ ಅಪಪ್ರಚಾರ ಬಂದ್ ಆಯಿತು.

ಇದೀಗ ವಿಪರ್ಯಾಸ ಎಂಬಂತೆ, ಪ್ರೊ.ಕೆ.ಎಸ್.ರಂಗಪ್ಪ ಅವರ ಅವಧಿಯಲ್ಲಿ ಕ್ರೂಢೀಕರಿಸಿದ ಆರ್ಥಿಕ ಸಂಪನ್ಮೂಲದಲ್ಲೇ (ಅಂದಾಜು 650 ಕೋಟಿ ರೂ.) ಮುಕ್ತ ವಿವಿಯ ಕಾರ್ಯಚಟುವಟಿಕೆ ಕಳೆದ ಕೆಲ ವರ್ಷಗಳಿಂದ ನಿರ್ವಹಿಸುತ್ತಿರುವುದು. ಈಗಾಗಲೇ ಈ ಮೊತ್ತದ ಶೇ.50ರಷ್ಟು ಹಣ ವ್ಯಯಿಸಲಾಗಿದ್ದು, ಇದಕ್ಕೆ ಹೊಲಿಸಿದಲ್ಲಿ ಸಂಗ್ರಹ ಶೂನ್ಯವೆಂದೇ ಹೇಳಬಹುದು. ಜತೆಗೆ ಇದೀಗ, ಕರ್ನಾಟಕ ಸಂಸ್ಕೃತ ವಿವಿ ಕಟ್ಟಡ ನಿರ್ಮಾಣಕ್ಕೂ ಇದೇ ಹಣವನ್ನು (ವಿದ್ಯಾರ್ಥಿಗಳ ಶುಲ್ಕ ) ಕಾನೂನು ಬಾಹಿರವಾಗಿ ಬಳಕೆ ಮಾಡಲಾಗುತ್ತಿದೆ.

ಒಂದು ವಿವಿಯಲ್ಲಿ ಸಂಗ್ರಹಗೊಂಡ ಹಣವನ್ನು ಮತ್ತೊಂದು ವಿವಿಗೆ ಬಳಕೆ ಮಾಡುವ ನಿಟ್ಟಿನಲ್ಲಿ ಯಾವುದೇ ಕಾನೂನುಗಳಿಲ್ಲ. ಸಚಿವ ಸಂಪುಟದಲ್ಲೂ ಈ ಬಗ್ಗೆ ಚರ್ಚಿಸಿ ಅನುಮತಿ ಪಡೆದುಕೊಂಡಿಲ್ಲ. ಒಂದು ಕಡೆ ನಿಯಮ ಬಾಹಿರವಾಗಿ ಕೋರ್ಸ್ ಗಳನ್ನು ಆರಂಭಿಸಲಾಗಿದೆ ಎಂಬ ಆರೋಪ, ತನಿಖೆ. ಮತ್ತೊಂದೆಡೆ ಈ ರೀತಿ ಕೆಲಸಗಳಿಂದಲೇ ಕ್ರೂಢೀಕರಿಸಿದ ಸಂಪನ್ಮೂಲದ ಸಹಾಯದಿಂದಲೇ ಸಂಸ್ಕೃತ ವಿವಿಗೆ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಸಹಕಾರ ನೀಡುತ್ತಿರುವುದು ಎಷ್ಟು ಸರಿ? ಎಂಬುದೇ ನೆಟ್ಟಿಗರ ಪ್ರಶ್ಮೆ.