ಈ ದೇಶ ಕಂಡ ಭಷ್ಟ, ಸುಳ್ಳುಗಾರ ಅಂದರೆ ಮೋದಿ: ಉಗ್ರಪ್ಪ ವಾಗ್ದಾಳಿ

ಮೈಸೂರು: ದೇಶ ಕಂಡ ಅತ್ಯಂತ ಸುಳ್ಳುಗಾರ ಮತ್ತು ಮಹಾ ಭ್ರಷ್ಟ ಪ್ರಧಾನಿ ಯಾರಾದರೂ ಇದ್ದರೆ ಅದು ನರೇಂದ್ರ ಮೋದಿ ಒಬ್ಬರೆ. ಸುಳ್ಳುಗಳನ್ನು ಹೇಳಿಕೊಂಡು ಹೆಚ್ಚು ದಿನ ಜನರನ್ನು ವಂಚಿಸಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಮುಖ್ಯ ವಕ್ತಾರ ವಿ.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿದರು.

ನಗರ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 18 ದಿನ ಕುರುಕ್ಷೇತ್ರ ಯುದ್ಧ ನಡೆದಿದೆ. ವೈರಸ್ ವಿರುದ್ಧ ನಾವು 21 ದಿನ ಯುದ್ಧ ಮಾಡೋಣ ಎಂದು ಪ್ರಧಾನಿ ಮೋದಿ 2020ರ ಮಾರ್ಚ್ 20ರಂದು ಹೇಳಿದ್ದರು. ಅವತ್ತು ಕೇವಲ 565 ಪಾಸಿಟಿವ್ ಪ್ರಕರಣಗಳಿದ್ದವು. ಇವತ್ತು ಎಷ್ಟು ಕೋಟಿ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ? ಮೂರು ಲಕ್ಷ ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ. ಇದು ಮೋದಿ ದೇಶದ ಜನತೆಗೆ ಹೇಳಿದ ಮಹಾಸುಳ್ಳು ಎಂದು ಕಿಡಿಕಾರಿದರು.

ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಸುಮಾರು 39 ಸಾವಿರ ಕೋಟಿ ಕಿಕ್‌ಬ್ಯಾಕ್ ಪಡೆಯಲಾಗಿದೆ. ಈ ಹಣ ಮೋದಿ ಮೂಲಕವೇ ಅದಾನಿ, ಅಂಬಾನಿ ಕುಟುಂಬಕ್ಕೆ ತಲುಪಿದೆ ಎಂದು ಆರೋಪಿಸಿದರು.

ನರೇಂದ್ರ ಮೋದಿ ಅವರ ಇಮೇಜ್ ಶೇ.64ರಿಂದ 65 ಇತ್ತು. ಈಗ ಅದು ಶೇ.24ಕ್ಕೆ ಕುಸಿದಿದೆ. ಮೋದಿ ಇಮೇಜ್ ಕುಸಿದಿರುವ ಕಾರಣಕ್ಕಾಗಿಯೇ ಗುಜರಾತಿನಲ್ಲಿ ಮೊದಲ ಸಲ ಶಾಸಕರಾಗಿರುವ ಭೂಪೇಂದ್ರ ಪಟೇಲ್ ಅವರನ್ನು ಸಿಎಂ ಮಾಡಲಾಗಿದೆ. ತೈಲಬೆಲೆ ಏರಿಕೆ ವಿರುದ್ಧ ಜನರ ಆಕ್ರೋಶವನ್ನು ತಪ್ಪು ದಾರಿಗೆ ಎಳೆಯಲು ಬಿಜೆಪಿ ಮುಖಂಡರು ವ್ಯವಸ್ಥಿತವಾದ ಸಂಚು ನಡೆಸುತ್ತಿದ್ದಾರೆ ಎಂದು ದೂರಿದರು.

× Chat with us